IPL ಮೇಲೆ ಕ್ರಿಸ್ಟಿಯಾನೋ ರೊನಾಲ್ಡೋ ತಂಡದ ಕಣ್ಣು!

author img

By

Published : Oct 21, 2021, 8:31 PM IST

Updated : Oct 21, 2021, 11:04 PM IST

Manchester United owners pick bid documents for IPL franchise

ವಿಶ್ವವಿಖ್ಯಾತ ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್​ಬಾಲ್​ ಕ್ಲಬ್​ ಸೇರಿದಂತೆ ಹಲವಾರು ಕ್ರೀಡಾ ತಂಡಗಳ ಮಾಲೀಕರಾಗಿರುವ ಗ್ಲೇಜರ್ ಫ್ಯಾಮಿಲಿ ಐಪಿಎಲ್‌ ತಂಡವನ್ನು ಖರೀದಿಸಲು ಆಸಕ್ತಿ ತೋರಿದೆ. ಅದಕ್ಕಾಗಿ ಬಿಸಿಸಿಐನಿಂದ ಬಿಡ್​ ಇನ್ವಿಟೇಶನ್ ಟು ಟೆಂಡರ್‌ (ಐಟಿಟಿ) ದಾಖಲೆಯನ್ನು ಅಕ್ಟೋಬರ್​ 20ರಂದು ಖರೀದಿಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

ಮುಂಬೈ: 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಎರಡು ಹೊಸ ಫ್ರಾಂಚೈಸಿಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಈ ಹೊಸ ತಂಡಕ್ಕಾಗಿ ದೇಶದ ಪ್ರತಿಷ್ಠಿತ ಕಂಪನಿಗಳು ಈಗಾಗಲೇ ಆಸಕ್ತಿ ತೋರಿಸಿವೆ. ಆದರೆ, ವಿಶೇಷವೆಂದರೆ ಶ್ರೀಮಂತ ಕ್ರಿಕೆಟ್ ಲೀಗ್​ ವಿದೇಶಿ ಹೂಡಿಕೆಗಾರರನ್ನು ಸೆಳೆಯಲಾರಂಭಿಸಿದೆ. ಫುಟ್​ಬಾಲ್ ದಿಗ್ಗಜ ಕ್ಲಬ್​ ಮ್ಯಾಂಚೆಸ್ಟರ್​ ಯುನೈಟೆಡ್​ ಹೊಸ ತಂಡದ ಬಿಡ್​ ದಾಖಲಾತಿಗಳನ್ನು ಖರೀದಿಸಿದೆ ಎಂದು ತಿಳಿದು ಬಂದಿದೆ.

ವಿಶ್ವವಿಖ್ಯಾತ ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್​ಬಾಲ್​ ಕ್ಲಬ್​ ಸೇರಿದಂತೆ ಹಲವಾರು ಕ್ರೀಡಾ ತಂಡಗಳ ಮಾಲೀಕರಾಗಿರುವ ಗ್ಲೇಜರ್ ಫ್ಯಾಮಿಲಿ ಐಪಿಎಲ್‌ ತಂಡವನ್ನು ಖರೀದಿಸಲು ಆಸಕ್ತಿ ತೋರಿದೆ. ಅದಕ್ಕಾಗಿ ಬಿಸಿಸಿಐನಿಂದ ಬಿಡ್​ ಇನ್ವಿಟೇಶನ್ ಟು ಟೆಂಡರ್‌ (ಐಟಿಟಿ) ದಾಖಲೆಯನ್ನು ಅಕ್ಟೋಬರ್​ 20ರಂದು ಖರೀದಿಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

3,000 ಕೋಟಿಗಿಂತ ಹೆಚ್ಚಿನ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಸಿಸಿಐ ಅವಕಾಶ ನೀಡಿದೆ. ಒಟಿಟಿ ಡಾಕ್ಯುಮೆಂಟ್ ಅನ್ನು ತೆಗೆದುಕೊಳ್ಳುವುದು ಯುಎಸ್ ಮೂಲದ ಗ್ಲೇಜರ್ ಕುಟುಂಬವು ಫ್ರಾಂಚೈಸಿಗಾಗಿ ಔಪಚಾರಿಕ ಬಿಡ್ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲವಾದರೂ, ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್‌ ಬಿಡ್‌ನಲ್ಲಿ ಭಾಗವಹಿಸುವುದಾದರೆ ಭಾರತದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ. ಒಟಿಟಿ ದಾಖಲಾತಿಯು ವಿದೇಶಿ ಸಂಸ್ಥೆಯ ಬಿಡ್ ಯಶಸ್ವಿಯಾಗಬೇಕಾದರೆ ಭಾರತದಲ್ಲಿ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ.

ಇನ್ನು ಈಗಾಗಲೇ ಐಪಿಎಲ್ ತಂಡಗಳ ಖರೀದಿಗಾಗಿ ಅದಾನಿ ಗ್ರೂಪ್, ಟೊರೆಂಟೋ ಫಾರ್ಮಾ, ಅರೊಬಿಂದೋ ಫಾರ್ಮಾ, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್, ಉದ್ಯಮಿ ರೋನಿ ಸ್ಕ್ರೂವಾಲಾ ಸೇರಿದಂತೆ ಹಲವು ಕಂಪನಿಗಳು ಬಿಡ್​ ದಾಖಲಾತಿಯನ್ನು ಖರೀದಿಸಿವೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ವಿಶ್ವಕಪ್​ ಗೆಲ್ಲಲು ಭಾರತವೇ ಫೆವರೀಟ್​ ತಂಡ​, UAE ಕಂಡೀಷನ್ ಅವರಿಗೆ ಸೂಕ್ತವಾಗಿದೆ: ಇಂಜಮಾಮ್

Last Updated :Oct 21, 2021, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.