ETV Bharat / sports

ಜಡೇಜಾ ಎರಡೆರಡು ಅರ್ಧಶತಕ: ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ

author img

By

Published : Jul 23, 2021, 10:31 AM IST

ರವೀಂದ್ರ ಜಡೇಜಾ ಹಾಗೂ ವಿಹಾರಿ ಬ್ಯಾಟಿಂಗ್ ಅಬ್ಬರದಿಂದಾಗಿ ಭಾರತ ತಂಡ ಕೌಂಟಿ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಮುಂದಿನ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ತಂಡ ಸನ್ನದ್ಧವಾಗಿದೆ.

ravindra-jadeja-hits-twin-fifties-as-warm-up-game-ends-in-draw
ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ

ಡರ್ಹಮ್ (ಇಂಗ್ಲೆಂಡ್​)​: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಸೆಲೆಕ್ಟ್​ ಇಲೆವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡಿದ್ದ ಭಾರತ ಇದೀಗ ಪಂದ್ಯವನ್ನ ಡ್ರಾದಲ್ಲಿ ಅಂತ್ಯಗೊಳಿಸಿದೆ. ಆಲ್​ರೌಂಡರ್ ರವೀಂದ್ರ ಜಡೇಜಾರ 2ನೇ ಅರ್ಧಶತಕ ಹಾಗೂ ಹನುಮ ವಿಹಾರಿಯ 43 ರನ್​ಗಳ ನೆರವಿನಿಂದ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಸಮಾಪ್ತಿಗೊಂಡಿದೆ.

ಕೊನೆಯ ದಿನದಾಟದಲ್ಲಿ ಕೌಂಟಿ ಇಲೆವೆನ್ ತಂಡ, ಜಯಗೊಳಿಸಲು 284 ರನ್​ ಗಳಿಸಬೇಕಿತ್ತು. ಆದರೆ, ಕೇವಲ 15.5 ಓವರ್​​ನಲ್ಲಿ 31 ರನ್​ ಗಳಿಸಿ ಡ್ರಾದಲ್ಲಿ ಕೊನೆಗೊಂಡಿತು. ಇದಕ್ಕೂ ಮೊದಲೇ ಭಾರತ 3 ವಿಕೆಟ್ ಕಳೆದುಕೊಂಡು 192 ರನ್​​​ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ದ್ವಿತೀಯ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​​​​ಗೆ ಇಳಿದ ಚೇತೇಶ್ವರ ಪೂಜಾರಾ ಹಾಗೂ ಮಾಯಾಂಕ್ ಅಗರ್ವಾಲ್ 87 ರನ್​ಗಳ ಜೊತೆಯಾಟ ನೀಡಿದ್ದರು. ಪೂಜಾರ 38 ರನ್ ಸಿಡಿಸಿದರೆ ಇತ್ತ ಮಯಾಂಕ್ 47 ರನ್ ಗಳಿಸಿ ವಿಕೆಟ್​ ಒಪ್ಪಿಸಿ ಅರ್ಧ ಶತಕದಿಂದ ವಂಚಿತರಾದರು. ಬಳಿಕ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ 84 ರನ್​ ಜೊತೆಯಾಟ ನೀಡಿ ತಂತದ ಮೊತ್ತ ಹೆಚ್ಚಿಸಿದರು.

ಇದ್ರಲ್ಲಿ ಜಡೇಜಾ 77 ಬಾಲ್​​ ಎದುರಿಸಿ 51 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ತಂಡ 192 ರನ್​ಗಳಿಸಿ 284 ರನ್​ಗಳ ಟಾರ್ಗೆಟ್ ನೀಡಿದಾಗ ಡಿಕ್ಲೇರ್ ಮಾಡಲು ನಿರ್ಧರಿಸಿದ್ದರು. ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೂ ಅರ್ಧ ಶತಕ ದಾಖಲಿಸಿದ್ದ ಜಡೇಜಾ 2ನೇ ಇನ್ನಿಂಗ್ಸ್​ನಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಓದಿ: IND vs SL ODI: ಮೂರನೇ ಪಂದ್ಯದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.