ETV Bharat / sports

ಬೆನ್ನು ನೋವು: ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ನಿಂದ ಬಿಜೆ ವಾಟ್ಲಿಂಗ್ ಔಟ್​

author img

By

Published : Jun 10, 2021, 5:10 PM IST

ವಾಟ್ಲಿಂಗ್ ಅವರಿಗೆ ಬೆನ್ನು ನೋವು ಸಮಸ್ಯೆಯಾಗಿ ಕಾಡುತ್ತಿದೆ. ಅವರು ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದರೂ ಸಹ ವಿಕೆಟ್ ಹಿಂದೆ ನಿಂತು ಸಂಪೂರ್ಣ ಟೆಸ್ಟ್​ ಪಂದ್ಯದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಅವರಿಗೆ ಇದು ಸಾಕಾಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.

ಬಿಜೆ ವಾಟ್ಲಿಂಗ್
ಬಿಜೆ ವಾಟ್ಲಿಂಗ್

ಬರ್ಮಿಂಗ್​ಹ್ಯಾಮ್: ನ್ಯೂಜಿಲ್ಯಾಂಡ್​ನ ವಿಕೆಟ್​ ಕೀಪರ್ ಕಂ ಬ್ಯಾಟ್ಸ್​ಮನ್ ಬಿಜೆ ವಾಟ್ಲಿಂಗ್ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದಿಂದ ಬೆನ್ನು ನೋವಿನ ಕಾರಣ ಹೊರಬಿದ್ದಿದ್ದಾರೆ. ಇವರ ಬದಲು ಟಾಮ್ ಬ್ಲಂಡೆಲ್​ ಇಂದಿನಿಂದ ಆರಂಭವಾಗಿರುವ ಟೆಸ್ಟ್​ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ಹಿಂದಿನಿಂದಲೂ ವಾಟ್ಲಿಂಗ್ ಅವರಿಗೆ ಬೆನ್ನು ನೋವು ಸಮಸ್ಯೆಯಾಗಿ ಕಾಡುತ್ತಿದೆ. ಅವರು ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದರು ಸಹ ಇದು ವಿಕೆಟ್ ಹಿಂದೆ ನಿಂತು ಸಂಪೂರ್ಣ ಟೆಸ್ಟ್​ ಪಂದ್ಯದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಅವರಿಗೆ ಸಾಕಾಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.

ತಿಂಗಳ ಹಿಂದೆಯಷ್ಟೇ 35 ವರ್ಷದ ಕಿವೀಸ್ ಆಟಗಾರ WTC ಫೈನಲ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಅವರು ಕಿವೀಸ್​ ಪರ 74 ಟೆಸ್ಟ್​, 28 ಏಕದಿನ ಪಂದ್ಯ ಮತ್ತು 5 ಟಿ20 ಪಂದ್ಯಗಳನ್ನಾಡಿದ್ದರು.

ಇಂದು ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಸೇವೆಯನ್ನು ಕೂಡ ನ್ಯೂಜಿಲ್ಯಾಂಡ್ ತಂಡ ಕಳೆದುಕೊಂಡಿದೆ. ಅವರು ಮೊಣಕ್ಕೈ ಗಾಯದ ಕಾರಣ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ದೃಷ್ಟಿಯಿಂದ ಈ ಪಂದ್ಯದಿಂದ ಹೊರಗುಳಿದಿದ್ದು, ಟಾಮ್ ಲ್ಯಾಥಮ್​ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇದನ್ನು ಓದಿ: WTC ಫೈನಲ್​ಗೂ​ ಮುನ್ನ ನೆಟ್ಸ್​ನಲ್ಲಿ ಬೆವರು ಹರಿಸಿದ ಕೊಹ್ಲಿ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.