ETV Bharat / sports

ಧೋನಿಗೆ ಮೊಣಕಾಲು ನೋವು: ಕೇವಲ 40 ರೂಪಾಯಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ

author img

By

Published : Jun 30, 2022, 10:14 PM IST

ಕಳೆದೊಂದು ತಿಂಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿರುವ ಮಹೇಂದ್ರ ಸಿಂಗ್ ಧೋನಿ ಲಕ್ಷಾಂತರ ರೂಪಾಯಿ ಖರ್ಚು ಮಾಡದೇ ಕೇವಲ 40 ರೂಪಾಯಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Dhoni knees treated
Dhoni knees treated

ರಾಂಚಿ(ಜಾರ್ಖಂಡ್​): ಆರೋಗ್ಯದಲ್ಲಿ ಏರುಪೇರಾದರೆ, ಗಾಯದ ಸಮಸ್ಯೆ ಕಂಡುಬಂದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಕ್ರಿಕೆಟ್ ಆಟಗಾರರಂತೂ ವಿದೇಶಗಳಿಗೆ ತೆರಳಿ ಚಿಕಿತ್ಸೆಗೊಳಗಾಗುತ್ತಾರೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕೇವಲ 40 ರೂಪಾಯಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ.

ಕಳೆದೊಂದು ತಿಂಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಧೋನಿ ಯಾವುದೇ ದುಬಾರಿ ವೈದ್ಯರು, ಆಸ್ಪತ್ರೆಗಳ ಬಳಿ ಹೋಗದೇ ಕೇವಲ 40 ರೂಪಾಯಿ ಔಷಧಿ ತೆಗೆದುಕೊಳ್ತಿದ್ದಾರೆ. ಅದರ ಫೋಟೋ ಇದೀಗ ವೈರಲ್​ ಆಗಿದೆ. ಹಳ್ಳಿಯೊಂದರಲ್ಲಿ ಮರದ ಕೆಳಗೆ ಕುಳಿತು ರೋಗಿಗಳಿಗೆ ಚಿಕಿತ್ಸೆ ನೀಡುವ ಜನರಿಂದ ಕ್ರಿಕೆಟಿಗ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ ಗಿಡಮೂಲಿಕೆಗಳ ಸಹಾಯದಿಂದ ಚಿಕಿತ್ಸೆ ನೀಡುವ ವೈದ್ಯ ಬಂಧನ್​ ಸಿಂಗ್​, "ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ 40 ರೂಪಾಯಿ ಔಷಧಿ ನೀಡಲಾಗುತ್ತದೆ" ಎಂದಿದ್ದಾರೆ.

ಇದನ್ನೂ ಓದಿ: 24 ಗಂಟೆಯಲ್ಲಿ 23 ನವಜಾತ ಶಿಶುಗಳ ಜನನ: ದಾಖಲೆ ಬರೆದ ಸೂರತ್​​ ಆಸ್ಪತ್ರೆ

ರಾಂಚಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಕಟಿಂಗ್​ಕೆಲಾದಲ್ಲಿ ಬಂಧನ್​ ಸಿಂಗ್​​ ಕಳೆದ 28 ವರ್ಷಗಳಿಂದ ಮರದ ಕೆಳಗೆ ಕುಳಿತುಕೊಂಡೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಕಳೆದ ಒಂದು ತಿಂಗಳಿಂದ ಧೋನಿ ಇಲ್ಲಿಗೆ ಬಂದು ಔಷಧಿ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ನಾಲ್ಕು ದಿನಕ್ಕೊಮ್ಮೆ ಇಲ್ಲಿಗೆ ಬರುವ ಮಾಹಿ, ಔಷಧಿ ಪಡೆಯುವರು. ಈ ಹಿಂದೆ ಕೂಡ ಧೋನಿ, ಬಂಧನ್ ಸಿಂಗ್​ ಅವರ ಪೋಷಕರ ಬಳಿ ಚಿಕಿತ್ಸೆ ಸ್ವೀಕರಿಸಿದ್ದರು.

ವೈದ್ಯ ಬಂಧನ್ ಸಿಂಗ್ ಮಾತನಾಡಿ, "ಇತರೆ ರೋಗಿಗಳಂತೆ ಧೋನಿ ಇಲ್ಲಿಗೆ ಬರುತ್ತಾರೆ. ಅವರಲ್ಲಿ ಯಾವುದೇ ರೀತಿಯ ಅಹಂ ಇಲ್ಲ. ಒಂದು ತಿಂಗಳಿಂದ ಇಲ್ಲಿಗೆ ಬರುತ್ತಿದ್ದು, ಕಾರಿನಲ್ಲಿ ಕುಳಿತುಕೊಂಡು ಡೋಸ್​ ಪಡೆದುಕೊಳ್ಳುತ್ತಾರೆ. ಅನೇಕರು ಅವರೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದಾರೆ" ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.