ETV Bharat / sports

ಯುವ, ಬೆಳವಣಿಗೆ ಆಗುತ್ತಿರುವ ತಂಡವಾದ್ದರಿಂದ ಏರಿಳಿತ ಸಾಮಾನ್ಯ.. ಆಳವಾದ ಬ್ಯಾಟಿಂಗ್​ ಬಲ ಬೇಕಿದೆ: ರಾಹುಲ್​ ದ್ರಾವಿಡ್​

author img

By

Published : Aug 14, 2023, 12:54 PM IST

ಇದು ಯುವ, ಇದು ಅಭಿವೃದ್ಧಿಶೀಲ ತಂಡವಾಗಿದೆ. ಹೀಗಾಗಿ ನಾವು ಏರಿಳಿತಗಳನ್ನು ಅನುಭವಿಸಬೇಕಾಗಿದೆ. ಆದರೂ ಪಾದಾರ್ಪಣೆ ಮಾಡಿದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಕೋಚ್​ ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

Rahul Dravid
ರಾಹುಲ್​ ದ್ರಾವಿಡ್​

ಫ್ಲೋರಿಡಾ (ಅಮೆರಿಕ): ವೆಸ್ಟ್​ ಇಂಡೀಸ್​ನ ದಿಗ್ಗಜ ಆಟದ ಮುಂದೆ ಭಾರತ ಐಪಿಎಲ್ ಸ್ಟಾರ್​ಗಳ ಆಟ ನಡೆಯಲಿಲ್ಲ. 3 ಮತ್ತು 4 ನೇ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿ ಸರಣಿ ಸಮಬಲ ಸಾಧಿಸಿದ್ದ ಭಾರತ ಐದನೇ ಪಂದ್ಯವನ್ನು ಎಂಟು ವಿಕೆಟ್​ಗಳಿಂದ ಸೋತು ತವರಿಗೆ ಮರಳ ಬೇಕಾಗಿದೆ. ಈ ಮೂಲಕ 12ನೇ ಟಿ20 ಸರಣಿ ಜಯ ಟೀಮ್​ ಇಂಡಿಯಾದ ಕೈತಪ್ಪಿದೆ. ಸಿರೀಸ್​ ಸೋಲಿನ ನಂತರ ಕೋಚ್​ ರಾಹುಲ್​ ದ್ರಾವಿಡ್​ ಆಳವಾದ ಬ್ಯಾಟಿಂಗ್​ ಇಲ್ಲದಿರುವುದು ಸೋಲಿಗೆ ಕಾರಣ ಎಂದಿದ್ದಾರೆ.

ಭಾರತ ಕೇವಲ ಏಳು ವಿಕೆಟ್​ವರೆಗೆ ಬ್ಯಾಟಿಂಗ್​ ಬಲವನ್ನು ಹೊಂದಿದೆ. ಅಕ್ಷರ್​ ಪಟೇಲ್​ ನಂತರ ಯಾವುದೇ ಆಟಗಾರ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲಾರ. ಕುಲದೀಪ್​ ಯಾದವ್​, ಅರ್ಷದೀಪ್​ ಸಿಂಗ್​ ಮತ್ತು ಚಹಾಲ್​ರಿಂದ ರನ್​ ಗಳಿಸುವ ಭರವಸೆ ಇಡಲಾಗುವುದಿಲ್ಲ. ಹೀಗಾಗಿ ಕೊನೆಯ ಎರಡು ಓವರ್​ ವೇಳೆಗೆ ಭಾರತ ಏಳು ವಿಕೆಟ್​ ಕಳೆದುಕೊಂಡಲ್ಲಿ ಡೆತ್​ ಓವರ್​ನಲ್ಲಿ ರನ್​ ಗಳಿಕೆ ಕಷ್ಟವಾಗುತ್ತದೆ.

  • Rahul Dravid said, "it's a young team, it's a developing team. There are times we have to go through ups and downs". pic.twitter.com/NMortcJZx7

    — Mufaddal Vohra (@mufaddal_vohra) August 14, 2023 " class="align-text-top noRightClick twitterSection" data=" ">

"ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯ ಇತ್ತು ಎಂದು ಕಾಣುತ್ತದೆ. ಎದುರಾಳಿ ತಂಡದಂತೆ ನಾವು ಸಹ ಆಳವಾದ ಬ್ಯಾಟಿಂಗ್​ ಬಲವನ್ನು ಹೊಂದುವ ಅಗತ್ಯ ಇದೆ. ವೆಸ್ಟ್​ ಇಂಡೀಸ್​ ತಂಡದಲ್ಲಿ 11ನೇ ವಿಕೆಟ್​ವರೆಗೂ ಬ್ಯಾಟಿಂಗ್​ ಬಲ ಇದೆ. ಅಲ್ಜಾರಿ ಜೋಸೆಫ್ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ ಪಿಚ್​ನಲ್ಲಿ ನಾವು ಇನ್ನಷ್ಟೂ ಬಿಗಿಯಾದ ಬೌಲಿಂಗ್​ ದಾಳಿ ಮಾಡಬೇಕಿತ್ತು" ಎಂದು ದ್ರಾವಿಡ್ ಪಂದ್ಯದ ನಂತರ ಮಾತನಾಡಿದ್ದಾರೆ.

  • Rahul Dravid said - "Tilak Verma was really good. Playing debut series, coming in middle order and tough situation and played well in everytime is amazing. He played lot of intent and positive throughout the series, his fielding was brilliant & showed us he can bowl as well". pic.twitter.com/MaIsVjXdn3

    — CricketMAN2 (@ImTanujSingh) August 14, 2023 " class="align-text-top noRightClick twitterSection" data=" ">

"ಮುಂದಿನ ಸರಣಿಯಲ್ಲಿ ನಾವು ಆಳವಾದ ಬ್ಯಾಟಿಂಗ್​ ಬಲದ ಜೊತೆಗೆ ತಂಡವನ್ನು ಮಾಡಿಕೊಳ್ಳಬೇಕಿದೆ. ಪಾದಾರ್ಪಣೆ ಮಾಡಿದ ಮೂವರು ಆಟಗಾರರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದದ್ದಾರೆ. ತಿಲಕ್​ ವರ್ಮಾ ಬ್ಯಾಟಿಂಗ್, ಫೀಲ್ಡಿಂಗ್​ ಮತ್ತು ಬೌಲಿಂಗ್​ನಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಬೌಲಿಂಗ್​ನಲ್ಲಿ ಮುಖೇಶ್​ ಡೆತ್​ ಓವರ್​​ಗಳಲ್ಲಿ ಉತ್ತಮ ಲಯದಲ್ಲಿ ಕಂಡುಬಂದಿದ್ದಾರೆ. ನಾಲ್ಕನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​ ಸಹ ಉತ್ತಮ ಪ್ರದರ್ಶನ ತೋರಿದ್ದಾರೆ. ಯುವ, ಕಲಿಯುವ ಆಟಗಾರರ ತಂಡ ಇದಾಗಿದೆ. ಹೀಗಾಗಿ ಸೋಲು ಗೆಲುವು ಸಾಮಾನ್ಯ. ಮುಂದೆ ಉತ್ತಮ ಪಂದ್ಯಗಳನ್ನು ಇದೇ ಆಟಗಾರರಿಂದ ನಿರೀಕ್ಷಿಸಬಹುದು" ಎಂದಿದ್ದಾರೆ.

  • Rahul Dravid said - "We made few mistakes in this T20I series against West Indies, in first couple of games and even in final match today. We didn't bat Well. But that can happen, you know it's young team, it's developing team. There are times we have go through ups & downs". pic.twitter.com/HVGiULJiY6

    — CricketMAN2 (@ImTanujSingh) August 14, 2023 " class="align-text-top noRightClick twitterSection" data=" ">

ಐದನೇ ಮತ್ತು ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ತೆಗೆದುಕೊಂಡಿತು. ಸೂರ್ಯ ಕುಮಾರ್​ ಯಾದವ್​ (61) ಬಿಟ್ಟರೆ ಮತ್ಯಾವ ಬ್ಯಾಟರ್​ಗಳೂ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದ ಭಾರತ 166 ರನ್​ನ ಸಾಧಾರಣ ಗುರಿಯನ್ನು ವೆಸ್ಟ್​ ಇಂಡೀಸ್​ಗೆ ನೀಡಿತು. ಈ ಗುರಿಯನ್ನು ಬೆನ್ನತ್ತಿದ ವಿಂಡೀಸ್​ ತಂಡ ಕೇವಲ ಎರಡು ವಿಕೆಟ್​ ಕಳೆದುಕೊಂಡು ಎರಡು ಓವರ್​ ಉಳಿಸಿಕೊಂಡು ಪಂದ್ಯವನ್ನು ಜಯಿಸಿತು.

ಇದನ್ನೂ ಓದಿ: ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಕೈಚೆಲ್ಲಿದ ಭಾರತ.. ಹಾರ್ದಿಕ್​ ಬಗ್ಗೆ ವೆಂಕಟೇಶ್​ ಪ್ರಸಾದ್​ ಬೇಸರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.