ETV Bharat / sports

ಕಳೆದ 8 ಏಷ್ಯಾಕಪ್‌ ಕ್ರಿಕೆಟ್‌ ಸಮರ ಹೇಗಿತ್ತು? ಈ ಸಲವೂ ಕಪ್‌ ನಮ್ದೇನಾ? ಕಂಪ್ಲೀಟ್‌ ಡೀಟೆಲ್ಸ್‌

author img

By

Published : Aug 22, 2022, 10:58 AM IST

ಮುಂದಿನ ವಾರದಿಂದ ಯುಎಇಯಲ್ಲಿ ಏಷ್ಯಾ ಕಪ್​ ಟ್ರೋಫಿ ಆರಂಭವಾಗಲಿದೆ. ಹಾಲಿ ಚಾಂಪಿಯನ್​ ಭಾರತ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಿದರೆ, ಪಾಕಿಸ್ತಾನ ಕೂಡ ಪ್ರಶಸ್ತಿ ಗೆಲ್ಲುವ ಫೇವರೀಟ್​ ತಂಡವಾಗಿ ಕಣಕ್ಕಿಳಿಯಲಿದೆ.

asia-cup
8ನೇ ಏಷ್ಯಾ ಕಪ್​ ಟ್ರೋಫಿ ಮೇಲೆ ಭಾರತ ಕಣ್ಣು

ಏಷ್ಯಾ ಕಪ್- 2022 ಯುಎಇಯಲ್ಲಿ ಆಗಸ್ಟ್ 27 ರಂದು ಪ್ರಾರಂಭವಾಗಲಿದೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಪೂರ್ವ ತಯಾರಿ ಸರಣಿ ಇದಾಗಲಿದೆ. 7 ಬಾರಿಯ ಚಾಂಪಿಯನ್​ ಭಾರತ ಮತ್ತು 2 ಬಾರಿ ಪ್ರಶಸ್ತಿ ವಿಜೇತ ಪಾಕಿಸ್ತಾನ ಟೂರ್ನಿಯ ಫೇವರಿಟ್ ತಂಡಗಳಾಗಿವೆ.

ಒಂದು ಬಾರಿಯೂ ಪ್ರಶಸ್ತಿ ಗೆಲ್ಲದ ಡಾರ್ಕ್ ಹಾರ್ಸ್​ಗಳಾದ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಇನ್ನು ಶ್ರೀಲಂಕಾ ಕೂಡ ಟೂರ್ನಿಯಲ್ಲಿ ಕಮಾಲ್​ ಮಾಡುವ ಇರಾದೆಯಲ್ಲಿದೆ. ಹಾಲಿ ಚಾಂಪಿಯನ್​ ತಂಡವಾಗಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದೆ. ಆಗಸ್ಟ್ 28 ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ 1984 ರ ಉದ್ಘಾಟನಾ ಆವೃತ್ತಿಯಿಂದ ಈವರೆಗೂ 7 ಬಾರಿ ಟೂರ್ನಿಯನ್ನು ಗೆದ್ದಿದ್ದು ಅತ್ಯಂತ ಯಶಸ್ವಿ ತಂಡವಾಗಿದೆ. 2000 ದಿಂದ ನಡೆದ 9 ಟೂರ್ನಿಗಳಲ್ಲಿ ಕೇವಲ 3 ಬಾರಿ ಮಾತ್ರ ಭಾರತ ಜಯ ಕಂಡಿದೆ. ಏಷ್ಯಾ ಕಪ್‌ನ 2000 ದ ಬಳಿಕದ ಆವೃತ್ತಿಗಳ ವಿಜೇತರ ಸಂಕ್ಷಿಪ್ತ ನೋಟ ಇಲ್ಲಿದೆ.

2000- ಪಾಕಿಸ್ತಾನಕ್ಕೆ ಮೊದಲ ಟ್ರೋಫಿ: ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್​ನ 7ನೇ ಆವೃತ್ತಿಯಲ್ಲಿ ಭಾರತ ಮೊದಲ ಬಾರಿಗೆ ಫೈನಲ್​ ತಲುಪದಲ್ಲಿ ವಿಫಲವಾಯಿತು. ಇದರ ಲಾಭ ಪಡೆದ ಪಾಕಿಸ್ತಾನ ಫೈನಲ್​ನಲ್ಲಿ ಶ್ರೀಲಂಕಾವನ್ನು 39 ರನ್​ಗಳಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು ಸಂಪಾದಿಸಿತು. ಟೂರ್ನಿಯಲ್ಲಿ ಭಾರತ, ಬಾಂಗ್ಲಾ, ಶ್ರೀಲಂಕಾ ಪಾಕ್​ ತಂಡಗಳು ಸೆಣಸಾಡಿದ್ದವು.

2004- ಭಾರತ ಸೋಲಿಸಿದ ಲಂಕಾಗೆ 3ನೇ ಪ್ರಶಸ್ತಿ
2004- ಭಾರತ ಸೋಲಿಸಿದ ಲಂಕಾಗೆ 3ನೇ ಪ್ರಶಸ್ತಿ

2004- ಭಾರತ ಸೋಲಿಸಿದ ಲಂಕಾಗೆ 3ನೇ ಪ್ರಶಸ್ತಿ: ಶ್ರೀಲಂಕಾದಲ್ಲಿ ನಡೆದ ಟೂರ್ನಿಯಲ್ಲಿ ಶ್ರೀಲಂಕಾ ಬಲಿಷ್ಠ ಭಾರತವನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಜಯಿಸಿತು. ಕೊಲಂಬೋದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಲಂಕಾದ ಮಾಜಿ ನಾಯಕ ಮರ್ವನ್ ಅಟಪ್ಪಟ್ಟು 87 ಎಸೆತಗಳಲ್ಲಿ 65 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರೆ, ಕುಮಾರ ಸಂಗಕ್ಕಾರ ಅರ್ಧಶತಕದಿಂದ 228 ರನ್ ಗಳಿಸಿತು. ಭಾರತ 203 ರನ್‌ಗಳಿಗೆ ಆಲೌಟ್​ ಆಗಿ ಪ್ರಶಸ್ತಿ ಕೈಚೆಲ್ಲಿತ್ತು.

2010- 5 ಟೂರ್ನಿ ಬಳಿಕ ಭಾರತಕ್ಕೆ ಪಟ್ಟ
2010- 5 ಟೂರ್ನಿ ಬಳಿಕ ಭಾರತಕ್ಕೆ ಪಟ್ಟ

2010- 5 ಟೂರ್ನಿ ಬಳಿಕ ಭಾರತಕ್ಕೆ ಪಟ್ಟ: ರಾಜಕೀಯ ತಿಕ್ಕಾಟದ ಕಾರಣದಿಂದಾಗಿ 6 ವರ್ಷಗಳ ಬಳಿಕ ಏಷ್ಯಾ ಕಪ್​ ಟೂರ್ನಿ ನಡೆಯಿತು. ಶ್ರೀಲಂಕಾದಲ್ಲಿ ನಡೆದ 10 ನೇ ಆವೃತ್ತಿಯ ಟೂರ್ನಿಯಲ್ಲಿ ಭಾರತ ತವರು ತಂಡವನ್ನು 81 ರನ್​ಗಳ ಅಂತರದಲ್ಲಿ ಸೋಲಿಸಿ 5ನೇ ಬಾರಿಗೆ ಚಾಂಪಿಯನ್​ ಆಯಿತು.

2012- ಜಯದ ಅಂಚಿನಲ್ಲಿ ಸೋತ ಬಾಂಗ್ಲಾ, ಪಾಕ್​ಗೆ ಟ್ರೋಫಿ
2012- ಜಯದ ಅಂಚಿನಲ್ಲಿ ಸೋತ ಬಾಂಗ್ಲಾ, ಪಾಕ್​ಗೆ ಟ್ರೋಫಿ

2012- ಜಯದ ಅಂಚಿನಲ್ಲಿ ಸೋತ ಬಾಂಗ್ಲಾ, ಪಾಕ್​ಗೆ ಟ್ರೋಫಿ: ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿ ರೋಚಕ ಅಂತ್ಯ ಕಂಡಿತು. ತವರು ತಂಡವಾದ ಬಾಂಗ್ಲಾ ಮೊದಲ ಬಾರಿಗೆ ಭಾರತ, ಶ್ರೀಲಂಕಾದಂತಹ ತಂಡಗಳನ್ನು ಸೋಲಿಸಿ ಫೈನಲ್ ತಲುಪಿತ್ತು. ಆದರೆ, ಫೈನಲ್​ ಪಂದ್ಯದಲ್ಲಿ ದುರಾದೃಷ್ಟವಶಾತ್​ 2 ರನ್​ಗಳಿಂದ ವೀರೋಚಿತ ಸೋಲು ಕಂಡಿತು. ಈ ಮೂಲಕ ಪಾಕಿಸ್ತಾನ 2ನೇ ಬಾರಿಗೆ ಪ್ರಶಸ್ತಿ ಜಯಿಸಿತು.

2014- ಅಫ್ಘನ್​ ಎಂಟ್ರಿ, ಶ್ರೀಲಂಕಾಗೆ ಟ್ರೋಫಿ
2014- ಅಫ್ಘನ್​ ಎಂಟ್ರಿ, ಶ್ರೀಲಂಕಾಗೆ ಟ್ರೋಫಿ

2014- ಅಫ್ಘನ್​ ಎಂಟ್ರಿ, ಶ್ರೀಲಂಕಾಗೆ ಟ್ರೋಫಿ: ಬಾಂಗ್ಲಾದೇಶದಲ್ಲಿ ನಡೆದ 12ನೇ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ತಂಡ ಮೊದಲ ಬಾರಿಗೆ ಅವಕಾಶ ಪಡೆದುಕೊಂಡಿತು. ಭಾರತ ಈ ಬಾರಿಯೂ ಪ್ರಶಸ್ತಿ ಸುತ್ತು ತಲುಪವಲ್ಲಿ ವಿಫಲವಾಯಿತು. ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್​ ಪಾಕಿಸ್ತಾನ ಮಧ್ಯೆ ನಡೆದ ಫೈನಲ್​ ಪಂದ್ಯದಲ್ಲಿ ಸಿಂಹಳೀಯರು ಜಯ ಸಾಧಿಸಿದರು.

2016- ಬದಲಾದ ಫಾರ್ಮೆಟ್​ ಗೆದ್ದ ಭಾರತ
2016- ಬದಲಾದ ಫಾರ್ಮೆಟ್​ ಗೆದ್ದ ಭಾರತ

2016- ಬದಲಾದ ಫಾರ್ಮೆಟ್​ ಗೆದ್ದ ಭಾರತ: 50 ಓವರ್​ಗಳ ಮಾದರಿಯಲ್ಲಿ ನಡೆಯುತ್ತಿದ್ದ ಏಷ್ಯಾ ಕಪ್​ ಟೂರ್ನಿಯನ್ನು ಬದಲಿಸಿ ಟಿ20 ಮಾದರಿಯಲ್ಲಿ ಮೊದಲ ಬಾರಿಗೆ ನಡೆಸಲಾಯಿತು. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್​ ಆಯಿತು. ಈ ಮೂಲಕ 6ನೇ ಬಾರಿಗೆ ಪ್ರಶಸ್ತಿ ಜಯಿಸಿತು. ಬಾಂಗ್ಲಾದೇಶ ಮತ್ತೆ ಅಂತಿಮ ಹಂತದಲ್ಲಿ ಸೋಲು ಕಂಡು ಪ್ರಶಸ್ತಿಯಿಂದ ವಂಚಿತವಾಯಿತು.

2018- ಕೊನೆಯ ಬಾಲಲ್ಲಿ ಗೆದ್ದ ಭಾರತ
2018- ಕೊನೆಯ ಬಾಲಲ್ಲಿ ಗೆದ್ದ ಭಾರತ

2018- ಕೊನೆಯ ಬಾಲಲ್ಲಿ ಗೆದ್ದ ಭಾರತ: 14 ನೇ ಆವೃತ್ತಿಯ ಏಷ್ಯಾ ಕಪ್​ ಈ ಹಿಂದಿಗಿಂತಲೂ ಅತಿರೋಚಕ ಘಟ್ಟದಲ್ಲಿ ಅಂತ್ಯ ಕಂಡಿತು. ಭಾರತ ಮತ್ತು ಬಾಂಗ್ಲಾದೇಶ ಮಧ್ಯೆ ನಡೆದ ಫೈನಲ್​ ಪಂದ್ಯದಲ್ಲಿ 223 ರನ್​ಗೆ ಭಾರತ ಆಲೌಟ್​ ಆಯಿತು. ಇದನ್ನು ಬೆನ್ನತ್ತಿದ ಬಾಂಗ್ಲಾ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್​ಗಳಿದ್ದಾಗ ಬಾಂಗ್ಲಾ ಆಟಗಾರ ರನೌಟ್​ ಆಗುವ ಮೂಲಕ ಟ್ರೋಫಿ ಮಿಸ್​ ಮಾಡಿಕೊಂಡಿತು. ನಾಯಕನಾಗಿ ರೋಹಿತ್​ ಶರ್ಮಾ ಮೊದಲ ಏಷ್ಯಾ ಕಪ್ ಪ್ರಶಸ್ತಿ ಗೆದ್ದರು.

ಇದನ್ನೂ ಓದಿ: ಭಾರತಕ್ಕೆ ಅದೃಷ್ಟ ತಂದ ದೀಪಕ್ ಹೂಡಾ.. ಈತ ಆಡಿದ ಪಂದ್ಯಗಳಲ್ಲಿ ಸೋತಿಲ್ಲ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.