ETV Bharat / sports

WTC ಫೈನಲ್​​​ಗೆ ಕಿವೀಸ್​​ ತಯಾರಿ: 2ನೇ ಟೆಸ್ಟ್​ ಪಂದ್ಯದಿಂದ ಪ್ರಮುಖ ಆಟಗಾರರ ಕೈಬಿಡಲು ನಿರ್ಧಾರ

author img

By

Published : Jun 9, 2021, 2:23 PM IST

ಜೂನ್ 18 ರಂದು ನಡೆಯಲಿರುವ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ನ್ಯೂಜಿಲೆಂಡ್ ತಂಡ ಪ್ಲ್ಯಾನ್​ ಮಾಡಿಕೊಂಡಿದೆ.

NZ to keep key bowlers fresh for WTC final
WTC ಫೈನಲ್​​​ಗೆ ಕೀವಿಸ್​​ ತಯಾರಿ

ಬರ್ಮಿಂಗ್​ಹ್ಯಾಮ್: ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ಭಾಗವಾಗಿ ತಂಡದ ಪ್ರಮುಖ ಬೌಲರ್​ಗಳಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲು ನಿರ್ಧರಿಸಿರುವ ಮಾಹಿತಿ ದೊರೆತಿದೆ.

ಜೂನ್ 18 ರಂದು ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಡೆಯಲಿದೆ.

ಈಗಾಗಲೇ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಣಕೈನಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಇವರು ಬಹುತೇಕ 2ನೇ ಟೆಸ್ಟ್​ ಪಂದ್ಯದಿಂದ ಹೊರಗುಳಿಯುವುದು ಖಚಿತ . ಇತ್ತ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್‌ಗೆ ಬೆರಳಿಗೆ ಗಾಯವಾಗಿದ್ದು ಇವರು ಎರಡನೇ ಟೆಸ್ಟ್​​ ಪಂದ್ಯದಿಂದ ಕೈ ಬಿಡಲಾಗಿದೆ.

ನ್ಯೂಜಿಲ್ಯಾಂಡ್​ ತಂಡಕ್ಕೆ ಟ್ರೆಂಟ್ ಬೌಲ್ಟ್ ಕಮ್​​ಬ್ಯಾಕ್​ ಮಾಡಿದ್ದು ತಂಡಕ್ಕೆ ಬಲ ಬಂದಂತಾಗಿದೆ. ಇದರಿಂದ ನ್ಯೂಜಿಲೆಂಡ್ ತಂಡದ ಇತರ ಪ್ರಮುಖ ಬೌಲರ್‌ಗಳಾದ ಟಿಮ್ ಸೌಥಿ, ನೀಲ್ ವ್ಯಾಗ್ನರ್ ಮತ್ತು ಕೈಲ್ ಜಾಮಿಸನ್ ಅವರಿಗೆ ಸುಲಭವಾಗಿ ವಿಶ್ರಾಂತಿ ನೀಡಬಹುದಾಗಿದೆ. ಇವರ ಸ್ಥಾನಕ್ಕೆ ಮ್ಯಾಟ್ ಹೆನ್ರಿ, ಡೌಗ್ ಬ್ರೇಸ್‌ವೆಲ್ ಮತ್ತು ಜಾಕೋಬ್ ಡಫ್ಫಿ ಸ್ಥಾನ ಪಡಿಯುವ ನಿರೀಕ್ಷೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.