ETV Bharat / sports

ದಾಂಪತ್ಯಕ್ಕೆ ಕಾಲಿಟ್ಟ ಪಾಕಿಸ್ತಾನ ಕ್ರಿಕೆಟಿಗ ಶಾಹೀನ್​ ಅಫ್ರಿದಿ ಮತ್ತು ಅನ್ಶಾ ಜೋಡಿ..

author img

By

Published : Feb 4, 2023, 11:19 AM IST

Updated : Feb 4, 2023, 11:27 AM IST

ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹೀನ್​ ಅಫ್ರಿದಿ ಮತ್ತು ಅನ್ಶಾ ಶುಕ್ರವಾರ ವಿವಾಹವಾಗಿದ್ದಾರೆ.

Pakistan
ಪಾಕಿಸ್ತಾನ ಕ್ರಿಕೆಟಿಗ ಶಾಹೀನ್​ ಅಫ್ರಿದಿ ಮತ್ತು ಅನ್ಶಾ

ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶಾಹೀನ್​ ಅಫ್ರಿದಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಮಾಜಿ ಹಿರಿಯ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಪುತ್ರಿ ಅನ್ಶಾ ಜೊತೆ ವಿವಾಹವಾಗಿದ್ದಾರೆ. ಶಾಹೀನ್​ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್​ ಆಗುತ್ತಿದೆ. ಅವರ ಅಭಿಮಾನಿಗಳು ಕಮೆಂಟ್​ ಮೂಲಕ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.

pakistan
ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪಾಕಿಸ್ತಾನ ಕ್ರಿಕೆಟಿಗ ಶಾಹೀನ್​ ಅಫ್ರಿದಿ

ಶಾಹೀನ್​ ಕುಟುಂಬ ಮದುವೆಗಾಗಿ ಎರಡು ದಿನಗಳ ಮುಂಚಿತವಾಗಿ ಕರಾಚಿಗೆ ತಲುಪಿದ್ದರು. ಈ ಜೋಡಿಯ ಮೆಹಂದಿ ಕಾರ್ಯಕ್ರಮವು ಗುರುವಾರ ರಾತ್ರಿ ನಡೆಯಿತು. ನಿನ್ನೆ ವಿವಾಹ ನೆರವೇರಿದ್ದು, ಬಳಿಕ ಆರತಕ್ಷತೆ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಮ್​, ಸರ್ಫರಾಜ್​ ಅಹ್ಮದ್​, ನಜೀಮ್​ ಶಾ, ಶದಾಬ್​ ಖಾನ್​ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ದಾಂಪತ್ಯಕ್ಕೆ ಕಾಲಿರಿಸಿದ ಶಾಹೀನ್​- ಅನ್ಶಾ ಜೋಡಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರ​ ಶಾಹೀನ್​ ಅಫ್ರಿದಿ ವೇಗದ ಬೌಲಿಂಗ್​​ನಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆದರೆ ಕೆಲವು ದಿನಗಳಿಂದ ಅವರ ಮದುವೆ ವಿಷಯವೇ ಹೆಚ್ಚು ಟ್ರೆಂಡಿಯಾಗಿದೆ. ಕೊನೆಗೂ ಶಾಹೀನ್​ ಮತ್ತು ಅನ್ಶಾ ಫೆಬ್ರವರಿ 3, ಶುಕ್ರವಾರದಂದು ಕರಾಚಿಯಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದು, ಈ ಚರ್ಚೆಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಮುಸ್ಲಿಂ ಅಚರಣೆಗಳನ್ನು ಪರಸ್ಪರ ಒಪ್ಪಿ ಅವರ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಜೋಡಿ ಕಳೆದ 2 ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಅವರ ನಿಕ್ಕಾಹ್​(ಮದುವೆ) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಇದನ್ನು ಕಂಡ ನೆಟ್ಟಿಗರಂತು ಫುಲ್​ ಖುಷ್​ ಆಗಿದ್ದಾರೆ.

ಇದನ್ನೂ ಓದಿ: ಅಂಡರ್​ 19 ವನಿತೆಯರ ವಿಶ್ವಕಪ್​: ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಕ್ರಿಕೆಟ್​ ಆಟಗಾರರಿಂದ ದಂಪತಿಗೆ ಶುಭಾಶಯ: ನವಜೋಡಿಗೆ ಕ್ರಿಕೆಟ್​ ತಾರೆಯರು ಟ್ವಿಟರ್​, ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವನ್ನು ಹಂಚಿಕೊಂಡು ಶುಭಾಶ ಕೋರಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಟೂರ್ನಿಯ ಲಾಹೋರ್ ಖಲಂದರ್ ಫ್ರಾಂಚೈಸಿಯು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶಾಹೀನ್ ಅಫ್ರಿದಿ ಅವರ ವಿವಾಹದ ಫೋಟೋಗಳನ್ನು ಹಂಚಿಕೊಂಡು ವಿಶ್​ ಮಾಡಿದೆ. ಅಲ್ಲದೇ ಲಾಹೋರ್ ಖಲಂದರ್ಸ್‌ನ ಇತರ ಆಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.

ಅಥಿಯಾ ಕೈ ಹಿಡಿದ ಕ್ರಿಕೆಟಿಗ ಕೆ.ಎಲ್​ ರಾಹುಲ್​​: ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆ.ಎಲ್​ ರಾಹುಲ್​ ಜನವರಿ 26ರಂದು ಹಸೆಮಣೆ ಏರಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ಬಾಲಿವುಡ್​ ಹಿರಿಯ ನಟ, ಅಥಿಯಾ ಶೆಟ್ಟಿ ಅವರ ತಂದೆ ಸುನಿಲ್​ ಶೆಟ್ಟಿ ಅವರ ಐಶಾರಾಮಿ ಫಾರ್ಮ್‌ ಹೌಸ್‌ನಲ್ಲಿ ಕುಟುಂಬ ಮತ್ತು ಸ್ನೇಹಿತರು ಸೇರಿ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ನಾಲ್ಕು ವರ್ಷದ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

ಇದನ್ನೂ ಓದಿ: ರಣಜಿ: ಉತ್ತರಾಖಂಡ ಮಣಿಸಿ ಸೆಮಿಫೈನಲ್‌ಗೇರಿದ ಕರ್ನಾಟಕ; ಗೋಪಾಲ್​ 'ಪಂದ್ಯಶ್ರೇಷ್ಠ' ಪ್ರದರ್ಶನ

Last Updated : Feb 4, 2023, 11:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.