ETV Bharat / sports

ಅಭ್ಯಾಸ ಪಂದ್ಯ: ಲೀಸೆಸ್ಟರ್‌ಶೈರ್ ವಿರುದ್ಧ 82 ರನ್​ಗಳ ಮುನ್ನಡೆ ಪಡೆದ ಟೀಂ ಇಂಡಿಯಾ

author img

By

Published : Jun 25, 2022, 7:53 AM IST

ಮೊದಲ ಇನ್ನಿಂಗ್ಸ್​ನಲ್ಲಿ ಲೀಸೆಸ್ಟರ್‌ಶೈರ್ ತಂಡವನ್ನು ಭಾರತದ ಬೌಲರ್​ಗಳು 244 ರನ್‌ಗಳಿಗೆ ಸೀಮಿತಗೊಳಿಸಿದರು. 2ನೇ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಇನ್ನಿಂಗ್ಸ್​ ಆರಂಭಿಸದೇ ರೋಹಿತ್ ಶರ್ಮಾ, ತಮ್ಮ ಬದಲಿಗೆ ವಿಕೆಟ್​ ಕೀಪರ್​​​​​​​​​​​​​​ ಕೆ ಎಸ್​​​​​​ ಭರತ್​ ಅವರಿಗೆ ಅವಕಾಶ ಕಲ್ಪಿಸಿದರು. ಭರತ್​ ಮೊದಲ ಇನ್ನಿಂಗ್ಸ್​ನಲ್ಲಿ ಔಟಾಗದೇ 70 ರನ್​ ಬಾರಿಸಿ ಗಮನ ಸೆಳೆದಿದ್ದರು.

Practice match, Day 2: India lead by 82 runs at stumps, Pant shines for Leicestershire
ಅಭ್ಯಾಸ ಪಂದ್ಯ: ಲೀಸೆಸ್ಟರ್‌ಶೈರ್ ವಿರುದ್ಧ 82 ರನ್​ಗಳ ಮುನ್ನಡೆ ಪಡೆದ ಟೀಂ ಇಂಡಿಯಾ

ಲೀಸೆಸ್ಟರ್( ಇಂಗ್ಲೆಂಡ್​): ಭಾರತ ಕ್ರಿಕೆಟ್​ ತಂಡ ಬಾಕಿ ಉಳಿದಿರುವ ಒಂದು ಟೆಸ್ಟ್​ ಪಂದ್ಯ ಆಡಲು ಇಂಗ್ಲೆಂಡ್​ ಪ್ರವಾಸದಲ್ಲಿದೆ. ಕೊನೆ ಟೆಸ್ಟ್​ ಪಂದ್ಯಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಕೌಂಟಿ ಕ್ಲಬ್ ವಿರುದ್ಧ ಭಾರತ 82 ರನ್‌ಗಳ ಮುನ್ನಡೆ ಸಾಧಿಸಿದೆ. 2 ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್​ ನಷ್ಟಕ್ಕೆ 80 ರನ್​ ಗಳಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಲೀಸೆಸ್ಟರ್‌ಶೈರ್ ತಂಡವನ್ನು ಭಾರತದ ಬೌಲರ್​ಗಳು 244 ರನ್‌ಗಳಿಗೆ ಸೀಮಿತಗೊಳಿಸಿದರು. 2ನೇ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಇನ್ನಿಂಗ್ಸ್​ ಆರಂಭಿಸದೇ ವಿಕೆಟ್​ ಕೀಪರ್​​​​​​​​​​​​​​ ಕೆ ಎಸ್​​​​​​ ಭರತ್​ ಅವರಿಗೆ ಅವಕಾಶ ಕಲ್ಪಿಸಿದರು. ಭರತ್​ ಮೊದಲ ಇನ್ನಿಂಗ್ಸ್​ನಲ್ಲಿ ಔಟಾಗದೇ 70 ರನ್​ ಬಾರಿಸಿ ಗಮನ ಸೆಳೆದಿದ್ದರು.

ಭರತ್‌ ಅವರು ಮೊದಲ ಇನ್ನಿಂಗ್ಸ್​ನಲ್ಲಿ ಆಡಿದಂತೆ ಎರಡನೇ ಇನ್ನಿಂಗ್ಸ್​​ನಲ್ಲೂ ಆಕರ್ಷಕ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಭರತ್ (31) ಮತ್ತು ಹನುಮ ವಿಹಾರಿ (9) ರನ್​ಗಳಿಸಿ ಅಜೇಯರಾಗಿ ಉಳಿದಿದ್ದು 3ನೇ ದಿನದಾಟ ಆರಂಭಿಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಭಾರತ 246 ಡಿಕ್ಲೇರ್​​ (ಕೆಎಸ್ ಭರತ್ 70, ವಾಕರ್ 5-24) ಮತ್ತು 1 ವಿಕೆಟ್‌ಗೆ 80 (ಗಿಲ್ 38, ಭರತ್ ಔಟಾಗದೇ 31) ಲೀಸೆಸ್ಟರ್‌ಶೈರ್ 244 (ಪಂತ್ 76, ಜಡೇಜಾ 3-28, ಶಮಿ 3-42) 82 ರನ್​ಗಳ ಮುನ್ನಡೆ ಸಾಧಿಸಿರುವ ಭಾರತ.

ಇದನ್ನು ಓದಿ:ರಣಜಿ ಟ್ರೋಫಿ ಫೈನಲ್​-3ನೇ ದಿನ: ಮಧ್ಯಪ್ರದೇಶದ ಶುಭಂ-ಯಶ್​ ದುಬೆ ಶತಕದ ಸೊಗಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.