ETV Bharat / sports

ಕೊಹ್ಲಿ ಪಡೆ 3-2ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿ ಗೆಲ್ಲಲು ಅವಕಾಶವಿದೆ : ದ್ರಾವಿಡ್ ಭವಿಷ್ಯ

author img

By

Published : May 9, 2021, 9:10 PM IST

ಭಾರತೀಯರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ನಂತರ ಇಡೀ ತಿಂಗಳು ಇಂಗ್ಲೆಂಡ್​ನಲ್ಲಿರಲಿದ್ದಾರೆ. ಟೆಸ್ಟ್​ ಸರಣಿಗೆ ತಯಾರಾಗಲು ಯಾವುದೇ ತಂಡ ಈ ರೀತಿಯ ಸಮಯವನ್ನು ಹೊಂದಿರುತ್ತದೆ ಎಂದು ನಾನು ಭಾವಿಸುವುದಿಲ್ಲ..

ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ಮುಂಬೈ : ಇಂಗ್ಲೆಂಡ್ ವಿರುದ್ದ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿಯನ್ನು ಗೆದ್ದಿರುವ ಕೊನೆಯ ಭಾರತ ತಂಡದ ನಾಯಕನಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್​, ಮುಂಬರುವ ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಭಾರತ 3-2ರಲ್ಲಿ ಗೆಲ್ಲುವ ಅದ್ಭುತ ಅವಕಾಶವಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡದ ನಡುವೆ ಟೆಸ್ಟ್​ ಸರಣಿಯನ್ನಾಡಲಿದೆ. ಈ ಸರಣಿಯಲ್ಲಿ ಎರಡೂ ತಂಡಗಳ ನಡುವೆ ಕಠಿಣ ಸ್ಪರ್ಧೆ ಕಂಡು ಬರಲಿದೆ.

ಈ ಸರಣಿಯನ್ನು ನೋಡಲು ಅದ್ಭುತವೆನಿಸಲಿದೆ ಎಂದು ದ್ರಾವಿಡ್ ಏಡ್ ಇಂಡಿಯಾ(Aid India) ಆಯೋಜಿಸಿದ್ದ ವೆಬಿನಾರ್​ನಲ್ಲಿ ಹೇಳಿದ್ದಾರೆ.

ಈ ಬಾರಿ ಭಾರತಕ್ಕೆ ಸರಣಿ ಗೆಲ್ಲಲು ತುಂಬಾ ಒಳ್ಳೆಯ ಅವಕಾಶ ಸಿಕ್ಕಿದೆ. ಇಂಗ್ಲೆಂಡ್​ ಬೌಲಿಂಗ್​ ದಾಳಿಯಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಸೀಮ್​ ಬೌಲಿಂಗ್ ದಾಳಿ ಅದ್ಭುತವಾಗಿರುತ್ತದೆ. ಅವರು ಸಾಕಷ್ಟು ಆಟಗಾರರನ್ನು ಮತ್ತು ಆಯ್ಕೆಗಳನ್ನು ಹೊಂದಿದ್ದಾರೆ. ಆಯ್ಕೆ ನಿಜಕ್ಕೂ ಭಯಂಕರವಾಗಿರುತ್ತದೆ ಎಂದಿದ್ದಾರೆ.

ಅವರ ಟಾಪ್ 6 ಅಥವಾ 7ಗಳತ್ತ ನೋಡುವುದಾದರೆ ಅತ್ಯುತ್ತಮ ಬ್ಯಾಟ್ಸ್​ಮನ್​ ಆದ ಜೋ ರೂಟ್ ಮತ್ತು ಬೆನ್​ ಸ್ಟೋಕ್ಸ್​ರನ್ನು ಹೊಂದಿದ್ದಾರೆ. ಆದರೆ, ಅಶ್ವಿನ್ ಕೆಲ ಕಾರಣಗಳಿಂದಾಗಿ ಸ್ಟೋಕ್ಸ್​ ವಿರುದ್ಧ ಮೇಲುಗೈ ಸಾಧಿಸಬಹುದು. ಅವರಿಬ್ಬರ ನಡುವಿನ ಸ್ಪರ್ಧೆ ರೋಚಕವಾಗಿರುತ್ತದೆ.

ಆದರೆ, ಭಾರತ ಕೂಡ ಈ ಸರಣಿಗೆ ಅತ್ಯುತ್ತಮವಾಗಿ ತಯಾರಾಗಲಿದೆ ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯಾದಲ್ಲಿನ ಸರಣಿ ನಂತರ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಒಂದೆರಡು ಆಟಗಾರರು ಈಗಾಗಲೇ ಕೆಲವು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ.

ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಅನುಭವವಿದೆ. ಆದ್ದರಿಂದ ಈ ಬಾರಿ ಸರಣಿ ಗೆಲ್ಲುವುದಕ್ಕೆ ಅತ್ಯುತ್ತಮ ಅವಕಾಶವಾಗಿದೆ. ಬಹುಶಃ 3-2ರಲ್ಲಿ ಸರಣಿ ಭಾರತದ ಪಾಲಾಗಬಹುದು ಎಂದು ಟೀಂ ಇಂಡಿಯಾ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ನಂತರ ಇಡೀ ತಿಂಗಳು ಇಂಗ್ಲೆಂಡ್​ನಲ್ಲಿರಲಿದ್ದಾರೆ. ಟೆಸ್ಟ್​ ಸರಣಿಗೆ ತಯಾರಾಗಲು ಯಾವುದೇ ತಂಡ ಈ ರೀತಿಯ ಸಮಯವನ್ನು ಹೊಂದಿರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:'ಪಾಂಡ್ಯರನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ಕಾಣಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.