ನವದೆಹಲಿ: ಏಷ್ಯನ್ ಗೇಮ್ಸ್ 2023ರಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದ್ದಾರೆ. ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾವನ್ನು 19 ರನ್‌ಗಳಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತು.
"ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಚಿನ್ನ ಗೆದ್ದುಕೊಂಡಿರುವ ನಮ್ಮ ಕ್ರಿಕೆಟ್ ತಂಡ ಎಂತಹ ಅದ್ಧೂರಿ ಪ್ರದರ್ಶನ ನೀಡಿದೆ. ಅವರ ಅದ್ಭುತ ಸಾಧನೆಯಿಂದ ದೇಶವೇ ಸಂಭ್ರಮಿಸಿದೆ. ನಮ್ಮ ಹೆಣ್ಣುಮಕ್ಕಳು ತಮ್ಮ ಪ್ರತಿಭೆ, ಛಲ, ಕೌಶಲ್ಯ ಮತ್ತು ಸಾಂಘಿಕ ಪ್ರದರ್ಶನದಿಂದ ಕ್ರೀಡಾ ಕ್ಷೇತ್ರದಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಾರೆ. ನಿಮ್ಮ ಗೆಲುವಿಗೆ ಅಭಿನಂದನೆಗಳು," ಎಂದು ಪ್ರಧಾನಿ ಹೇಳಿದ್ದಾರೆ.
-
A historic selfie 🤳 with the 𝙂𝙊𝙇𝘿 𝙈𝙀𝘿𝘼𝙇𝙇𝙄𝙎𝙏𝙎 🥇👌🏻#TeamIndia | #AsianGames | #IndiaAtAG22 pic.twitter.com/zLQkMRD36W
— BCCI Women (@BCCIWomen) September 25, 2023 " class="align-text-top noRightClick twitterSection" data="
">A historic selfie 🤳 with the 𝙂𝙊𝙇𝘿 𝙈𝙀𝘿𝘼𝙇𝙇𝙄𝙎𝙏𝙎 🥇👌🏻#TeamIndia | #AsianGames | #IndiaAtAG22 pic.twitter.com/zLQkMRD36W
— BCCI Women (@BCCIWomen) September 25, 2023A historic selfie 🤳 with the 𝙂𝙊𝙇𝘿 𝙈𝙀𝘿𝘼𝙇𝙇𝙄𝙎𝙏𝙎 🥇👌🏻#TeamIndia | #AsianGames | #IndiaAtAG22 pic.twitter.com/zLQkMRD36W
— BCCI Women (@BCCIWomen) September 25, 2023
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ "ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಪ್ರಬಲ ಗೆಲುವಿನೊಂದಿಗೆ ಚಿನ್ನವನ್ನು ಗೆದ್ದುಕೊಂಡಿತು, 18 ವರ್ಷ ವಯಸ್ಸಿನ ಟೈಟಾಸ್ ಸಾಧು ಅವರ ಬೌಲಿಂಗ್ ಅದ್ಭುತ (6ಕ್ಕೆ 3). ಈ ಐತಿಹಾಸಿಕ ಸಾಧನೆಗಾಗಿ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪಂದ್ಯದಲ್ಲಿ: ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು, ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಟ್ರ್ಯಾಕ್‌ನಲ್ಲಿ 116 ರನ್‌ಗಳನ್ನು ಕಲೆಹಾಕಿದರು. ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ (46) ಮತ್ತು ಜೆಮ್ಮಿಮಾ ರೋಡ್ರಿಗಸ್ (42) 73 ರನ್‌ಗಳ ಜೊತೆಯಾಟವನ್ನು ಭಾರತಕ್ಕೆ ಗೌರವಾನ್ವಿತ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು.
-
A moment to remember FOREVER!
— SAI Media (@Media_SAI) September 25, 2023 " class="align-text-top noRightClick twitterSection" data="
Watch the 🇮🇳 Women's Cricket Team as they stand tall on the podium, 🥇 gleaming around their necks at #AsianGames2022
Their journey to this gold has been full of determination & dedication!
Congratulations to this Incredible Team, who have made… pic.twitter.com/zta2PoDmaA
">A moment to remember FOREVER!
— SAI Media (@Media_SAI) September 25, 2023
Watch the 🇮🇳 Women's Cricket Team as they stand tall on the podium, 🥇 gleaming around their necks at #AsianGames2022
Their journey to this gold has been full of determination & dedication!
Congratulations to this Incredible Team, who have made… pic.twitter.com/zta2PoDmaAA moment to remember FOREVER!
— SAI Media (@Media_SAI) September 25, 2023
Watch the 🇮🇳 Women's Cricket Team as they stand tall on the podium, 🥇 gleaming around their necks at #AsianGames2022
Their journey to this gold has been full of determination & dedication!
Congratulations to this Incredible Team, who have made… pic.twitter.com/zta2PoDmaA
ಇದಕ್ಕೆ ಉತ್ತರವಾಗಿ ಶ್ರೀಲಂಕಾ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು. ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಹಾಸಿನಿ ಪರೇರಾ (25) ಮತ್ತು ನೀಲಾಕ್ಷಿ ಡಿ ಸಿಲ್ವಾ (23) ಶ್ರೀಲಂಕಾವನ್ನು ಗುರಿಯನ್ನು ಗೆಲ್ಲಲು ಸತತ ಪ್ರಯತ್ನ ಪಟ್ಟರಾದರು ಸಫಲತೆ ಸಿಗಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್‌ಗಳನ್ನು ಕಳೆದುಕೊಂಡು ಲಂಕಾ ತಂಡ 97 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರಿಂದ ಭಾರತ 19 ರನ್ ಸುಲಭ ಜಯ ಸಾಧಿಸಿತು.
-
Indian women's cricket team wins Gold at the #AsianGames with a dominant win over Sri Lanka, led by 18-year-old sensation #TitasSadhu's bowling brilliance (3 for 6). Congratulations to the team and support staff for this historic achievement! 🇮🇳 @BCCIWomen pic.twitter.com/md78olzIxS
— Jay Shah (@JayShah) September 25, 2023 " class="align-text-top noRightClick twitterSection" data="
">Indian women's cricket team wins Gold at the #AsianGames with a dominant win over Sri Lanka, led by 18-year-old sensation #TitasSadhu's bowling brilliance (3 for 6). Congratulations to the team and support staff for this historic achievement! 🇮🇳 @BCCIWomen pic.twitter.com/md78olzIxS
— Jay Shah (@JayShah) September 25, 2023Indian women's cricket team wins Gold at the #AsianGames with a dominant win over Sri Lanka, led by 18-year-old sensation #TitasSadhu's bowling brilliance (3 for 6). Congratulations to the team and support staff for this historic achievement! 🇮🇳 @BCCIWomen pic.twitter.com/md78olzIxS
— Jay Shah (@JayShah) September 25, 2023
ಭಾರತದ ವೇಗಿ ಟೈಟಾಸ್ ಸಾಧು ತಮ್ಮ ನಾಲ್ಕು ಓವರ್‌ಗಳಲ್ಲಿ 6 ರನ್ ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಕಬಳಿಸಿದರು, ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಕಬಳಿಸಿದರು. ಈ ಮೂಲಕ ಭಾರತದ ವನಿತೆಯರ ತಂಡ ಏಷ್ಯನ್ ಗೇಮ್ಸ್ ಮತ್ತು ಏಷ್ಯಾಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.