ETV Bharat / sports

ENG vs NZ test: ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಕಾನ್ವೆ

author img

By

Published : Jun 3, 2021, 4:00 AM IST

Updated : Jun 3, 2021, 5:51 AM IST

ಲಂಡನ್​ನ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲ್ಯಾಂಡ್ ಮೊದಲ ದಿನ 3 ವಿಕೆಟ್​ ಕಳೆದುಕೊಂಡು 246 ರನ್​ಗಳಿಸಿದೆ.

ಡಿವೋನ್ ಕಾನ್ವೆ ಶತಕ
ಡಿವೋನ್ ಕಾನ್ವೆ ಶತಕ

ಲಂಡನ್: ಟಿ20 ಮತ್ತು ಏಕದಿನ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದ ಕಾನ್ವೆ ಇದೀಗ ಟೆಸ್ಟ್​ ಕ್ರಿಕೆಟ್​ನಲ್ಲೂ ಶತಕ ಸಿಡಿಸುವ ಮೂಲಕ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ.

ಲಂಡನ್​ನ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲ್ಯಾಂಡ್ ಮೊದಲ ದಿನ 3 ವಿಕೆಟ್​ ಕಳೆದುಕೊಂಡು 246 ರನ್​ಗಳಿಸಿದೆ.

ಆರಂಭಿಕರಾಗಿ ಕಣಕ್ಕಿಳಿದಿದ್ದ ಟಾಮ್ ಲ್ಯಾಥಮ್(23) ಮತ್ತು ಡಿವೋನ್​ ಕಾನ್ವೆ ಮೊದಲ ವಿಕೆಟ್​ಗೆ 58 ರನ್​ಗಳಿಸಿದರು. ವೇಗಿ ರಾಬಿನ್​ಸನ್​ 23 ರನ್​ಗಳಿಸಿದ್ದ ಲ್ಯಾಥಮ್ ವಿಕೆಟ್ ಪಡೆದು ಇಂಗ್ಲೆಂಡ್​ಗೆ ಆರಂಭಿಕ ಮುನ್ನಡೆ ದೊರೆಕಿಸಿಕೊಟ್ಟರು. ನಂತರ ಬಂದ ಕೇನ್ ವಿಲಿಯಮ್ಸ್ 13 ರನ್​ಗಳಿಸಿ ಆ್ಯಂಡರ್​ಸನ್​ ಬೌಲಿಂಗ್​ನಲ್ಲಿ ಬೌಲ್ಡ್​ ಆದರೆ, ಅನುಭವಿ ರಾಸ್ ಟೇಲರ್​(14) ರಾಬಿನ್​ಸನ್​ರ 2ನೇ ಬಲಿಯಾದರು.

ಆದರೆ 3ನೇ ವಿಕೆಟ್​ಗೆ ಕಾನ್ವೆ ಜೊತೆ ಸೇರಿದ ಹೆನ್ರಿ ನಿಕೋಲ್ಸ್​ 132 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಕಾನ್ವೆ 240 ಎಸೆತಗಳಲ್ಲಿ 16 ಬೌಂಡರಿ ಸಹಿತ ಅಜೇಯ 136 ರನ್​ಗಳಿಸಿದರೆ, ನಿಕೋಲ್ಸ್​ 46 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮೊದಲು ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್ ತಂಡ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡುತ್ತಿದೆ.

ಇದನ್ನು ಓದಿ:ಮನಸ್ಥಿತಿ ಚೆನ್ನಾಗಿದ್ದರೆ ಎಲ್ಲವೂ ಸರಿಹೋಗುತ್ತದೆ: ತಂಡದ ಸಾಮರ್ಥ್ಯದ ಬಗ್ಗೆ ಕೊಹ್ಲಿ ವಿವರಣೆ

Last Updated : Jun 3, 2021, 5:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.