ETV Bharat / sports

ಮಹಾರಾಜ ಟ್ರೋಫಿಗೆ ಆಟಗಾರರ ಹರಾಜು: ದುಬಾರಿ ಆಟಗಾರರು ಯಾರು ಗೊತ್ತಾ?

author img

By

Published : Jul 22, 2023, 8:42 PM IST

Maharaja Trophy Auction: ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಟೂರ್ನಿಯ ಎರಡನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು.

maharaja-trophy-t20-tournament-player-auction
ಮಹಾರಾಜ ಟ್ರೋಫಿಗೆ ಆಟಗಾರರ ಹರಾಜು

ಬೆಂಗಳೂರು : ಫ್ಯಾನ್ ಕೋಡ್ ಪ್ರಾಯೋಜಕತ್ವದ ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಟೂರ್ನಿಯ ಎರಡನೇ ಆವೃತ್ತಿ ಆರಂಭವಾಗುತ್ತಿದ್ದು, ಕರ್ನಾಟಕದ 700ಕ್ಕೂ ಹೆಚ್ಚು ಕ್ರಿಕೆಟ್​​ ಆಟಗಾರರ ಹರಾಜು ಪ್ರಕ್ರಿಯೆ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಹೊಸ ತಂಡಗಳಾದ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್, ಹಾಲಿ ಚಾಂಪಿಯನ್ಸ್ ಗುಲ್ಬರ್ಗ ಮಿಸ್ಟಿಕ್ಸ್, ಕಳೆದ ವರ್ಷದ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ಸೇರಿದಂತೆ 6 ಫ್ರಾಂಚೈಸಿಗಳು ಮಹಾರಾಜ ಟ್ರೋಫಿ ಗೆಲ್ಲಲು ನೆಚ್ಚಿನ ಆಟಗಾರರನ್ನು ಖರೀದಿಸಿವೆ.

ಅಭಿನವ್ ಮನೋಹರ್​ಗೆ​​ 15 ಲಕ್ಷ: ಹರಾಜಿನಲ್ಲಿ‌ ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಎಲ್ಲಾ 6 ಫ್ರಾಂಚೈಸಿಗಳು ಅಗ್ರ ಕ್ರಮಾಂಕದ ಬ್ಯಾಟರ್​​ಗಳಿಗಾಗಿ ಹೆಚ್ಚು ಒತ್ತು ನೀಡಿದವು. ಅಭಿನವ್ ಮನೋಹರ್​​ರನ್ನು 15 ಲಕ್ಷ ರೂ.ಗೆ ಶಿವಮೊಗ್ಗ ಲಯನ್ಸ್ ತಂಡ ಖರೀದಿಸಿದರೆ, ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡ 14 ಲಕ್ಷ ರೂ.ಗೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್​​ರನ್ನು ಗುಲ್ಬರ್ಗ ಮಿಸ್ಟಿಕ್ಸ್ 13.2 ಲಕ್ಷ ರೂ.ಗೆ ಖರೀದಿಸಿದರೆ, ಅನುಭವಿ ಆಟಗಾರ ಮನೀಶ್ ಪಾಂಡೆ 10.6 ಲಕ್ಷ ರೂ.ಗೆ ಹುಬ್ಬಳ್ಳಿ ಟೈಗರ್ಸ್ ಪಾಲಾಗಿದ್ದಾರೆ.

Maharaja Trophy T20 Tournament Player Auction
ಮಹಾರಾಜ ಟ್ರೋಫಿ ಹರಾಜು ಪ್ರಕ್ರಿಯೆ

ಎ ವಿಭಾಗದಲ್ಲಿ ಲಯನ್ಸ್ ತಂಡವು ಆಲ್​ರೌಂಡರ್ ಶ್ರೇಯಸ್ ಗೋಪಾಲ್​ರನ್ನು 7.8 ಲಕ್ಷ ರೂ.ಗೆ ಖರೀದಿಸಿತು. ಕಳೆದ ವರ್ಷ ಚಾಂಪಿಯನ್ ಆಗಿದ್ದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ವೇಗಿ ವೈಶಾಖ್ ವಿಜಯ್ ಕುಮಾರ್ (8.8 ಲಕ್ಷ) ಮತ್ತು ಅನುಭವಿ ಸ್ಪಿನ್ನರ್ ಕೆ.ಪಿ. ಅಪ್ಪಣ್ಣರನ್ನು ತಲಾ 4 ಲಕ್ಷ ರೂ.ಗೆ ಖರೀದಿಸಿದರೆ, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಅನುಭವಿ ವೇಗಿ ಅಭಿಮನ್ಯು ಮಿಥುನ್​ರನ್ನು 5.2 ಲಕ್ಷ ರೂ.ಗೆ ಸೇರಿಸಿಕೊಂಡಿದೆ.

ಲೆಗ್ ಸ್ಪಿನ್ನರ್ ಕೆ.ಸಿ. ಕಾರಿಯಪ್ಪ 7.2 ಲಕ್ಷ ರೂ. ಹಾಗೂ ಆಲ್​​ರೌಂಡರ್ ಪ್ರವೀಣ್ ದುಬೆ 5.8 ಲಕ್ಷ ರೂ.ಗೆ ಹುಬ್ಬಳ್ಳಿ ಟೈಗರ್ಸ್ ತಂಡದ ಪಾಲಾದರು. ಜೊತೆಗೆ, ಆಲ್​ರೌಂಡರ್ ಕೃಷ್ಣಪ್ಪ ಗೌತಮ್ 6.6 ಲಕ್ಷ ರೂ. ಹಾಗೂ ವೇಗದ ಬೌಲರ್ ರೋನಿತ್ ಮೋರೆ 4.6 ಲಕ್ಷ ರೂ.ಗೆ ಮಂಗಳೂರು ಡ್ರ್ಯಾಗನ್ಸ್​ ತಂಡಕ್ಕೆ ಸೇರ್ಪಡೆಯಾದರು. ಎಡಗೈ ಸ್ಪಿನ್ನರ್ ಜೆ.ಸುಚಿತ್​​ರನ್ನು 8.4 ಲಕ್ಷ ರೂ., ವೇಗಿ ಪ್ರಸಿದ್ಧ್ ಎಂ.ಕೃಷ್ಣ 7.4 ಲಕ್ಷ ರೂ. ಹಾಗೂ 6.8 ಲಕ್ಷ ರೂ.ಗೆ ಅನುಭವಿ ಬ್ಯಾಟರ್ ಕರುಣ್ ನಾಯರ್​ಗೆ​​ ಮೈಸೂರು ವಾರಿಯರ್ಸ್ ತಂಡ ಮಣೆಹಾಕಿದೆ.

'ಬಿ' ವಿಭಾಗದಲ್ಲಿ ಆಲ್​ರೌಂಡರ್ ಮನೋಜ್ ಎಸ್. ಭಾಂಡಗೆಗೆ 9 ಲಕ್ಷ ರೂ., ವಿಕೆಟ್ ಕೀಪರ್ ಲವ್ನಿತ್ ಸಿಸೋಡಿಯಾ ಮತ್ತು ವೇಗದ ಬೌಲರ್ ವಿದ್ಯಾಧರ್ ಪಾಟೀಲ್​ರನ್ನು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಕ್ರಮವಾಗಿ 7.1 ಲಕ್ಷ ಮತ್ತು 7 ಲಕ್ಷ ರೂ.ಗೆ ಖರೀದಿಸಿದೆ. ಸ್ಫೋಟಕ ಬ್ಯಾಟರ್​​ ನಿಕಿನ್ ಜೋಸ್ 7 ಲಕ್ಷ ರೂ.ಗೆ ಮಂಗಳೂರು ಡ್ರ್ಯಾಗನ್ಸ್​ಗೆ ಬಿಕರಿಯಾದರು. ಮತ್ತೋರ್ವ ಸ್ಫೋಟಕ ಬ್ಯಾಟರ್ ಚೇತನ್ ಎಲ್.ಆರ್​​.ರನ್ನು ಗುಲ್ಬರ್ಗ ಮಿಸ್ಟಿಕ್ಸ್ 6.2 ಲಕ್ಷ ರೂ.ಗೆ ಖರೀದಿಸಿದೆ.

ಆಟಗಾರರ ಹರಾಜಿನ ಬಗ್ಗೆ ಮಾತನಾಡಿದ ಮಹಾರಾಜ ಟ್ರೋಫಿ ಆಯುಕ್ತ ಮತ್ತು ಕೆಎಸ್​​ಸಿಎ ಉಪಾಧ್ಯಕ್ಷ ಬಿ.ಕೆ. ಸಂಪತ್ ಕುಮಾರ್, ''ಫ್ರಾಂಚೈಸಿ ಮಾದರಿಗೆ ಮರಳುವುದರೊಂದಿಗೆ, ಇಂದಿನ ಹರಾಜಿನಲ್ಲಿ ಎಲ್ಲಾ ತಂಡದ ಮಾಲೀಕರ ಉತ್ಸಾಹವು ನೋಡಲು ಅದ್ಭುತವಾಗಿತ್ತು. 700ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿದ್ದರು. ಇದು ಕರ್ನಾಟಕದ ಕ್ರಿಕೆಟ್ ಬೆಳವಣಿಗೆಗೆ ಸಾಕ್ಷಿಯಾಗಿದೆ. ಯುವ ಪ್ರತಿಭೆಗಳಿಗೆ ರಾಜ್ಯ ಮತ್ತು ದೇಶದ ಅತ್ಯುತ್ತಮ ಆಟಗಾರರೊಂದಿಗೆ ಆಡಲು ಇದು ಉತ್ತಮ ವೇದಿಕೆಯಾಗಿದೆ. ಈ ಆವೃತ್ತಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯದ ಆಟಗಾರರು ಅಂತಾರಾಷ್ಟ್ರೀಯ ಸೌಲಭ್ಯದಲ್ಲಿ ಆಡಲು ಅನುವು ಮಾಡಿಕೊಡಲಾಗುವುದು'' ಎಂದರು.

Maharaja Trophy T20 Tournament Player Auction
ಮಹಾರಾಜ ಟ್ರೋಫಿ ಹರಾಜು ಪ್ರಕ್ರಿಯೆ

ತಂಡಗಳ ಸಂಪೂರ್ಣ ತಂಡ ಪಟ್ಟಿ: ಗುಲ್ಬರ್ಗ ಮಿಸ್ಟಿಕ್ಸ್ : ದೇವದತ್ ಪಡಿಕ್ಕಲ್, ಅಪ್ಪಣ್ಣ ಕೆ.ಪಿ., ವೈಶಾಖ್ ವಿಜಯಕುಮಾರ್, ಶರತ್ ಶ್ರೀನಿವಾಸ್, ಚೇತನ್ ಎಲ್.ಆರ್., ಮೊಹಮ್ಮದ್ ಅಕಿಬ್ ಜವಾದ್, ಸ್ಮರಣ್ ಆರ್, ಅನೀಶ್ ಕೆ.ವಿ., ಮ್ಯಾಕ್ನೀಲ್ ನೊರೊನ್ಹಾ, ಶರಣ್ ಗೌಡ್, ಅಭಿಲಾಷ್ ಶೆಟ್ಟಿ, ಹಾರ್ದಿಕ್ ರಾಜ್, ಶಿಮೋನ್ ಲೂಯಿಸ್, ಅವಿನಾಶ್.ಡಿ., ಯಶೋವರ್ಧನ್ ಪರಂತಪ್, ಆದರ್ಶ್ ಪ್ರಜ್ವಲ್, ಅಬುಲ್ ಹಸನ್ ಖಾಲಿದ್ ಮತ್ತು ಶಾನ್ ಟ್ರಿಸ್ತಾನ್ ಜೋಸೆಫ್.

ಹುಬ್ಬಳ್ಳಿ ಟೈಗರ್ಸ್: ಕೆ.ಸಿ.ಕಾರಿಯಪ್ಪ, ಪ್ರವೀಣ್ ದುಬೆ, ಮನೀಶ್ ಪಾಂಡೆ, ಲವ್ನಿತ್ ಸಿಸೋಡಿಯಾ, ಶ್ರೀಜಿತ್ ಕೆ.ಎಲ್., ಮೊಹಮ್ಮದ್ ತಾಹಾ, ವಿದ್ವತ್ ಕಾವೇರಪ್ಪ, ದರ್ಶನ್ ಎಂ.ಬಿ., ಶಿವಂ ಎಂ.ಬಿ., ನಾಗ ಭರತ್, ಸಂತೋಖ್ ಸಿಂಗ್, ಮೋಹಿತ್ ಬಿ.ಎ., ಮನ್ವಂತ್ ಕುಮಾರ್ ಎಲ್, ಮಿತ್ರಕಾಂತ್ ಸಿಂಗ್ ಯಾದವ್, ಮಲ್ಲಿಕ್ ಸಾಬ್ ಜಿ., ನಾಥನ್ ಡಿಮೆಲ್ಲೊ, ರಾಜಶೇಖರ್ ಹರಿಕಾಂತ್ ಮತ್ತು ಕ್ಲೆಮೆಂಟ್ ರಾಜು.

ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ನಿಹಾಲ್ ಉಲ್ಲಾಳ್, ಕೌಶಿಕ್ ವಿ., ಶರತ್ ಹೆಚ್.ಎಸ್., ಕ್ರಾಂತಿ ಕುಮಾರ್, ರೋಹನ್ ಕದಂ, ಶ್ರೇಯಸ್ ಪುರಾಣಿಕ್, ಪ್ರಣವ್ ಭಾಟಿಯಾ, ವಿನಯ್ ಸಾಗರ್, ಆದಿತ್ಯ ಸೋಮಣ್ಣ, ಅಧೋಕ್ಷ ಹೆಗ್ಡೆ, ಪವನ್ ಶ್ರಿದಿ, ರೋಹನ್ ನವೀನ್, ಶಿವರಾಜ್, ರೋಹಿತ್ ಕುಮಾರ್ ಕೆ., ನಿಶ್ಚಿತ್ ರಾವ್, ದೀಪಕ್ ದೇವಾಡಿಗ.

ಮೈಸೂರು ವಾರಿಯರ್ಸ್: ಕರುಣ್ ನಾಯರ್, ಸುಚಿತ್ ಜೆ., ಪ್ರಸಿದ್ಧ್ ಕೃಷ್ಣ, ಶೋಯೆಬ್ ಮ್ಯಾನೇಜರ್, ಸಮರ್ಥ್ ಆರ್., ಕಾರ್ತಿಕ್ ಸಿ.ಎ., ಮನೋಜ್ ಭಾಂಡಗೆ, ವೆಂಕಟೇಶ್ ಎಂ., ತುಷಾರ್ ಸಿಂಗ್, ಕುಶಾಲ್ ವಾಧ್ವಾನಿ, ಶಶಿ ಕುಮಾರ್ ಕೆ., ರಕ್ಷಿತ್ ಎಸ್., ಶ್ರೀಶಾ ಎಸ್. ಆಚಾರ್, ಮೋನಿಶ್ ರೆಡ್ಡಿ, ಆದಿತ್ಯ ಮಣಿ, ಗೌತಮ್ ಮಿಶ್ರಾ, ರಾಹುಲ್ ಸಿಂಗ್ ರಾವತ್ ಮತ್ತು ಭರತ್ ಧುರಿ.

ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್: ಮಿಥುನ್ ಅಭಿಮನ್ಯು, ಮಯಾಂಕ್ ಅಗರ್ವಾಲ್, ಪ್ರದೀಪ್ ಟಿ., ಮೊಹಮ್ಮದ್ ಸರ್ಫರಾಜ್ ಅಶ್ರಫ್, ಪವನ್ ದೇಶಪಾಂಡೆ, ಶುಭಾಂಗ್ ಹೆಗ್ಡೆ, ನಿಶ್ಚಲ್ ಡಿ., ವಿದ್ಯಾಧರ್ ಪಾಟೀಲ್, ಜೆಶ್ವಂತ್ ಆಚಾರ್ಯ, ಜಾಸ್ಪರ್ ಇ.ಜೆ., ಕುಮಾರ್ ಎಲ್.ಆರ್., ಮೊಹ್ಸಿನ್ ಖಾನ್, ಆಶಿಶ್ ಮಹೇಶ್, ರಿಷಿ ಬೋಪಣ್ಣ, ಸೂರಜ್ ಅಹುಜಾ, ಆರೋನ್ ಕ್ರಿಸ್ಟಿ, ಅಭಿಷೇಕ್ ಅಹ್ಲಾವತ್ ಮತ್ತು ಅಮನ್ ಖಾನ್.

ಮಂಗಳೂರು ಡ್ರ್ಯಾಗನ್ಸ್: ರೋನಿತ್ ಮೋರೆ, ಕೃಷ್ಣಪ್ಪ ಗೌತಮ್, ಸಿದ್ಧಾರ್ಥ್ ಕೆ.ವಿ., ನಿಕಿನ್ ಜೋಸ್, ಶರತ್ ಬಿ.ಆರ್., ಪ್ರತೀಕ್ ಜೈನ್, ಅನಿರುದ್ಧ ಜೋಶಿ, ರೋಹನ್ ಪಾಟೀಲ್, ಗೌರವ್ ಧಿಮಾನ್, ಶಿವಕುಮಾರ್ ಬಿಯು, ತಿಪ್ಪಾರೆಡ್ಡಿ, ಆದಿತ್ಯ ನಾಯರ್, ಆದಿತ್ಯ ಗೋಯಲ್, ಆನಂದ್ ದೊಡ್ಮನಿ, ಕೃತಿಕ್ ಕೃಷ್ಣ, ನವೀನ್ ಎಂ.ಜಿ.

ಟೂರ್ನಿಯು ಆಗಸ್ಟ್ 13ರಂದು ಆರಂಭವಾಗಲಿದ್ದು, ಆಗಸ್ಟ್ 29ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಸ್ಟಾರ್ ಸ್ಪೋರ್ಟ್ಸ್ 2 ಹಾಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಕ್ರಿಕೆಟ್ ಪಂದ್ಯಗಳು ನೇರ ಪ್ರಸಾರವಾಗಲಿದೆ. ಫ್ಯಾನ್ ಕೋಡ್ ಆ್ಯಪ್ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರನಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಭಾರತ ಪಾಕ್​ ಪಂದ್ಯ.. ಹೋಟೆಲ್​ ಫುಲ್​ ಬುಕ್​, ವರ್ಕೌಟ್​ ಆಯ್ತು ಕ್ರಿಕೆಟ್​ ಅಭಿಮಾನಿಗಳ ಸೂಪರ್​ ಐಡಿಯಾ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.