ETV Bharat / sports

ಇಂದಿನಿಂದ ಏಷ್ಯಾಕಪ್​​ ಕ್ರಿಕೆಟ್​ ಟೂರ್ನಿ ಆರಂಭ.. ಕಿರೀಟ​ ಗೆಲ್ಲುವಲ್ಲಿ ಯಾರು ಫೇವ್​ರೆಟ್​​?

author img

By ETV Bharat Karnataka Team

Published : Aug 29, 2023, 8:35 PM IST

Updated : Aug 30, 2023, 7:11 AM IST

Asia Cup 2023: ಏಷ್ಯಾಕಪ್ ಕ್ರಿಕೆಟ್ ಟೂರ್ನಿ 2023 ಇಂದಿನಿಂದ ನೇಪಾಳ - ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ ಅರಂಭವಾಗಲಿದೆ. ಸೆಪ್ಟೆಂಬರ್ 2ರಂದು ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ಹಣಾಹಣಿ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ.

know about the asia cup 2023
know about the asia cup 2023

ನವದೆಹಲಿ: ಏಷ್ಯಾಕಪ್ ಕ್ರಿಕೆಟ್ 2023 ಇಂದಿನಿಂದ ಪ್ರಾರಂಭವಾಗಲಿದೆ. ಇದರಲ್ಲಿ 6 ದೇಶಗಳ ತಂಡಗಳು ಭಾಗವಹಿಸಲಿವೆ. ಈ ಬಾರಿ, 7 ಬಾರಿಯ ಚಾಂಪಿಯನ್ ಭಾರತ, 6 ಬಾರಿ ವಿಜೇತ ಶ್ರೀಲಂಕಾ ಮತ್ತು 2 ಬಾರಿ ಕಪ್​ ಗೆದ್ದಿರುವ ಪಾಕಿಸ್ತಾನ ತಂಡಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗುತ್ತಿದೆ. ಅದರಲ್ಲೂ ಪಾಕಿಸ್ತಾನ ಈ ಬಾರಿ ಪ್ರಬಲ ತಂಡವಾಗಿ ಕಂಡು ಬರುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗಷ್ಟೇ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿರುವುದು. ಅಲ್ಲದೇ ಏಕದಿನ ಬ್ಯಾಟಿಂಗ್​ ಶ್ರೇಯಾಂಕದಲ್ಲಿ ನಾಯಕ ಬಾಬರ್​ ಅಜಮ್​ ನಂ.1 ಇದ್ದು, ಬ್ಯಾಟರ್​ಗಳಾದ ಇಮಾಮ್​ ಉಲ್​ ಹಕ್​ ಮತ್ತು ಫಾಕರ್​ ಜಮಾನ್​ ಕ್ರಮವಾಗಿ 3, 5ನೇ ಸ್ಥಾನದಲ್ಲಿದ್ದಾರೆ.

ಜೊತೆಗೆ, ಶ್ರೀಲಂಕಾ ತನ್ನ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸುವ ಲೆಕ್ಕಾಚಾರದಲ್ಲಿದೆ. ಆದರೆ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ನಿಸ್ತೇಜವಾಗಿಯೇನಿಲ್ಲ. ಈ ತಂಡಗಳಿಗೂ ಪುಟಿದೇಳುವ ಸಾಮರ್ಥ್ಯ ಇದೆ. ಇತ್ತೀಚೆಗೆ ಬಾಂಗ್ಲಾದೇಶ ಮತ್ತ ಅಫ್ಘಾನ್ ತಂಡಗಳು​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿವೆ. ನೇಪಾಳವೂ ಈ ಬಾರಿ ತನ್ನ ಬಲವನ್ನು ತೋರಲು ಮುಂದಾಗಿದೆ.

know about the asia cup 2023
ಏಷ್ಯಾಕಪ್​ ವೇಳಾಪಟ್ಟಿ

ಭಾರತ ತಂಡದ ಅಂಕಿ-ಅಂಶಗಳನ್ನು ನೋಡಿದರೆ, 2019ರಿಂದ ಏಕದಿನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದು, ಹೆಚ್ಚು ಗೆಲುವಿನ ರೇಟಿಂಗ್​ ಸಹ ಹೊಂದಿದೆ. ಆದರೆ ಭಾರತ - ಪಾಕಿಸ್ತಾನದ ಪಂದ್ಯಗಳು ಏಷ್ಯಾಕಪ್​ ಮತ್ತು ವಿಶ್ವಕಪ್​ನಲ್ಲಿ ಮಾತ್ರ ಆಗಿರುವುದರಿಂದ ಈ ಮುಖಾಮುಖಿ ಹೆಚ್ಚು ಕಾವು ಪಡೆಯುತ್ತಿದೆ. ಅಲ್ಲದೇ, ನಂ.1 ತಂಡದ ವೇಗದ ಬೌಲಿಂಗ್​ ಭಾರತವನ್ನು ಕಾಡುವ ಭಯ ಇದೆ.

  • A breathtaking aerial perspective captures the pristine expanse of the Multan Cricket Stadium, meticulously prepared to set the stage for the inaugural match of the Asia Cup 2023. pic.twitter.com/q0fHITiSCy

    — Startup Pakistan (@PakStartup) August 29, 2023 " class="align-text-top noRightClick twitterSection" data=" ">

ಪುರುಷರ ಏಷ್ಯಾಕಪ್ 2023 ಇಂದಿನಿಂದ (ಆಗಸ್ಟ್ 30) ಪ್ರಾರಂಭವಾಗಲಿದ್ದು, ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡದ ಹಿನ್ನೆಲೆಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಎರಡು ಆತಿಥೇಯ ರಾಷ್ಟ್ರಗಳಲ್ಲದೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ ಮತ್ತು ನೇಪಾಳದ ತಂಡಗಳು 16ನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಭಾಗವಹಿಸಲಿವೆ.

ಏಕದಿನ ಮತ್ತು ಟಿ20 ಮಾದರಿಯಲ್ಲಿ ಏಷ್ಯಾಕಪ್: ಏಷ್ಯಾಕಪ್ ಪಂದ್ಯಾವಳಿಯನ್ನು 1984ರಿಂದ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಏಕದಿನ ಮತ್ತು ಟಿ20 ಸ್ವರೂಪದಲ್ಲೂ ಆಡಿಸಲಾಗಿದೆ. ಈ ವರ್ಷ ಏಕದಿನ ವಿಶ್ವಕಪ್​ ಹಿನ್ನಲೆಯಲ್ಲಿ ಒನ್​ ಡೇ ಮಾದರಿಯಲ್ಲೇ ಪಂದ್ಯವನ್ನು ಆಡಿಸಲಾಗುತ್ತಿದೆ. ಭಾರತ ತಂಡ ಇದುವರೆಗೂ 6 ಏಕದಿನ ಮತ್ತು ಒಂದು ಟಿ20 ಮಾದರಿಯ ಪ್ರಶಸ್ತಿ ಸೇರಿದಂತೆ ಒಟ್ಟು 7 ಬಾರಿ ಪ್ರಶಸ್ತಿ ಗೆದ್ದಿದೆ. ಅತಿ ಹೆಚ್ಚು ಏಷ್ಯಾಕಪ್ ಗೆದ್ದ ತಂಡ ಭಾರತ. ಶ್ರೀಲಂಕಾ 6 ಮತ್ತು ಪಾಕಿಸ್ತಾನ 2 ಬಾರಿ ಗೆದ್ದಿದೆ.

  • A year ago at same time we were playing against Kenya.

    The day is tomorrow when we will face No. 1 ODI nation Pakistan in the opening match of Asia Cup 2023. Also, India in few days🔥

    Nepalese Cricket has come a long way within a year 🇳🇵❤️#AsiaCup2023 #Nepal #Pakistan #India pic.twitter.com/CGl3tZcmU7

    — Suvam Koirala 🏏 (@SuvamKoirala_45) August 29, 2023 " class="align-text-top noRightClick twitterSection" data=" ">

ಹೇಗೆ ಆಡಿಸಲಾಗುತ್ತದೆ ಏಷ್ಯಾಕಪ್ 2023: ಏಷ್ಯಾಕಪ್ 2023 ಅನ್ನು ಎರಡು ಗುಂಪುಗಳಲ್ಲಿ ಆಡಲಾಗುತ್ತದೆ. ಪಾಕಿಸ್ತಾನ, ಭಾರತ ಮತ್ತು ನೇಪಾಳವು ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾವು ಬಿ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡ ಒಮ್ಮೆ ಮುಖಾಮುಖಿ ಆಗಲಿವೆ. ಇಲ್ಲಿಂದ ಎರಡು ತಂಡಗಳು ಹೊರಗುಳಿಯುತ್ತವೆ. ನಂತರ ಸೂಪರ್​ 4​​ ಹಂತದ ಪಂದ್ಯಗಳು ನಡೆಯಲಿವೆ. ಈ ಹಂತದಲ್ಲಿನ ಟಾಪ್​ ಎರಡು ತಂಡಗಳು ಫೈನಲ್​ ಆಡಲಿವೆ. ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ಫೈನಲ್​ ಹಣಾಹಣಿ ನಡೆಯಲಿದೆ. ಏಷ್ಯಾಕಪ್ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಕೇವಲ 4 ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆಯೋಜಿಸಲಾಗಿದೆ. ಪಾಕಿಸ್ತಾನದ ಮುಲ್ತಾನ್ ಮತ್ತು ಲಾಹೋರ್, ಶ್ರೀಲಂಕಾದ ಕ್ಯಾಂಡಿ ಮತ್ತು ಕೊಲಂಬೊದಲ್ಲಿ ನಡೆಯಲಿವೆ.

  • Exciting times ahead as Mr. Omar Khan OK and Wasim Akram proudly announce Super11 as the title sponsor for the highly anticipated Asia Cup 2023 🏏

    This collaboration promises a thrilling tournament filled with intense cricketing action. Get ready for an unforgettable spectacle!… pic.twitter.com/0YoSXrEmsE

    — Wasim Akram (@wasimakramlive) August 27, 2023 " class="align-text-top noRightClick twitterSection" data=" ">

ಏಷ್ಯಾ ಕಪ್ ತಂಡಗಳು.. ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಕುಲದೀಪ್ ಯಾದವ್, ಪ್ರಸಿದ್ಧ ಕೃಷ್ಣ, ಸಂಜು ಸ್ಯಾಮ್ಸನ್ (ಪ್ರಯಾಣ ಮೀಸಲು).

ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸೀಮ್. , ನಸೀಮ್ ಶಾ, ಶಾಹೀನ್ ಅಫ್ರಿದಿ, ಸೌದ್ ಶಕೀಲ್, ತಯ್ಯಬ್ ತಾಹಿರ್ (ಪ್ರಯಾಣ ಮೀಸಲು).

ಅಫ್ಘಾನಿಸ್ತಾನ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರೆಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಂ ಜನತ್, ಅಬ್ದುಲ್ ರೆಹಮಾನ್, ಶರಫುದ್ದೀನ್ ಅಶ್ರಫ್, ಮುಜೀಬ್, ಮುಜೀಬ್, ಮುಜೀಬ್ ಉರ್ ಸಫಿ, ಫಜಲ್ಹಕ್ ಫಾರೂಕಿ.

ಬಾಂಗ್ಲಾದೇಶ: ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ತೌಹೀದ್ ಹೃದಯೋಯ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್ ಧ್ರುಬೋ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರಹಮಾನ್, ಶೋರ್ಫುಲ್ ಇಸ್ಲಾಂ, ಶಾರ್ಫುಲ್ ಇಸ್ಲಾಂ, ನಸುಮ್. ನಯೀಮ್ ಶೇಖ್, ಶಮೀಮ್ ಹುಸೇನ್, ತಂಜೀದ್ ಹಸನ್ ತಮೀಮ್, ತಂಜಿಮ್ ಹಸನ್ ಸಾಕಿಬ್.

ನೇಪಾಳ: ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಖ್, ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ಆರಿಫ್ ಶೇಖ್, ದೀಪೇಂದರ್ ಸಿಂಗ್ ಐರಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜ್‌ಬಂಶಿ, ಪ್ರತೀಶ್ ಜಿಸಿ, ಮೌಸಮ್ ಜೋರಾ ಧಕಲ್, ಕೆ ಸಂದೀಪ್ ಧಾಕಲ್ ಮಹತೋ, ಅರ್ಜುನ್ ಸೌದ್.

ಶ್ರೀಲಂಕಾ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾನಕ, ದಿಮುತ್ ಕರುಣಾರತ್ನ, ಕುಸಲ್ ಜನಿತ್ ಪೆರೆರಾ, ಕುಸಲ್ ಮೆಂಡಿಸ್ (ಉಪ ನಾಯಕ), ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಮತೀಶ ಪತಿರಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫೆರ್ನಾಂಡೋ ಮತ್ತು ಪ್ರಮೋದ್ ಮದುಶನ್.

ಇದನ್ನೂ ಓದಿ: Asia Cup 2023: ಏಷ್ಯಾಕಪ್​ನ ಗುಂಪು ಹಂತದ ಪಂದ್ಯಗಳಿಗೆ ರಾಹುಲ್​ ಅಲಭ್ಯ: ಕೋಚ್​ ದ್ರಾವಿಡ್​ ಸ್ಪಷ್ಟನೆ

Last Updated : Aug 30, 2023, 7:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.