ETV Bharat / sports

ಭವಿಷ್ಯ ರೂಪಿಸಿಕೊಳ್ಳಲು ನ್ಯೂಜಿಲ್ಯಾಂಡ್​​ ಪ್ರವಾಸ ನಿಮಗೆ ಉತ್ತಮ ಅವಕಾಶ: ಹೊಸ ಹುಡುಗರಿಗೆ ಹಾರ್ದಿಕ್ ಹಾರೈಕೆ

author img

By

Published : Nov 18, 2022, 8:11 PM IST

ಇಂದು ನಡೆಯಬೇಕಿದ್ದ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಪರಿಣಾಮ ಆಟಗಾರರು ಸೇರಿದಂತೆ ಕ್ರೀಡಾಭಿಮಾನಿಗಳು ನಿರಾಸೆ ಹೊರಹಾಕಿದ್ದಾರೆ.

NZ tour an opportunity for youngsters to get clarity: Pandya
NZ tour an opportunity for youngsters to get clarity: Pandya

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲ್ಯಾಂಡ್​​ ಪ್ರವಾಸ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಸವಕಾಶ ಎಂದು ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು. ಶುಕ್ರವಾರ ನಡೆಯಬೇಕಿದ್ದ ಮೊದಲನೆಯ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಲಾಯಿತು. ಪಂದ್ಯ ರದ್ದಾದ ಬಗ್ಗೆ ಮಾದ್ಯಮದವರೊಂದಿಗೆ ಮಾತಿಗಿಳಿದ ಅವರು ಭಾರತದ ಭವಿಷ್ಯದ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಭಾರತದ ಯುವ ಆಟಗಾರರಿಗೆ ಇಂದೊಂದು ಉತ್ತಮ ಅವಕಶ. ನಿಮ್ಮ ಪ್ರತಿಭೆ ಅನಾವರಣಕ್ಕೆ ಇದು ಸಕಾಲ. ಭವಿಷ್ಯದ ಆಟಗಾರರಾಗಿ ಬೆಳೆಯಲು ಈ ಸರಣಿಯನ್ನು ಸರಿಯಾಗಿ ಬಳಸಿಕೊಳ್ಳಿ. ಮೈದಾನದಲ್ಲಿ ತಮ್ಮನ್ನು ಮುಕ್ತವಾಗಿ ಬೆಳೆಯಲು ಈ ಸರಣಿ ಅನುವು ಮಾಡಿಕೊಡುತ್ತದೆ ಎಂದರು.

ಪರಿಸ್ಥಿತಿಗೆಗೆ ಅನುಗುಣವಾಗಿ ಅನುಭವಿ ಆಟಗಾರರು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತೇವೆ. ಹೊಸಬರಿಗೆ ಹಾಗೆ ಮಾಡಲಾಗದು. ಏಕೆಂದರೆ ಈ ಪ್ರವಾಸ ಅವರನ್ನು ಗುರುತಿಸಬಲ್ಲದು. ಹಾಗಾಗಿ ಹೊಸ ಹುಡುಗರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆಲವರು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಕಾಲಿಟ್ಟಿದ್ದಾರೆ.

ಯಾವುದೇ ಅನುಭವ ಇರುವುದಿಲ್ಲ. ಆದರೂ ಸಹ ಎದುರಾಳಿಗಳನ್ನು ಸಲೀಸಾಗಿ ಎದುರಿಸಬಲ್ಲರು. ಈ ಹುಡುಗರು ವಯಸ್ಸಿನಿಂದ ಚಿಕ್ಕವರು. ಅನುಭದ ಕೊರತೆ ಇದೆ. ಐಪಿಎಲ್ ಆಡಿದ್ದಾರೆ. ಹಾಗಾಗಿ ಅಷ್ಟು ದೊಡ್ಡಮಟ್ಟದ ವ್ಯತ್ಯಾಸವಾಗದು ಎಂದರು.

ಮೂರು T20 ಪಂದ್ಯಗಳಲ್ಲಿ ಮೊದಲನೆ ಪಂದ್ಯ ವೆಲ್ಲಿಂಗ್ಟನ್‌ನ ಶುಕ್ರವಾರ ಪ್ರಾರಂಭವಾಗಬೇಕಿತ್ತು. ಆದರೆ, ನಿರಂತರ ಸುರಿದ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಬಗ್ಗೆಯೂ ಅವರು ನಿರಾಸೆ ಹೊರಹಾಕಿದರು.

ಹುಡುಗರು ಆಡಲು ಸಾಕಷ್ಟು ಉತ್ಸುಕರಾಗಿದ್ದರು. ನ್ಯೂಜಿಲ್ಯಾಂಡ್​ ಒಂದು ಶ್ರೇಷ್ಠ ದೇಶ. ಕ್ರಿಕೆಟ್ ಆಡಲು ಉತ್ತಮ ಸ್ಥಳವಾಗಿದೆ. ದುರದೃಷ್ಟವಶಾತ್ ಮಳೆ ನಮಗೆ ಅವಕಾಶ ಮಾಡಿಕೊಡಲಿಲ್ಲ. ಅಭಿಮಾನಿಗಳಿಗೂ ನಿರಾಸೆ ಆಗಿದೆ ಎಂದರು.

ಇದನ್ನೂ ಓದಿ: NZ vs IND T20I: ನ್ಯೂಜಿಲೆಂಡ್‌-ಭಾರತ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.