ETV Bharat / sports

ಬಾಬರ್ ಅಜಂ ಅಜೇಯ ಶತಕ: ಆಸೀಸ್​ ವಿರುದ್ಧ ಏಕದಿನ ಸರಣಿ ಗೆದ್ದ ಪಾಕಿಸ್ತಾನ

author img

By

Published : Apr 3, 2022, 10:38 AM IST

ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ವಾಸಿಂ ಅವರ ಮಾರಕ ಬೌಲಿಂಗ್ ದಾಳಿ ಮತ್ತು ಬಾಬರ್ ಅಜಮ್ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನವು ಆಸ್ಟ್ರೇಲಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದೆ.

Pak vs Aus: Babar Azam's unbeaten ton drive hosts to 9-wicket win in 3rd ODI
ಬಾಬರ್ ಅಜಂ ಅಜೇಯ ಶತಕ: ಆಸೀಸ್​ ವಿರುದ್ಧ ಏಕದಿನ ಸರಣಿ ಗೆದ್ದ ಪಾಕಿಸ್ತಾನ

ಲಾಹೋರ್(ಪಾಕಿಸ್ತಾನ): ಮೂರನೇ ಮತ್ತು ಅಂತಿಮ ಏಕದಿನ ಕ್ರಿಕೆಟ್​ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಮಣಿಸಿದೆ. ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕ್‌ 9 ವಿಕೆಟ್‌ಗಳಿಂದ ಗೆಲುವಿನ ನಗೆ ಬೀರಿತು. ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ವಾಸಿಂ ತಲಾ ಮೂರು ವಿಕೆಟ್ ಪಡೆದರು.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯೊಂದಿಗೆ ಜಯ ಸಾಧಿಸಿರುವ ಪಾಕ್‌, ಏಕದಿನ ಸರಣಿ ತನ್ನದಾಗಿಸಿಕೊಂಡಿದೆ. ಟಾಸ್​ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ ಪಾಕಿಸ್ತಾನವು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಆ್ಯರನ್ ಫಿಂಚ್ ಅವರನ್ನು ಶೂನ್ಯ ರನ್‌ಗಳಿಗೆ ಔಟ್ ಮಾಡಿತು. ಈ ಮೂಲಕ ಪ್ರವಾಸಿಗರಿಗೆ ಆರಂಭದಲ್ಲೇ ಬಲವಾದ ಪೆಟ್ಟು ನೀಡಿತು. ಆದರೂ ಅಲೆಕ್ಸ್ ಕೇರಿ 56, ಕ್ಯಾಮರೂನ್ ಗ್ರೀನ್ 34, ಸಿಯಾನ್ ಅಬ್ಬಾಟ್ 49, ಬೆನ್ ಮೆಕ್​ಡೆರ್ಮೊಟ್​ 36 ರನ್​ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 41.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 210 ರನ್​ ಗಳಿಸಲಷ್ಟೇ ಸಾಧ್ಯವಾಯಿತು.

ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ವಾಸಿಂ ಜೊತೆಗೆ ಶಾಹಿನ್ ಅಫ್ರಿದಿ 2 ವಿಕೆಟ್, ಜಹೀದ್ ಮೊಹಮದ್ ಮತ್ತು ಇಫ್ತಿಕಾರ್ ಅಹಮದ್ ತಲಾ ಒಂದು ವಿಕೆಟ್ ಪಡೆದಿದ್ದರು. ನಂತರ ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ತಂಡ ಕೇವಲ 37.5 ಓವರ್​ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 214 ರನ್​ ಗಳಿಸಿ ಸರಣಿ ಗೆದ್ದುಕೊಂಡಿತು. ಬಾಬರ್ ಅಜಂ 115, ಇಮಾಮ್ ಉಲ್ ಹಕ್ 89 ಗಳಿಸಿದರೆ, ಫಕಾರ್ ಜಮಾನ್ 17 ರನ್ ಗಳಿಸಿ, ನಥಾನ್ ಎಲ್ಲೀಸ್​ಗೆ ವಿಕೆಟ್ ಒಪ್ಪಿಸಿದ್ದರು. ಏಪ್ರಿಲ್ 5ರಂದು ಇದೇ ಸ್ಟೇಡಿಯಂನಲ್ಲಿ ಉಭಯ ತಂಡಗಳ ಮಧ್ಯೆ ಏಕೈಕ ಚುಟುಕು ಕ್ರಿಕೆಟ್‌ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಮಹಿಳಾ ವಿಶ್ವಕಪ್ ಕ್ರಿಕೆಟ್‌: ​ಇಂಗ್ಲೆಂಡ್-ಆಸ್ಟ್ರೇಲಿಯಾ ಫೈನಲ್‌ ಮ್ಯಾಚ್‌, ಯಾರಿಗೆ ಕಪ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.