ETV Bharat / sports

ಆರ್​ಸಿಬಿಗೆ ಆಘಾತಕಾರಿ ಸುದ್ದಿ ನೀಡಿದ ಗ್ಲೇನ್​ ಮ್ಯಾಕ್ಸ್​ವೆಲ್

author img

By

Published : Feb 16, 2022, 3:01 PM IST

ಮಾರ್ಚ್​ 27ರಂದು ಮ್ಯಾಕ್ಸ್​ವೆಲ್​ ಭಾರತದ ಮೂಲದ ವಿನಿ ರಾಮನ್​ ಅವರನ್ನು ವರಿಸಲಿದ್ದಾರೆ. ಏಪ್ರಿಲ್ 2ರಿಂದ ಐಪಿಎಲ್ ಆರಂಭವಾಗಲಿದೆ. ಹಾಗಾಗಿ, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮ್ಯಾಕ್ಸ್​ವೆಲ್ ಇಲ್ಲದೇ ಆಡಬೇಕಾಗಿದೆ..

Maxwell set to miss Pakistan tour, start of IPL
ಗ್ಲೇನ್ ಮ್ಯಾಕ್ಸ್​ವೆಲ್ ಆರ್​ಸಿಬಿ

ಮೆಲ್ಬೋರ್ನ್ : ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆಸ್ಟ್ರೇಲಿಯಾ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್ ಮುಂಬರುವ ಪಾಕಿಸ್ತಾನ ಪ್ರವಾಸ ಮತ್ತು ಮೊದಲಾರ್ಧದ ಕೆಲವು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ತಂಡದ ವೇಳಾಪಟ್ಟಿಯ ಬದಲಾವಣೆ ಮಾಡಿದ್ದರಿಂದ ನಾನು ಪ್ರವಾಸವನ್ನು ತಪ್ಪಿಸಿಕೊಳ್ಳುವಂತಾಗಿದೆ ಎಂದು ಮ್ಯಾಕ್ಸ್​ವೆಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕ್ರಿಕೆಟ್​ ಆಸ್ಟ್ರೇಲಿಯಾ ಜೊತೆಗಿನ ಮಾತುಕತೆಯ ನಂತರ ನಾನು ವಿವಾಹದ ದಿನಾಂಕ ನಿಗದಿಪಡಿಸಿದ್ದಾಗ ಪ್ರವಾಸ ಮತ್ತು ವಿವಾಹಕ್ಕೆ 2 ವಾರಗಳ ಅಂತರವಿತ್ತು. ನಾನು ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಯಸಿದ್ದೆ ಮತ್ತು ನಾನು ಯಾವುದೇ ಪ್ರವಾಸವನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ಸಂತೋಷ ಪಟ್ಟಿದ್ದೆ.

ಆದರೆ, ಕೇಂದ್ರೀಯ ಒಪ್ಪಂದಕ್ಕೆ ನಾನು ಸಿಎ ಸಂಪರ್ಕಿಸಿದಾಗ ಅವರು ಪಾಕಿಸ್ತಾನ ಪ್ರವಾಸದ ದಿನಾಂಕವನ್ನು ತಿಳಿಸಿದರು. ಆದರೆ, ಅದಕ್ಕೂ ಮುನ್ನವೇ ವಿವಾಹದ ದಿನಾಂಕವನ್ನು ನಿಗದಿ ಮಾಡಲಾಗಿತ್ತು ಎಂದು ಮ್ಯಾಕ್ಸ್​ವೆಲ್ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದ ಬಳಿಕ ತಿಳಿಸಿದ್ದಾರೆ.

ಐಪಿಎಲ್​ನ ಕೆಲ ಪಂದ್ಯಗಳಿಗೆ ಮ್ಯಾಕ್ಸಿ ಅಲಭ್ಯ

ಮಾರ್ಚ್​ 27ರಂದು ಮ್ಯಾಕ್ಸ್​ವೆಲ್​ ಭಾರತದ ಮೂಲದ ವಿನಿ ರಾಮನ್​ ಅವರನ್ನು ವರಿಸಲಿದ್ದಾರೆ. ಏಪ್ರಿಲ್ 2ರಿಂದ ಐಪಿಎಲ್ ಆರಂಭವಾಗಲಿದೆ. ಹಾಗಾಗಿ, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮ್ಯಾಕ್ಸ್​ವೆಲ್ ಇಲ್ಲದೇ ಆಡಬೇಕಾಗಿದೆ.

ಈ ಬಾರಿ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸುವಲ್ಲಿ ಎಡವಿರುವ ಆರ್​ಸಿಬಿ ಮೊದಲ ಕೆಲವು ಪಂದ್ಯಗಳಲ್ಲಿ ಮ್ಯಾಕ್ಸ್​ವೆಲ್ ಅಂತಹ ಸ್ಫೋಟಕ ಬ್ಯಾಟರ್​ ಇಲ್ಲದೇ ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ಐಪಿಎಲ್​ನಲ್ಲಿ 3.2 ಕೋಟಿ ರೂ. ಡೀಲ್​.. ಅಪ್ಪನ ಕನಸನ್ನು ನನಸು ಮಾಡಿದ ವೇಗಿ ಯಶ್ ದಯಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.