ETV Bharat / sports

2018ರಲ್ಲಿ 6.2 ಕೋಟಿ, 2021ರಲ್ಲಿ 9.27ಕೋಟಿ: ಈ ಬಾರಿ 90 ಲಕ್ಷಕ್ಕೆ ಮಾರಾಟವಾದ ಕನ್ನಡಿಗ!

author img

By

Published : Feb 13, 2022, 1:51 PM IST

2021ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಅವರನ್ನು ಬರೋಬ್ಬರಿ 9.27 ಕೋಟಿ ರೂಗಳಿಗೆ ಖರೀದಿಸಿತ್ತು. ಆದರೆ ಒಂದೇ ಒಂದು ಪಂದ್ಯದಲ್ಲಿಯೂ ಆಡಿಸಿರಲಿಲ್ಲ. ಅಲ್ಲದೆ ಈ ಬಾರಿ ದೇಶಿ ಕ್ರಿಕೆಟ್​ನಲ್ಲೂ ಅವರು ಹೆಚ್ಚಿನ ಪಂದ್ಯಗಳಲ್ಲಿ ಆಡಿರದ ಕಾರಣ ಹರಾಜಿನಲ್ಲಿ ಆಕರ್ಷಣೆಯನ್ನು ಕಳೆದುಕೊಂಡಿದ್ದರು.

Krishnappa Gowtham sold to Lucknow Supergiants at 90 Lakhs
ಕೃಷ್ಣಪ್ಪ ಗೌತಮ್​

ಬೆಂಗಳೂರು: ಕಳೆದ 4 ವರ್ಷಗಳಲ್ಲಿ ಕೋಟಿಗಟ್ಟಲೆ ಹಣ ಬಾಚಿಕೊಂಡಿದ್ದ ಕನ್ನಡಿಗ ಕೃಷ್ಣಪ್ಪ ಗೌತಮ್​ ಅವರನ್ನು 15ನೇ ಆವೃತ್ತಿಯ ಐಪಿಎಲ್​ ಮೆಗಾ ಹರಾಜಿನಲ್ಲಿ ಕೇವಲ 90 ಲಕ್ಷ ರೂಗಳಿಗೆ ಲಖನೌ ಸೂಪರ್​ ಜೈಂಟ್ಸ್​ ಖರೀದಿಸಿದೆ.

2021ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಅವರನ್ನು ಬರೋಬ್ಬರಿ 9.27 ಕೋಟಿ ರೂಗಳಿಗೆ ಖರೀದಿಸಿತ್ತು. ಆದರೆ ಒಂದೇ ಒಂದು ಪಂದ್ಯದಲ್ಲಿ ಆಡಿಸಿರಲಿಲ್ಲ. ಅಲ್ಲದೆ ಈ ಬಾರಿ ದೇಶಿ ಕ್ರಿಕೆಟ್​ನಲ್ಲೂ ಅವರು ಹೆಚ್ಚಿನ ಪಂದ್ಯಗಳಲ್ಲಿ ಆಡಿರದ ಕಾರಣ ಹರಾಜಿನಲ್ಲಿ ಆಕರ್ಷಣೆಯನ್ನು ಕಳೆದುಕೊಂಡಿದ್ದರು.

ಬೌಲಿಂಗ್​ ಆಲ್​ರೌಂಡರ್​ ಆಗಿರುವ ಗೌತಮ್‌ 2017ರಲ್ಲಿ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. 2 ಕೋಟಿ ರೂ.ಗೆ ಮುಂಬೈ ಸೇರಿದ್ದ ಈ ಕ್ರಿಕೆಟಿಗ, ನಂತರ 2 ವರ್ಷಗಳ ಕಾಲ ರಾಜಸ್ಥಾನ್​ ರಾಯಲ್ಸ್​ನಲ್ಲಿ 6.2 ಕೋಟಿ ರೂ ಪಡೆದು ಆಡಿದ್ದರು. 2020ರಲ್ಲಿ ಅಷ್ಟೇ ಮೊತ್ತಕ್ಕೆ ಪಂಜಾಬ್ ಕಿಂಗ್ಸ್​ಗೆ ವರ್ಗಾವಣೆಗೊಂಡಿದ್ದರು.

ಲಖನೌ ಸೂಪರ್ ಜೈಂಟ್ಸ್​ ಖರೀದಿಸಿರುವ ಆಟಗಾರರು:

  • ದೀಪಕ್ ಹೂಡಾ- ಭಾರತೀಯ ಆಲ್ ರೌಂಡರ್ ₹5,75,00,000
  • ಅವೇಶ್ ಖಾನ್- ಭಾರತೀಯ ಬೌಲರ್ ₹10,00,00,000
  • ಜೇಸನ್ ಹೋಲ್ಡರ್- ವಿದೇಶಿ ಆಲ್ ರೌಂಡರ್ ₹8,75,00,000
  • ಅಂಕಿತ್ ಸಿಂಗ್ ರಜಪೂತ್- ಭಾರತೀಯ ಬೌಲರ್ ₹50,00,000
  • ಮಾರ್ಕ್ ವುಡ್ -ವಿದೇಶಿ ಬೌಲರ್ ₹7,50,00,000
  • ಕ್ವಿಂಟನ್ ಡಿ ಕಾಕ್- ವಿದೇಶಿ ವಿಕೆಟ್ ಕೀಪರ್ ₹6,75,00,000
  • ಮನೀಶ್ ಪಾಂಡೆ- ಭಾರತೀಯ ಬ್ಯಾಟ್ಸ್‌ಮನ್ ₹4,60,00,000
  • ಕೆ.ಗೌತಮ್- ಭಾರತೀಯ ಆಲ್ ರೌಂಡರ್ ₹90,00,000
  • ಕೃನಾಲ್ ಪಾಂಡ್ಯ- ಭಾರತೀಯ ಆಲ್ ರೌಂಡರ್ ₹8,25,00,000

ಇದನ್ನೂ ಓದಿ:ವಿಂಡೀಸ್​ ಸ್ಟಾರ್​ ​​ಒಡಿಯನ್​ ಸ್ಮಿತ್​​ಗೆ ಬಂಪರ್ ಲಾಟರಿ: ₹6 ಕೋಟಿಗೆ ಪಂಜಾಬ್ ಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.