ETV Bharat / sports

ದ್ರಾವಿಡ್ ಸರ್ ಯಾವಾಗಲೂ ತಮ್ಮಂತೆ ಆಡಿ ಎಂದು ಒತ್ತಾಯಿಸುತ್ತಿರಲಿಲ್ಲ: ಪೃಥ್ವಿ ಶಾ

author img

By

Published : May 25, 2021, 8:48 PM IST

ದ್ರಾವಿಡ್​ 2018ರಲ್ಲಿ ಅಂಡರ್​ 19 ವಿಶ್ವಕಪ್ ಗೆದ್ದ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರೆ, ಪೃಥ್ವಿ ಶಾ ನಾಯಕನಾಗಿದ್ದರು. ದ್ರಾವಿಡ್​ ಕೋಚ್​ ಆಗಿದ್ದ ವೇಳೆ ಶಿಸ್ತನ್ನು ಒತ್ತಾಯಿಸುತ್ತಿದ್ದರು, ಜೊತೆಗೆ ಸ್ನೇಹ ಪರರಾಗಿದ್ದರು ಎಂದು ಶಾ ಹೇಳಿದ್ದಾರೆ.

ಪೃಥ್ವಿ ಶಾ ರಾಹುಲ್ ದ್ರಾವಿಡ್​
ಪೃಥ್ವಿ ಶಾ ರಾಹುಲ್ ದ್ರಾವಿಡ್​

ನವದೆಹಲಿ: ರಾಹುಲ್ ದ್ರಾವಿಡ್​ ಯಾವಾಗಲೂ ನನಗೆ ನನ್ನ ನೈಸರ್ಗಿಕ ಆಕ್ರಮಣಕಾರಿ ಆಟಕ್ಕೆ ಒತ್ತುಕೊಡು ಎಂದು ಸಲಹೆ ನೀಡುತ್ತಿದ್ದರೂ ಹಾಗೂ ತಮ್ಮ ಅಥವಾ ಯಾವುದೇ ಮಾಜಿ ಕ್ರಿಕೆಟಿಗರನ್ನು ಕಾಪಿ ಮಾಡುವ ಅಗತ್ಯವಿಲ್ಲ ಎನ್ನುತ್ತಿದ್ದರು ಎಂದು ಭಾರತ ತಂಡದ ಭವಿಷ್ಯದ ಸ್ಟಾರ್​ ಆಟಗಾರ ಪೃಥ್ವಿ ಶಾ ಹೇಳಿದ್ದಾರೆ.

" ನಾವು ರಾಹುಲ್ ಸರ್ ಅವರೊಂದಿಗೆ ಸುಮಾರು ಎರಡು ವರ್ಷಗಳ ಕಾಲ (2018 ರ 19 ವರ್ಷದೊಳಗಿನವರ ವಿಶ್ವಕಪ್‌ಗೆ ಮುಂಚಿತವಾಗಿ) ಪ್ರವಾಸ ಮಾಡಿದ್ದೆವು. ಅವರಿಗಿಂತ ನಾವು ತುಂಬಾ ವಿಭಿನ್ನರು ಎಂದು ಅವರಿಗೆ ತಿಳಿದಿತ್ತು. ಆದರೆ, ಅವರು ನಮ್ಮನ್ನು ಎಂದಿಗೂ ಅವರಂತೆ (ದ್ರಾವಿಡ್​) ಇರಬೇಕು ಎಂದು ಒತ್ತಾಯಿಸುತ್ತಿರಲಿಲ್ಲ. ಅವರು ನನ್ನ ಆಟವನ್ನು ಎಂದಿಗೂ ಬದಲಾಯಿಸಲು ಹೇಳುತ್ತಿರಲಿಲ್ಲ. ನನ್ನ ನೈಸರ್ಗಿಕ ಆಟವನ್ನು ಆಡಲು ಪ್ರೋತ್ಸಾಹಿಸುತ್ತಿದ್ದರು. ಏಕೆಂದರೆ ನಾನು ಪವರ್‌ಪ್ಲೇ ಓವರ್‌ಗಳನ್ನು ಯಶಸ್ವಿಯಾಗಿ ಆಡಿದರೆ ನನ್ನನ್ನು ಔಟ್ ಮಾಡುವುದು ಕಷ್ಟ ಎಂದು ಅವರು ತಿಳಿದಿದ್ದರು" ಎಂದು ಶಾ ಕ್ರಿಕ್ ​ಬಜ್​ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದ್ರಾವಿಡ್​ 2018ರಲ್ಲಿ ಅಂಡರ್​ 19 ವಿಶ್ವಕಪ್ ಗೆದ್ದ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರೆ, ಪೃಥ್ವಿ ಶಾ ನಾಯಕನಾಗಿದ್ದರು. ದ್ರಾವಿಡ್​ ಕೋಚ್​ ಆಗಿದ್ದ ವೇಳೆ ಶಿಸ್ತನ್ನು ಒತ್ತಾಯಿಸುತ್ತಿದ್ದರು, ಜೊತೆಗೆ ಸ್ನೇಹಪರರಾಗಿದ್ದರು ಎಂದು ಶಾ ಹೇಳಿದ್ದಾರೆ.

"ರಾಹುಲ್ ಸರ್ ನಮ್ಮ ಸುತ್ತ ಇದ್ದಾಗ, ನೀವು ಶಿಸ್ತು ಬದ್ಧವಾಗಿರಬೇಕು. ಅವನ ಬಗ್ಗೆ ಸ್ವಲ್ಪ ಭಯವೂ ಇತ್ತು. ಆದರೆ, ಮೈದಾನದಿಂದ ಹೊರಗಡೆ ಅವರು ನಮ್ಮೊಂದಿಗೆ ತುಂಬಾ ಸ್ನೇಹಪರರಾಗಿದ್ದರು. ಅವರು ನಮ್ಮೊಂದಿಗೆ ಊಟಕ್ಕೆ ಕೂರುತ್ತಿದ್ದರು. ನಮಗೆ ಅವರಂತಹ ದಂತಕತೆಯೊಂದಿಗೆ ಕುಳಿತು ಊಟ ಮಾಡುವ ಕನಸು ಆ ಸಮಯದಲ್ಲಿ ನನಸಾಗಿತ್ತು. ಅಲ್ಲದೇ 15-16 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿರುವ ಲೆಜೆಂಡ್​ಗಳೊಂದಿಗೆ ಆಡುವುದು ಪ್ರತಿಯೊಬ್ಬ ಯುವ ಕ್ರಿಕೆಟಿಗ ಇಷ್ಟಪಡುತ್ತಾನೆ. ಅವರೊಂದಿಗೆ ಮಾತನಾಡುವುದು ನಿಜಕ್ಕೂ ಅದ್ಭುತ ಅನುಭವ " ಎಂದು ಮುಂಬೈ ಆಟಗಾರ ಹೇಳಿದ್ದಾರೆ.

ಇದನ್ನು ಓದಿ: ಇಂಗ್ಲೆಂಡ್ ಸರಣಿಯಲ್ಲಿ ಬದಲಾವಣೆಯಿಲ್ಲ: ಸೆಪ್ಟೆಂಬರ್​ನ 3ನೇ ವಾರದಲ್ಲಿ ಐಪಿಎಲ್​ ಪುನಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.