ETV Bharat / sports

ಟೆಸ್ಟ್​ನಲ್ಲಿ ಜೋ ರೂಟ್ 9000 ರನ್​.. ಈ ಸಾಧನೆ ಮಾಡಿದ 2ನೇ ಇಂಗ್ಲಿಷ್ ದಾಂಡಿಗ..

author img

By

Published : Aug 14, 2021, 8:38 PM IST

3ನೇ ದಿನ 85.2ನೇ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 9,000 ಮೈಲುಗಲ್ಲನ್ನು ದಾಟಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪರ 9 ಸಾವಿರ ರನ್​ ಗಢಿ ದಾಟಿದ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಆಲಸ್ಟೈರ್ ಕುಕ್ ಟೆಸ್ಟ್​ ಕ್ರಿಕೆಟ್​ನಲ್ಲಿ 12, 472 ರನ್​ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

Joe Root completed 9000 runs in Test cricket
ಟೆಸ್ಟ್​ನಲ್ಲಿ ಜೋ ರೂಟ್ 9000 ರನ್

ಲಂಡನ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಆಂಗ್ಲರ ನಾಯಕ ಜೋ ರೂಟ್​ ಆಕರ್ಷಕ ಶತಕ ಸಿಡಿಸಿದ್ದಲ್ಲದೆ, ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ 9000 ರನ್​ ಪೂರೈಸಿದ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

3ನೇ ದಿನ 85.2ನೇ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 9,000 ಮೈಲುಗಲ್ಲನ್ನು ದಾಟಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪರ 9 ಸಾವಿರ ರನ್​ ಗಡಿ ದಾಟಿದ 2ನೇ ಬ್ಯಾಟ್ಸ್​ಮನ್ ಎನಿಸಿದರು. ಆಲಿಸ್ಟೈರ್ ಕುಕ್ ಟೆಸ್ಟ್​ ಕ್ರಿಕೆಟ್​ನಲ್ಲಿ 12, 472 ರನ್​ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

9000 ಸಾವಿರ ರನ್ ಪೂರೈಸಿದ 2ನೇ ಕಿರಿಯ ಬ್ಯಾಟ್ಸ್​ಮನ್​

ರೂಟ್​ 9000 ರನ್​ಗಳನ್ನು ಪೂರೈಸಿದ ವಿಶ್ವದ 2ನೇ ಕಿರಿಯ ಬ್ಯಾಟ್ಸ್​ಮನ್ ಎನಿಸಿದರು. ರೂಟ್​ 30 ವರ್ಷ 227 ದಿನಗಳಲ್ಲಿ ಈ ಸಾಧನೆ ಮಾಡಿದರೆ, ಕುಕ್​ 30 ವರ್ಷ 159 ದಿನಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. 3ನೇ ಸ್ಥಾನದಲ್ಲಿರುವ ಸಚಿನ್​ 30 ವರ್ಷ 253 ದಿನ ತೆಗೆದುಕೊಂಡಿದ್ದರು.

ಜೋ ರೂಟ್​ ವಿಶೇಷ ಮೈಲುಗಲ್ಲುಗಳು

  • ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 16,000 ರನ್​ ಪೂರೈಸಿದ ಮೊದಲ ಇಂಗ್ಲಿಷ್ ಬ್ಯಾಟ್ಸ್​ಮನ್​
  • ಟೆಸ್ಟ್​ ಕ್ರಿಕೆಟ್​ನಲ್ಲಿ 9000 ರನ್​ ಪೂರೈಸಿದ 2ನೇ ಇಂಗ್ಲೆಂಡ್ ಕ್ರಿಕೆಟರ್​
  • ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 38ನೇ ಶತಕ
  • ಟೆಸ್ಟ್​ ಕ್ರಿಕೆಟ್​ನಲ್ಲಿ 22ನೇ ಶತಕ
  • 2021ರಲ್ಲಿ ಜೋ ರೂಟ್​ ಬ್ಯಾಟ್​ನಿಂದ ಬಂದ 5ನೇ ಶತಕ
  • ಭಾರತದ ವಿರುದ್ಧ 10ನೇ ಅಂತಾರಾಷ್ಟ್ರೀಯ ಶತಕ

ಇದನ್ನು ಓದಿ : ತಂಡದಿಂದ ಕೈಬಿಟ್ಟ ನೋವನ್ನೇ ಇಂಧನವಾಗಿಸಿಕೊಂಡು ಕನ್ನಡಿಗ ಕೆ ಎಲ್‌ ರಾಹುಲ್​ ಭರ್ಜರಿ ಕಮ್​ಬ್ಯಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.