ETV Bharat / sports

ಸೌತಾಂಪ್ಟನ್​ನಲ್ಲಿ ಮೊದಲ ಬಾರಿಗೆ ಹೊರಾಂಗಣದಲ್ಲಿ ಅಭ್ಯಾಸ ಮಾಡಿದ ಕಿವೀಸ್ ತಂಡ

author img

By

Published : May 26, 2021, 4:37 PM IST

ಜೂನ್​ 18-22ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಚೊಚ್ಚಲ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ಕಿವೀಸ್ ತಂಡ ಅತಿಥೇಯ ಇಂಗ್ಲೆಂಡ್​ ತಂಡದ ವಿರುದ್ಧ 2 ಪಂದ್ಯದ ಟೆಸ್ಟ್​ ಸರಣಿಯನ್ನಾಡಲಿದೆ.

ನ್ಯೂಜಿಲ್ಯಾಂಡ್ ಕ್ರಿಕೆಟರ್ಸ್​
ನ್ಯೂಜಿಲ್ಯಾಂಡ್ ಕ್ರಿಕೆಟರ್ಸ್​

ಸೌತಾಂಪ್ಟನ್: ಕಿವೀಸ್ ತಂಡದ ಆಟಗಾರರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಮಂಗಳವಾರ ಮೊದಲ ಬಾರಿಗೆ ಹೊರಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ. ಕಳೆದ 5 ದಿನಗಳಿಂದ ಸೌತಾಂಪ್ಟನ್​ನಲ್ಲಿ ನಿರಂತರ ಮಳೆ ಸುರಿಯುತ್ತಿದ್ದರಿಂದ ಒಳಾಂಗಣದದಲ್ಲೇ ತರಬೇತಿ ನಡೆಸುತ್ತಿದ್ದರು.

ಜೂನ್​ 18-22ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಚೊಚ್ಚಲ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ಕಿವೀಸ್ ತಂಡ ಅತಿಥೇಯ ಇಂಗ್ಲೆಂಡ್​ ತಂಡದ ವಿರುದ್ಧ 2 ಪಂದ್ಯದ ಟೆಸ್ಟ್​ ಸರಣಿಯನ್ನಾಡಲಿದೆ.

ಸೌತಾಂಪಟ್ಟನ್​ನ ಹುಲ್ಲಿನಂಗಳದ ಮೇಲೆ ಮೊದಲ ನೆಟ್​ ಸೆಷನ್​ ಎಂದು ಎನ್​ಜಿಸಿ ಟ್ವಿಟರ್​ ನಿರ್ವಹಣೆ ಮಾಡುವ ಬ್ಲಾಕ್​​ ಕ್ಯಾಪ್ಸ್​, ಕ್ರಿಕೆಟಿಗರು ಅಭ್ಯಾಸ ಮಾಡುವ ಫೋಟೋಗಳನ್ನು ಹಂಚಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಬ್ಯಾಟ್ಸ್​ಮನ್ ವಿಲ್​ ಯಂಗ್ ಮೊದಲ ಔಟ್​ಡೋರ್​ ಸೆಷನ್​ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. " ಇದು ತುಂಬಾ ಸುಂದರವಾಗಿದೆ. ನಾವು ಸೌತಾಂಪ್ಟನ್‌ಗೆ ಬಂದಾಗಿನಿಂದಲೂ ಇಲ್ಲಿ ತೇವದಿಂದ ಕೂಡಿತ್ತು. ಕಳೆದ 4-5 ದಿನಗಳಿಂದಲೂ ಒಳಾಂಗಣದಲ್ಲೇ ತರಬೇತಿ ನಡೆಸುತ್ತಿದ್ದೆವು. ಹಾಗಾಗಿ ಇಡೀ ತಂಡ ಹೊರ ಬರಲು ಹಾತೊರೆಯುತ್ತಿತ್ತು. ಇಲ್ಲಿನ ವಿಕೆಟ್​ ಬಗ್ಗೆ ತಿಳಿದುಕೊಳ್ಳುವುದಕ್ಕೆ ಅವಕಾಶ ಸಿಕ್ಕಿದ್ದಕ್ಕಾಗಿ ಬ್ಯಾಟ್ಸ್​ಮನ್​ಗಳು ತುಂಬಾ ಧನ್ಯರಾಗಿದ್ದಾರೆ" ಎಂದು ತಿಳಿಸಿದ್ದಾರೆ.

ಜೂನ್ 2 ರಿಂದ 6 ವರೆಗೆ ಲಾರ್ಡ್ಸ್​ನಲ್ಲಿ ಮೊದಲ ಟೆಸ್ಟ್​ ಹಾಗೂ ಬರ್ಮಿಂಗ್​ಹ್ಯಾಮ್​ನ ಎಡ್ಗ್​ಬಸ್ಟನ್​ನಲ್ಲಿ ಜೂನ್​ 10-14ರವರೆಗೆ 2ನೇ ಟೆಸ್ಟ್​ ನಡೆಯಲಿದೆ.

ಇದನ್ನು ಓದಿ:ಕೊಹ್ಲಿ, ರೋಹಿತ್ ಅಲ್ಲ, ಈತ ಭಾರತದ ಅಪಾಯಕಾರಿ - ಗೇಮ್ ಚೇಂಜರ್ ಬ್ಯಾಟ್ಸ್​ಮನ್: ಕಿವೀಸ್ ಕೋಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.