ETV Bharat / sports

ಪಾಕಿಸ್ತಾನದ ವಿರುದ್ಧ ಜಯಗಳಿಸಿದ ಭಾರತಕ್ಕೆ ಅಭಿನಂದಿಸಿದ ಮೋದಿ, ರಾಹುಲ್​

author img

By

Published : Aug 29, 2022, 7:30 AM IST

ಏಷ್ಯಾ ಕಪ್​ ಪಂದ್ಯದಲ್ಲಿ ಭಾರತ ಜಯಗಳಿಸಿದ್ದಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Modi and Rahul Gandhi congratulated India for victory over Pakistan
ಅಭಿನಂದಿಸಿದ ಮೋದಿ, ರಾಹುಲ್​

ನವದೆಹಲಿ: ಪಾಕಿಸ್ತಾನ ಬಿಗಿ ಬೌಲಿಂಗ್​ಗೆ ಸಾಂಘಿಕ ಹೋರಾಟ ನಡೆಸಿ ಭಾರತ ತಂಡ ಜಯಗಳಿಸಿದ್ದು, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿ ಅಭಿನಂದಿಸಿದ್ದಾರೆ. ಟಾಸ್​ ಗೆದ್ದು ಬೌಲಿಂಗ್​ ಆಯ್ದು 147ರನ್​ಗೆ ಪಾಕಿಸ್ತಾನ ತಂಡವನ್ನು ಭಾರತೀಯ ವೇಗಿಗಳು ಕಟ್ಟಿಹಾಕಿದರು. ಭಾರತಕ್ಕೆ ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್​ ಪಾಂಡ್ಯರ ಜವಾಬ್ದಾರಿಯುತ ಆಟ 5ವಿಕೆಟ್​ಗಳ ಜಯಕ್ಕೆ ಕಾರಣವಾಯಿತು.

‘ಇಂದಿನ ಏಷ್ಯಾ ಕಪ್ 2022 ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಆಲ್ ರೌಂಡ್ ಪ್ರದರ್ಶನ ನೀಡಿದೆ. ತಂಡವು ಅತ್ಯುತ್ತಮ ಕೌಶಲ್ಯ ಮತ್ತು ಶಕ್ತಿ ಪ್ರದರ್ಶಿಸಿದೆ. ಗೆಲುವಿಗಾಗಿ ಅಭಿನಂದನೆಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

  • #TeamIndia put up a spectacular all-round performance in today’s #AsiaCup2022 match. The team has displayed superb skill and grit. Congratulations to them on the victory.

    — Narendra Modi (@narendramodi) August 28, 2022 " class="align-text-top noRightClick twitterSection" data=" ">

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾಂಪ್ರದಾಯಿಕ ಎದುರಾಳಿಗಳನ್ನು ಸೋಲಿಸಿದ ನಂತರ ಭಾರತ ಕ್ರಿಕೆಟ್ ತಂಡದ ಪ್ರದರ್ಶನವನ್ನು ಭಾನುವಾರ ಶ್ಲಾಘಿಸಿದ್ದಾರೆ. ರಾಹುಲ್​ ಗಾಂಧಿ ‘ಭಾರತ ತಂಡ ಉತ್ತಮವಾಗಿ ಆಡಿದೆ ಇದೊಂದು ರೋಚಕ ಪಂದ್ಯವಾಗಿತ್ತು. ಕ್ರೀಡೆಯ ಸೌಂದರ್ಯ ಎಂದರೆ ಅದು ದೇಶವನ್ನು ಹೇಗೆ ಪ್ರೇರೇಪಿಸುತ್ತದೆ ಮತ್ತು ಒಂದುಗೂಡಿಸುತ್ತದೆ - ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಭಾವನೆಯೊಂದಿಗೆ.’ಎಂದು ಟ್ವೀಟ್​ ಮಾಡಿದ್ದಾರೆ.

  • What a thriller of a match! Well played, #TeamIndia 🇮🇳

    The beauty of sports is how it inspires and unites the country - with a feeling of great joy & pride. #AsiaCup2022

    — Rahul Gandhi (@RahulGandhi) August 28, 2022 " class="align-text-top noRightClick twitterSection" data=" ">

ಹುರ್ರೇ! ನಾವು ಗೆದ್ದಿದ್ದೇವೆ. ಅದ್ಬುತ ಪ್ರದರ್ಶನಕ್ಕಾಗಿ ಮತ್ತು ಜಯಗಳಿಸಿದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಉತ್ತಮವಾಗಿ ಆಡಿದ್ದೀರಿ ಬ್ಲೂ ಬಾಯ್ಸ್​ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ : Asia Cup 2022: ಪಾಕ್​ ವಿರುದ್ಧ ಅಬ್ಬರಿಸಿದ ಪಾಂಡ್ಯ.. ವಿಶ್ವಕಪ್​ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.