ETV Bharat / sports

ಕ್ರಿಕೆಟ್​ನ ಐತಿಹಾಸಿಕ ದಿನ: ಏಕದಿನದಲ್ಲಿ ಇನ್ನೂ ಮುರಿಯಲಾಗಿಲ್ಲ ಈ ದಾಖಲೆ!

author img

By

Published : Mar 12, 2023, 7:30 PM IST

ಏಕದಿನ ಕ್ರಿಕೆಟ್​ಗೆ ಇಂದು ಐತಿಹಾಸಿಕ ದಿನ - ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಗುರಿ ಬೆನ್ನತ್ತಿದ ದಾಖಲೆ - ಎರಡು ಇನ್ನಿಂಗ್ಸ್​ನಿಂದ 872 ರನ್​

one day cricket historical record
ಕ್ರಿಕೆಟ್​ನ ಐತಿಹಾಸಿಕ ದಿನ

ನವದೆಹಲಿ: ಮಾರ್ಚ್ 12 ಏಕದಿನ ಕ್ರಿಕೆಟ್ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆದ ದಿನ ಎಂದರೆ ತಪ್ಪಾಗದು. ಇಂದಿಗೆ ಸರಿಯಾಗಿ 17 ವರ್ಷಗಳ ಹಿಂದೆ ಅಂದರೆ ಮಾರ್ಚ್ 12, 2006 ರಂದು ಏಕದಿನ ಕ್ರಿಕೆಟ್ ಪಂದ್ಯವನ್ನು ಯಾವುದೇ ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲದ ದಿನವಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಏಕದಿನ ಪಂದ್ಯ ಅಂತಹ ನೆನಪನ್ನು ನಮ್ಮ ನಡುವೆ ಬಿತ್ತಿದೆ.

ಪಂದ್ಯದ ಮೊದಲು, ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು ಮತ್ತು ಮೊದಲು ಬ್ಯಾಟಿಂಗ್ ಮಾಡಿದ ಕಾಂಗರೂ ತಂಡವು ಸ್ಕೋರ್​ಬೋರ್ಡ್ನಲ್ಲಿ 434 ರನ್​ಗಳನ್ನು ಕಲೆಹಾಕಿತ್ತು. ಆಗ ನಡೆದದ್ದು, ಪವಾಡಕ್ಕಿಂತ ಕಡಿಮೆ ಏನಲ್ಲ. ಆಸ್ಟ್ರೇಲಿಯಾ ನೀಡಿದ 434 ರನ್‌ಗಳ ಗುರಿಯ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 49.5 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 438 ರನ್ ಗಳಿಸಿ ದಾಖಲೆಯ ಜಯ ಸಾಧಿಸಿತ್ತು.

ಪಂದ್ಯ ಹೀಗಿತ್ತು: ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ 4 ವಿಕೆಟ್ ನಷ್ಟಕ್ಕೆ 434 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ನಾಯಕ ರಿಕಿ ಪಾಂಟಿಂಗ್ 105 ಎಸೆತಗಳಲ್ಲಿ 164 ರನ್‌ಗಳ ಇನಿಂಗ್ಸ್‌ ಆಡಿದ್ದರು. ಅದೇ ಸಮಯದಲ್ಲಿ ಮೈಕಲ್ ಹಸ್ಸಿ 51 ಎಸೆತಗಳಲ್ಲಿ 81 ರನ್ ಗಳಿಸಿದರು. ಈ ಪರ್ವತದಂತಹ ಗುರಿಯನ್ನು ಸಾಧಿಸುವುದು ದಕ್ಷಿಣ ಆಫ್ರಿಕಾಕ್ಕೆ ಸುಲಭವಾಗಿರಲಿಲ್ಲ. ಆದರೆ ಆಫ್ರಿಕನ್ ಬ್ಯಾಟ್ಸ್‌ಮನ್‌ಗಳು ಕೊನೆಯ ಓವರ್‌ನವರೆಗೂ ಬಿಟ್ಟುಕೊಡಲಿಲ್ಲ ಮತ್ತು ಅದ್ಭುತವಾಗಿ ಬ್ಯಾಟಿಂಗ್ ಮಾಡುವಾಗ ಏಕದಿನ ಇತಿಹಾಸದಲ್ಲಿ ಅತಿದೊಡ್ಡ ರನ್ ಚೇಸ್​ ಮಾಡಿ ಇತಿಹಾಸ ಸೃಷ್ಟಿಸಿದರು.

ದಕ್ಷಿಣ ಆಫ್ರಿಕಾ ಪರ ಹರ್ಷಲ್ ಗಿಬ್ಸ್ ಅತಿ ಹೆಚ್ಚು ರನ್ ಗಳಿಸಿದರು. ಗಿಬ್ಸ್ 111 ಎಸೆತಗಳನ್ನು ಎದುರಿಸಿ 175 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಗಿಬ್ಸ್ ಇನ್ನಿಂಗ್ಸ್‌ನಲ್ಲಿ 21 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ನಾಯಕ ಗ್ರೇಮ್ ಸ್ಮಿತ್ ಕೂಡ 90 ರನ್‌ಗಳ ಇನಿಂಗ್ಸ್‌ ಆಡಿದರು ಮತ್ತು ನಂತರ ಕೊನೆಯ ಓವರ್‌ನಲ್ಲಿ, ಆಫ್ರಿಕಾದ ಶ್ರೇಷ್ಠ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮಾರ್ಕ್ ಬೌಚರ್ ಒಂದು ಬೌಂಡರಿ ಬಾರಿಸಿದರು ಮತ್ತು ತಮ್ಮ ತಂಡಕ್ಕೆ ಒಂದು ಎಸೆತ ಬಾಕಿ ಇರುವಂತೆಯೇ ಐತಿಹಾಸಿಕ ಜಯವನ್ನು ತಂದುಕೊಟ್ಟರು. ಈ ಪಂದ್ಯದಲ್ಲಿ ಬೌಚರ್ 50 ರನ್ ಗಳಿಸಿ ಅಜೇಯರಾಗಿದ್ದರು.

ಇಡೀ ಪಂದ್ಯದಲ್ಲಿ 872 ರನ್: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಈ ಐತಿಹಾಸಿಕ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 434 ರನ್ ಗಳಿಸಿದರೆ, ನಂತರ ಯಶಸ್ವಿ ರನ್ ಚೇಸ್ ನಲ್ಲಿ ದಕ್ಷಿಣ ಆಫ್ರಿಕಾ 438 ರನ್ ಗಳಿಸಿತು. ಈ ಮೂಲಕ ಈ ಇಡೀ ಪಂದ್ಯದಲ್ಲಿ ಒಟ್ಟು 872 ರನ್ ಗಳಿಸಿದ್ದು, ಇದು ಇನ್ನೂ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ಸಾಧಿಸಿದ 434 ರನ್‌ಗಳ ಗುರಿಯು ಏಕದಿನ ಕ್ರಿಕೆಟ್‌ನಲ್ಲಿ ಅತಿದೊಡ್ಡ ಯಶಸ್ವಿ ರನ್ ಚೇಸ್ ಆಗಿದೆ. ಈ ಪಂದ್ಯದ ಮತ್ತೊಂದು ವಿಶೇಷವೆಂದರೆ ರಿಕಿ ಪಾಂಟಿಂಗ್ ಮತ್ತು ಹರ್ಷಲ್ ಗಿಬ್ಸ್ ಇಬ್ಬರೂ ಜಂಟಿಯಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ: "ಟೆಸ್ಟ್​" ಪಾಸಾದ ವಿರಾಟ್​ ಕೊಹ್ಲಿ: 28ನೇ ಶತಕ ಸಿಡಿಸಿ ಸಂಭ್ರಮ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.