ETV Bharat / sports

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್‌; ವಿಶ್ವಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ ಭಾರತಕ್ಕೆ ಸವಾಲು

author img

By

Published : Jun 13, 2021, 6:20 PM IST

Updated : Jun 13, 2021, 6:26 PM IST

ಇಂಗ್ಲೆಂಡ್‌ ತಂಡವನ್ನು 122 ರನ್ನುಗಳಿಗೆ ಕಟ್ಟಿ ಹಾಕಿದ ನಂತರ, ಪಂದ್ಯ ಗೆಲ್ಲಲು ಬೇಕಿದ್ದ 38 ರನ್ನುಗಳನ್ನು 10.5 ಓವರ್‌ಗಳಲ್ಲಿ ಅತ್ಯಂತ ಸುಲಭವಾಗಿ ಸಾಧಿಸುವಲ್ಲಿ ಕಿವೀಸ್‌ ಯಶಸ್ವಿಯಾಗಿದೆ. ಈ ಮೂಲಕ 1999 ರ ಬಳಿಕ ಆಂಗ್ಲರ ಮಣ್ಣಿನಲ್ಲಿ ಟೆಸ್ಟ್ ಸರಣಿ ಗೆದ್ದ ಅಪರೂಪದ ಸಾಧನೆಯನ್ನೂ ಟಾಮ್ ಲಾಥಮ್ ಬಳಗ ಮಾಡಿದೆ.

England vs New Zealand
ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್‌

ಬರ್ಮಿಂಗ್‌ಹ್ಯಾಮ್‌(ಇಂಗ್ಲೆಂಡ್): ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ ನ್ಯೂಜಿಲ್ಯಾಂಡ್, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಗೆದ್ದು ತನ್ನ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿದೆ. ಆಂಗ್ಲರ ವಿರುದ್ಧ 2 ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ನ್ಯೂಜಿಲೆಂಡ್‌ ತಂಡ ಅಮೋಘ ಗೆಲುವು ದಾಖಲಿಸಿತು.

ಇಂಗ್ಲೆಂಡ್‌ ತಂಡವನ್ನು 122 ರನ್ನುಗಳಿಗೆ ಕಟ್ಟಿ ಹಾಕಿದ ನಂತರ, ಪಂದ್ಯ ಗೆಲ್ಲಲು ಬೇಕಿದ್ದ 38 ರನ್ನುಗಳನ್ನು 10.5 ಓವರ್‌ಗಳಲ್ಲಿ ಅತ್ಯಂತ ಸುಲಭವಾಗಿ ಸಾಧಿಸುವಲ್ಲಿ ಕಿವೀಸ್‌ ಯಶಸ್ವಿಯಾಗಿದೆ. ಈ ಮೂಲಕ 1999 ರ ಬಳಿಕ ಆಂಗ್ಲರ ಮಣ್ಣಿನಲ್ಲಿ ಟೆಸ್ಟ್ ಸರಣಿ ಗೆದ್ದ ಅಪರೂಪದ ಸಾಧನೆಯನ್ನೂ ಟಾಮ್ ಲಾಥಮ್ ಬಳಗ ಮಾಡಿದೆ.

England vs New Zealand 2021
ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್‌

ಟ್ರೆಂಟ್‌ ಬೌಲ್ಟ್ ಸೇರಿದಂತೆ ಕಿವೀಸ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಕಳೆದ ರಾತ್ರಿ ಕೇವಲ 122 ರನ್ನುಗಳನ್ನು ಮಾಡಲಷ್ಟೇ ಶಕ್ತವಾಯಿತು. ಈ ಮೂಲಕ ಅತ್ಯಂತ ಸಣ್ಣ ಮೊತ್ತವನ್ನು ಕಿವೀಸ್‌ಗೆ ಟಾರ್ಗೆಟ್‌ ಆಗಿ ನೀಡಿತು. ಈ ಗುರಿ ಬೆನ್ನುಟ್ಟುವ ವೇಳೆ ನ್ಯೂಜಿಲೆಂಡ್ ತಂಡದ ಡೇವನ್ ಕಾನ್ವಾಯ್‌, ವಿಲ್‌ ಯಂಗ್‌ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದ್ರೂ ನಾಯಕ ಟಾಮ್ ಲಾಥಮ್‌ ವಿಜಯದ ರನ್‌ ಬಾರಿಸುವುದನ್ನು ತಡೆಯಲು ಇಂಗ್ಲೆಂಡ್‌ ಯಶಸ್ವಿಯಾಗಲಿಲ್ಲ. ಈ ಮೂಲಕ ಇಲ್ಲಿಯವರೆಗೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಸರಣಿ ಗೆದ್ದ ಸಾಧನೆ ಕಿವೀಸ್ ಪಾಲಿಗೆ ದಕ್ಕಿತು.

ನ್ಯೂಜಿಲೆಂಡ್‌ ತಂಡ ಮೊದಲ ಟೆಸ್ಟ್ ಪಂದ್ಯದ ನಂತರ ಆರು ಆಟಗಾರರನ್ನು ಬದಲಿಸಿದೆ. ತಂಡದ ನಾಯಕ ಕೇನ್‌ ವಿಲಿಯಮ್ಸನ್ ಕೂಡ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ಕಿವೀಸ್ ಅದೃಷ್ಟಕ್ಕೆ ತಂಡ ಸೇರಿದ ಅಷ್ಟೂ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದು, ನ್ಯೂಜಿಲೆಂಡ್‌ ಆಯ್ಕೆದಾರರ ತಲೆನೋವು ಕಡಿಮೆ ಮಾಡಿದೆ. ಅದೂ ಕೂಡಾ ಬಲಿಷ್ಠ ಭಾರತದ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸೆಣಸಲಿದ್ದು, ಈ ಗೆಲುವು ಕೂಡಾ ನಿರ್ಣಾಯಕವಾಗಿತ್ತು.

ಇನ್ನು ಇಂಗ್ಲೆಂಡ್‌ ತಂಡ ಈ ಪಂದ್ಯದಿಂದ ಸಾಕಷ್ಟು ಪಾಠಗಳನ್ನು ಕಲಿಯಬೇಕಿರುವುದು ಅನಿವಾರ್ಯ. ಕಳಪೆ ಬ್ಯಾಟಿಂಗ್ ಪ್ರದರ್ಶನ ತಂಡದ ವೈಫಲ್ಯಕ್ಕೆ ಕಾರಣವಾದರೆ, ಕ್ಷೇತ್ರರಕ್ಷಣೆಯಲ್ಲೂ ವೈಫಲ್ಯತೆ ಅನುಭವಿಸಿತು. ಅತ್ಯಂತ ಮಹತ್ವದ ಕ್ಯಾಚ್‌ ಡ್ರಾಪ್‌ ಮಾಡಿರುವುದು ಕೂಡಾ ತಂಡ ಸೋಲಿಗೆ ಕಾರಣವಾಗಿದೆ.

ಸಂಕ್ಷಿಪ್ತ ಸ್ಕೋರ್‌ ವಿವರ:

ಇಂಗ್ಲೆಂಡ್‌ 303 ಮತ್ತು 122 (ಒಲ್ಲೀ ಪೋಪ್‌ 23, ಮಾರ್ಕ್‌ ವುಡ್‌ 29; ಮ್ಯಾಟ್‌ ಹೆನ್ರಿ 3-36, ನೀಲ್‌ ವಾಗ್ನರ್ 3-18, ಟ್ರೆಂಟ್‌ ಬೌಲ್ಟ್‌ 2-34, ಅಜಯ್ ಪಟೇಲ್ 2-25)

ನ್ಯೂಜಿಲೆಂಡ್ 388 ಮತ್ತು 41/2, ಟಾಮ್ ಲಾಥಮ್ 23*) 8 ವಿಕೆಟ್ ನಷ್ಟಕ್ಕೆ

Last Updated : Jun 13, 2021, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.