ETV Bharat / sports

ಜಡೇಜಾ ಅಜೇಯ 175: 574/8ಕ್ಕೆ ಡಿಕ್ಲೇರ್​ ಘೋಷಿಸಿಕೊಂಡ ಟೀಮ್ ಇಂಡಿಯಾ

author img

By

Published : Mar 5, 2022, 3:17 PM IST

ಶುಕ್ರವಾರ 6 ವಿಕೆಟ್​ ಕಳೆದುಕೊಂಡು 357 ರನ್​ಗಳಿಸಿದ್ದ ಭಾರತ 2ನೇ ದಿನ ಜಡೇಜಾ ಶತಕ ಮತ್ತು ಅಶ್ವಿನ್ ಅರ್ಧಶತಕದ ನೆರವಿನಿಂದ 574 ರನ್​ಗಳ ಬೃಹತ್​ ಮೊತ್ತ ದಾಖಲಿಸಿತು. 228 ಎಸೆತಗಳನ್ನೆದರುಸಿದ ಜಡೇಜಾ 17 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 175 ರನ್​ಗಳಿಸಿದರು.

Jadeja smashes 175 not out as India declare at 574 for 8
ರವೀಂದ್ರ ಜಡೇಜಾ ಅಜೇಯ ಶತಕ

ಮೊಹಾಲಿ: ರವೀಂದ್ರ ಜಡೇಜಾ ಅವರ ಅಜೇಯ ಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 574 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿದೆ.

ಶುಕ್ರವಾರ 6 ವಿಕೆಟ್​ ಕಳೆದುಕೊಂಡು 357 ರನ್​ಗಳಿಸಿದ್ದ ಭಾರತ 2ನೇ ದಿನ ಜಡೇಜಾ ಶತಕ ಮತ್ತು ಅಶ್ವಿನ್ ಅರ್ಧಶತಕದ ನೆರವಿನಿಂದ 574 ರನ್​ಗಳ ಬೃಹತ್​ ಮೊತ್ತ ದಾಖಲಿಸಿತು. 228 ಎಸೆತಗಳನ್ನೆದುರಿಸಿದ ಜಡೇಜಾ 17 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 175 ರನ್​ಗಳಿಸಿದರು. ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ್ದ ಜಡೇಜಾ ಈ ಶತಕದ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

ನಿನ್ನೆ ಜಡೇಜಾ ಜೊತೆಗೆ ಅಜೇಯರಾಗುಳಿದಿದ್ದ ರವಿಚಂದ್ರನ್ ಅಶ್ವಿನ್​ 7ನೇ ವಿಕೆಟ್​ ಜೊತೆಯಾಟದಲ್ಲಿ 130 ರನ್​ ಸೇರಿಸಲು ನೆರವಾಗಿದ್ದರು. ಈ ಸ್ಪಿನ್​ ಜೋಡಿ ಶ್ರೀಲಂಕಾ ಬೌಲರ್​ಗಳನ್ನು 20 ಕ್ಕೂ ಹೆಚ್ಚು ಓವರ್​ಗಳ ಕಾಲ ಕಾಡಿದರು. ಅಶ್ವಿನ್​ 82 ಎಸೆತಗಳಲ್ಲಿ 8 ಬೌಂಡರಿ ಸಹಿತ 61 ರನ್​ಗಳಿಸಿ ಔಟಾದರು.

ಅಶ್ವಿನ್ ಔಟಾಗುತ್ತಿದ್ದಂತೆ ಜಡೇಜಾ ಸ್ಫೋಟಕ ಬ್ಯಾಟಿಂಗ್​ಗೆ ಮೊರೆ ಹೋದರು. 9ನೇ ವಿಕೆಟ್​ಗೆ ಶಮಿ ಜೊತೆ(34 ಎಸೆತಗಳಲ್ಲಿ ಅಜೇಯ 20) 103 ರನ್​ಗಳ ಜೊತೆಯಾಟ ನಡೆಸಿದರು. ದ್ವಿಶತಕಕ್ಕೆ 25 ರನ್​ಗಳ ಅಗತ್ಯವಿದ್ದ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಡಿಕ್ಲೇರ್​ ಘೋಷಿಸಿದರು.

ಶ್ರೀಲಂಕಾ ಪರ ಎಂಬುಲ್ದೇನಿಯಾ 46 ಓವರ್​ಗಳಲ್ಲಿ 188 ರನ್​ ನೀಡಿ 2 ವಿಕೆಟ್​, ಸುರಂಗ ಲಕ್ಮಲ್​ 90ಕ್ಕೆ 2, ವಿಶ್ವ ಫರ್ನಾಂಡೊ 135ಕ್ಕೆ 2 ಹಾಗೂ ಧನಂಜಯ ಡಿಸಿಲ್ವಾ 79ಕ್ಕೆ 1 ವಿಕೆಟ್ ಪಡೆದರು. ಮೊದಲ ದಿನ ರೋಹಿತ್ ವಿಕೆಟ್​ ಪಡೆದಿದ್ದ ಲಹಿರು ಕುಮಾರ ಗಾಯಗೊಂಡಿದ್ದರಿಂದ ಇಂದು ಕಣಕ್ಕಿಳಿಯಲಿಲ್ಲ.

ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್​: 574/8 ಡಿಕ್ಲೇರ್

ರವೀಂದ್ರ ಜಡೇಜಾ ಅಜೇಯ 175, ರಿಷಭ್ ಪಂತ್ 96, ಹನುಮ ವಿಹಾರಿ 38, ವಿರಾಟ್​ ಕೊಹ್ಲಿ 45, ಅಶ್ವಿನ್ 61, ಮಯಾಂಕ್ ಅಗರ್ವಾಲ್ 33, ರೋಹಿತ್ ಶರ್ಮಾ 29, ಶಮಿ ಅಜೇಯ 20

ಇದನ್ನೂ ಓದಿ:ವಾರ್ನಿ ನೀವು ಎಂದೆಂದಿಗೂ ನಮ್ಮ ಕ್ಯಾಪ್ಟನ್‌, ಲೀಡರ್‌, ರಾಯಲ್ ಆಗಿರುತ್ತೀರಿ: ಶೇನ್‌ ವಾರ್ನ್‌ ನಿಧನಕ್ಕೆ RR ಭಾವನಾತ್ಮಕ ಸಂದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.