ETV Bharat / sports

ಗಾಯದ ಮೇಲೆ ಬರೆ.. ಮೊದಲ ಟೆಸ್ಟ್​ ಪಂದ್ಯದಿಂದ ಹೊರಬಿದ್ದ ಕನ್ನಡಿಗ ಮಯಾಂಕ್​ ಅಗರವಾಲ್​

author img

By

Published : Aug 2, 2021, 7:20 PM IST

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಮಯಾಂಕ್​ ಅಗರವಾಲ್​ ಹೊರಬಿದ್ದಿದ್ದು, ತಂಡಕ್ಕೆ ಇದೀಗ ಗಾಯದ ಮೇಲೆ ಬರೆ ಬಿದ್ದಿದೆ.

Mayank Agarwal
Mayank Agarwal

ಲಂಡನ್​: ಆತಿಥೇಯ ಇಂಗ್ಲೆಂಡ್​ ವಿರುದ್ಧ ಐದು ಟೆಸ್ಟ್​ ಪಂದ್ಯಗಳ ಸರಣಿ ಆಡಲು ಆಂಗ್ಲರ ನಾಡಿನಲ್ಲಿ ಉಳಿದುಕೊಂಡಿರುವ ಟೀಂ ಇಂಡಿಯಾಗೆ ಮೇಲಿಂದ ಮೇಲೆ ಗಾಯದ ಮೇಲೆ ಬರೆ ಬೀಳುತ್ತಿದೆ. ಟೂರ್ನಿ ಆರಂಭಗೊಳ್ಳಲು ಕೇವಲ ಎರಡು ದಿನ ಬಾಕಿ ಇರುವಾಗಲೇ ಮೊದಲ ಟೆಸ್ಟ್​ ಪಂದ್ಯದಿಂದ ಆರಂಭಿಕ, ಕನ್ನಡಿಗ ಮಯಾಂಕ್​ ಅಗರವಾಲ್​ ಹೊರಬಿದ್ದಿದ್ದಾರೆ.

ಮೊದಲ ಪಂದ್ಯಕ್ಕಾಗಿ ಮಯಾಂಕ್​​ ಅಗರವಾಲ್​​ ನೆಟ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮೊಹಮ್ಮದ್ ಸಿರಾಜ್​ ಎಸೆದ ಚೆಂಡು ಅವರ ತಲೆಗೆ ಬಿದ್ದ ಕಾರಣ ಗಾಯಕ್ಕೊಳಗಾಗಿದ್ದಾರೆ. ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​ ಬ್ರಿಡ್ಜ್​ ನೆಟ್​​ ಸೆಷನ್​ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್​ ಮಂಡಳಿ ಮಾಹಿತಿ ಶೇರ್ ಮಾಡಿಕೊಂಡಿದೆ. ವೈದ್ಯಕೀಯ ತಂಡ ಈಗಾಗಲೇ ಅವರನ್ನ ಪರೀಕ್ಷೆಗೊಳಪಡಿಸಿದ್ದು, ಸ್ಕ್ಯಾನ್​ಗೊಳಗಾಗುವ ಸಾಧ್ಯತೆ ಇದೆ.

Mayank Agarwal
ನೆಟ್ಸ್​​ನಲ್ಲಿ ಅಭ್ಯಾಸದ ವೇಳೆ ಗಾಯಗೊಂಡ ಮಯಾಂಕ್​​

ಇದನ್ನೂ ಓದಿರಿ: ಒಲಿಂಪಿಕ್ಸ್​​​ ಫೈನಲ್​ನಲ್ಲಿ ನಿರಾಸೆ: ರಾಜ್ಯದ ಪೌವಾದ್​​ಗೆ 23ನೇ ಸ್ಥಾನ, 6ನೇ ಸ್ಥಾನಕ್ಕೆ ತೃಪ್ತಿಪಟ್ಟ ಕಮಲ್​ಪ್ರೀತ್ ಕೌರ್​​

ಗಾಯಗೊಂಡಿರುವ ಶುಬ್ಮನ್​ ಗಿಲ್, ಅವೇಶ್ ಖಾನ್​​ ಹಾಗೂ ವಾಷಿಂಗ್ಟನ್​ ಸುಂದರ್ ಈಗಾಗಲೇ ಗಾಯಗೊಂಡು ಟೆಸ್ಟ್​ನಿಂದ ಹೊರಬಿದ್ದಿರುವ ಬೆನ್ನಲ್ಲೇ ಮತ್ತೋರ್ವ ಆಟಗಾರ ಗಾಯಗೊಂಡಿರುವುದು ಭಾರತಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್​ ಬದಲಿ ಆಟಗಾರರಾಗಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದಾರೆ.

ಆಗಸ್ಟ್​ 4ರಿಂದ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್​ ಪಂದ್ಯ ಅರಂಭಗೊಳ್ಳಬೇಕಾಗಿದ್ದು, ಇದಕ್ಕೆ ಎರಡು ದಿನ ಬಾಕಿ ಇದ್ದಾಗಲೇ ಅಗರವಾಲ್​ ಹೊರಬಿದ್ದಿದ್ದಾರೆ. ತಂಡದ ಪರ ರೋಹಿತ್ ಶರ್ಮಾ ಹಾಗೂ ಕೆ.ಎಲ್​ ರಾಹುಲ್​ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.