ETV Bharat / sports

ಇಂಗ್ಲೆಂಡ್​ ಗೆಲ್ಲಿಸಿದ ಜೋ ರೂಟ್​ಗೆ ಸಿಕ್ತು ರಾಜ ಮರ್ಯಾದೆ.. ವಿಡಿಯೋ ನೋಡಿ

author img

By

Published : Jun 6, 2022, 11:13 AM IST

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಜೋ ರೂಟ್​​ಗೆ ಇನ್ನಿಲ್ಲದ ಶ್ಲಾಘನೆ ವ್ಯಕ್ತವಾಗಿದೆ.

Joe Root crickter
Joe Root crickter

ಲಾರ್ಡ್ಸ್​​: ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್​ ಅನೇಕ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಆ್ಯಶಷ್ ಸರಣಿ ಹಾಗೂ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ತಂಡ ಸೋಲು ಕಂಡಿತ್ತು. ಹೀಗಾಗಿ, ಅವರು ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ನಾಯಕತ್ವದಿಂದ ಹೊರಬಂದಿರುವ ರೂಟ್​, ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೋಲುವ ತಂಡವನ್ನ ಗೆಲುವಿನ ದಡ ಸೇರಿಸಿದ ರೂಟ್​, ಎಲ್ಲರಿಗೂ ಹೀರೋ ಆಗಿದ್ದು, ಅವರಿಗೆ ಪೆವಿಲಿಯನ್​​ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಂಗ್ಲೆಂಡ್ ತಂಡದ ನಾಯಕ ಬೆನ್​ ಸ್ಟೋಕ್ಸ್​ ಪ್ರೀತಿಯಿಂದ ಅಪ್ಪಿಕೊಂಡು, ತಮ್ಮ ಪ್ರೀತಿ ಹೊರಹಾಕಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​​ಗೆ ಜಯ ತಂದಿಟ್ಟ 'ಜೋ ರೂಟ್​'.. ಈ ರೀತಿಯಾಗಿ ಟ್ವೀಟ್ ಮಾಡಿದ ಚಿದಂಬರಂ!

ಎರಡನೇ ಇನ್ನಿಂಗ್ಸ್​ನಲ್ಲಿ ಅಜೇಯ 115ರನ್​​ಗಳಿಕೆ ಮಾಡಿದ ರೂಟ್​​, ಪೆವಿಲಿಯನ್​ ಕಡೆ ಹೋಗುತ್ತಿದ್ದಂತೆ ತಂಡದ ಎಲ್ಲ ಆಟಗಾರರು, ಸಹ ಸಿಬ್ಬಂದಿ ಹಾಗೂ ಕೋಚ್​ ಅವರಿಗೆ ರಾಜ ಮರ್ಯಾದೆ ನೀಡಿದ್ದು, ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ಮಹತ್ವದ ಪಂದ್ಯದಲ್ಲಿ ಮೈದಾನದಲ್ಲಿ ಗಟ್ಟಿಯಾಗಿ ನಿಂತು, ಬ್ಯಾಟ್ ಮಾಡಿರುವ ರೂಟ್​ಗೆ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ್ದ 277ರನ್​​​ಗಳ​ ಗುರಿ ಬೆನ್ನಟ್ಟಿದೆ ಇಂಗ್ಲೆಂಡ್ ಕೇವಲ 4 ವಿಕೆಟ್​ನಷ್ಟಕ್ಕೆ 69ರನ್​​ಗಳಿಕೆ ಮಾಡಿ, ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಮಾಜಿ ಕ್ಯಾಪ್ಟನ್ ರೂಟ್, ಬೆನ್​ ಸ್ಟೋಕ್ಸ್ ಹಾಗೂ ಬೆನ್​ ಫೋಕ್ಸ್​ ಜೊತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, 5 ವಿಕೆಟ್​ಗಳ ಗೆಲುವಿಗೆ ಕಾರಣವಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.