ETV Bharat / sports

ಆಲ್​​ರೌಂಡರ್​ ರವೀಂದ್ರ ಜಡೇಜಾ ಕಾಲಿಗೆ ಗಾಯ; ಸ್ಕ್ಯಾನಿಂಗ್​​ಗಾಗಿ ಆಸ್ಪತ್ರೆಗೆ ದಾಖಲು

author img

By

Published : Aug 29, 2021, 9:51 AM IST

ಆಂಗ್ಲರ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ 76 ರನ್​​ ಹಾಗೂ ಇನ್ನಿಂಗ್ಸ್​ನಿಂದ ಟೀಂ ಇಂಡಿಯಾ ಸೋಲು ಕಂಡಿದೆ. ಪಂದ್ಯದ 2ನೇ ದಿನದಾಟದ ವೇಳೆ ಆಲ್​​ರೌಂಡರ್​ ರವೀಂದ್ರ ಜಡೇಜಾ ಕಾಲಿಗೆ ಗಾಯ ಮಾಡಿಕೊಂಡಿದ್ದು, ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ravindra-jadeja
ರವೀಂದ್ರ ಜಡೇಜಾ

ನವದೆಹಲಿ: ಟೀಂ ಇಂಡಿಯಾದ ಆಲ್​ರೌಂಡರ್​​ ರವೀಂದ್ರ ಜಡೇಜಾ ಲಾರ್ಡ್ಸ್‌ನಲ್ಲಿ ಇಂಡ್ಲೆಂಡ್‌ ವಿರುದ್ಧ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಜಡೇಜಾ ಅವರನ್ನು ಸ್ಕ್ಯಾನಿಂಗ್​​ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ನ 2ನೇ ದಿನದಾಟದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಕಾಲಿಗೆ ಗಾಯವಾಗಿತ್ತು. ಹೀಗಿದ್ದರೂ ಮತ್ತೆರಡು ದಿನಗಳ ಕಾಲ ಅವರು ಮೈದಾನಕ್ಕಿಳಿದಿದ್ದರು. ಬಳಿಕ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಈ ಕುರಿತು ತಮ್ಮ ಇನ್ಸ್‌ಸ್ಟಾಗ್ರಾಮ್​​ನಲ್ಲಿ ‘ ಇದು ಒಳ್ಳೆಯ ಸ್ಥಳವಲ್ಲ’ ಎಂದು ಬರೆದುಕೊಂಡಿದ್ದಾರೆ. ಆದರೆ ಜಡೇಜಾ ಗಾಯಕ್ಕೆ ಒಳಗಾಗಿರುವುದು ತಂಡ ಮುಂಬರುವ ಪಂದ್ಯಕ್ಕೆ ಅವರನ್ನ ಆಯ್ಕೆ ಮಾಡಲಿದ್ಯಾ ಅಥವಾ ವಿಶ್ರಾಂತಿ ನೀಡಿ ಅವರ ಜಾಗದಲ್ಲಿ ಬೇರೊಬ್ಬ ಆಟಗಾರನಿಗೆ ಅವಕಾಶ ನೀಡಲಿದ್ದಾರಾ ಎಂಬುದನ್ನು ತಿಳಿಸಿಲ್ಲ.

ಜಡೇಜಾಗೆ ಆಗಿರುವ ಗಾಯವನ್ನ ಅಷ್ಟೊಂದು ಗಂಭೀರವಾಗಿಯೂ ಪರಿಗಣಿಸಿಲ್ಲ. ಸೆಪ್ಟೆಂಬರ್ 2ರಿಂದ 4ನೇ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಜಡೇಜಾ ಒಂದು ವೇಳೆ ಲಭ್ಯವಾಗದಿದ್ದರೆ ಅವರ ಜಾಗದಲ್ಲಿ ಸ್ಪಿನ್ನರ್​ ಆರ್.ಅಶ್ವಿನ್ ಅವಕಾಶ ಗಿಟ್ಟಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ; ಟೇಬಲ್​ ಟೆನ್ನಿಸ್‌ನಲ್ಲಿ ಬೆಳ್ಳಿ ಗೆದ್ದು ಭಾವಿನಾ ಪಟೇಲ್ ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.