ETV Bharat / sports

ಪಾಕ್ ತಂಡಕ್ಕೆ ತಾಯ್ನಾಡಿನಲ್ಲೇ ಮುಖಭಂಗ: ಐತಿಹಾಸಿಕ ಟೆಸ್ಟ್​​ ಸರಣಿ ಗೆದ್ದ ಆಸ್ಟ್ರೇಲಿಯಾ

author img

By

Published : Mar 25, 2022, 5:56 PM IST

ಎರಡು ದಶಕಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ಟೆಸ್ಟ್‌ ಸರಣಿ ಗೆದ್ದು ಶುಭಾರಂಭ ಮಾಡಿತು.

Australia win historic test series against pakistan
Australia win historic test series against pakistan

ಲಾಹೋರ್​(ಪಾಕಿಸ್ತಾನ): 24 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ಟೆಸ್ಟ್​ನಲ್ಲಿ​​​ ಐತಿಹಾಸಿಕ ಗೆಲುವು ದಾಖಲಿಸಿತು. ಲಾಹೋರ್​ನಲ್ಲಿ ನಡೆದ ಅಂತಿಮ ಟೆಸ್ಟ್​​ ಪಂದ್ಯದಲ್ಲಿ 115ರನ್​ಗಳಿಂದ ಜಯ ಸಾಧಿಸುವ ಮೂಲಕ ಸರಣಿಯನ್ನು 1-0ರ ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಗಡಾಫಿ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಉಸ್ಮಾನ್ ಖವಾಜ(91) ಸ್ಮಿತ್​(59), ಗ್ರೀನ್​(79) ಹಾಗೂ ಅಲೆಕ್ಸ್ ಕ್ಯಾರಿ(67)ರನ್​ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 391ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನನ ಶಫೀಕ್​(81), ಅಜರ್​ ಅಲಿ(78) ಹಾಗೂ ಬಾಬರ್ ಆಜಂ(67)ರನ್​ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 268 ರನ್​ಗಳಿಕೆ ಮಾಡಿ 123ರನ್​ಗಳ ಹಿನ್ನಡೆ ಅನುಭವಿಸಿತ್ತು.

ಎರಡನೇ ಇನ್ನಿಂಗ್ಸ್​​​ನಲ್ಲಿ ಉಸ್ಮಾನ್ ಖವಾಜ​ ಅಜೇಯ 104ರನ್​, ವಾರ್ನರ್​​ 51ರನ್​ಗಳಿಕೆ ಮಾಡುವ ಮೂಲಕ 3 ವಿಕೆಟ್​ ನಷ್ಟಕ್ಕೆ 227ರನ್​ಗಳಿಕೆ ಮಾಡಿ ಡಿಕ್ಲೇರ್ ಘೋಷಣೆ ಮಾಡಿದೆ. ಜೊತೆಗೆ, ಪಾಕ್ ಗೆಲುವಿಗೆ 351ರನ್​ಗಳ ಗುರಿ ನೀಡಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್ ತಂಡ ಕೇವಲ 235ರನ್​ಗಳಿಗೆ ಆಲೌಟ್ ಆಗುವ ಮೂಲಕ 115ರನ್​ಗಳ ಸೋಲು ಕಂಡಿತು. ಆಸ್ಟ್ರೇಲಿಯಾ ಪರ ಎರಡನೇ ಇನ್ನಿಂಗ್ಸ್​​​ನಲ್ಲಿ ನಾಥನ್ ಲಿಯಾನ್ 5 ವಿಕೆಟ್​ ಪಡೆದುಕೊಂಡರೆ, ನಾಯಕ ಕಮ್ಮಿನ್ಸ್​ 3 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಫೈನಲ್ ಪಂದ್ಯದಲ್ಲಿ 8 ವಿಕೆಟ್ ಕಬಳಿಸಿರುವ ನಾಯಕ ಕಮ್ಮಿನ್ಸ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿದರೆ, ಮೂರು ಟೆಸ್ಟ್​ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ 496ರನ್ ​ಗಳಿಸಿರುವ ಉಸ್ಮಾನ್ ಖವಾಜ​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ರಾವಲ್ಪಿಂಡಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್​​​​ ಪಂದ್ಯದಲ್ಲಿ ಉಭಯ ತಂಡಗಳು ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದರಿಂದ ಪಂದ್ಯ ಡ್ರಾ ಆಗಿತ್ತು.

ಎರಡನೇ ಟೆಸ್ಟ್​​​ ಪಂದ್ಯದಲ್ಲಿ ಗೆಲ್ಲುವ ಅವಕಾಶ ಪಡೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಫಾಲೋ ಆನ್ ಹೇರದೇ ತಪ್ಪು ಮಾಡಿದ್ದರಿಂದ ಗೆಲ್ಲುವ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆದರೆ, ಮೂರನೇ ಟೆಸ್ಟ್​​ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಮ್ಮಿನ್ಸ್ ಪಡೆ ಗೆಲುವು ಸಾಧಿಸಿದೆ. ಇದೀಗ ಲಾಹೋರ್​​ನಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಏಕೈಕ ಟಿ20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಆಸ್ಟ್ರೇಲಿಯಾ ಪಡೆ ಸನ್ನದ್ಧವಾಗಲಿದೆ.

ಇದನ್ನೂ ಓದಿ: ಧೋನಿ ನಾಯಕತ್ವದಲ್ಲಿ ಆಡುವುದೇ ಅದೃಷ್ಟ: ಫಾಫ್​ ಡು ಪ್ಲೆಸಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.