ETV Bharat / sports

ಲಾರ್ಡ್ಸ್‌ ನೆಲದಲ್ಲಿದ್ದ ಗಂಗೂಲಿ ದಾಖಲೆ ಮುರಿದ ನ್ಯೂಜಿಲೆಂಡ್ ಕಾನ್ವೆ

author img

By

Published : Jun 3, 2021, 3:42 PM IST

ಈ ಸಾಧನೆ ಮಾಡಿದ ಬಳಿಕ ಮಾತನಾಡಿದ ನ್ಯೂಜಿಲೆಂಡ್ ಆಟಗಾರ ಕಾನ್ವೆ, ಇದು ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ದಿನ, ಇದು ಉತ್ತಮ ಆರಂಭದ ಕನಸು ನನಸಾದಂತೆ ಆಗಿದೆ. ಈ ಖುಷಿಯ ಕ್ಷಣದಿಂದ ಹೊರಬರಲು ನನಗೆ ಕೆಲ ದಿನಗಳು ಬೇಕಾಗುತ್ತವೆ ಎಂದಿದ್ದಾರೆ.

it-is-surreal-nz-opener-conway-after-breaking-gangulys-record
ಗಂಗೂಲಿ ಹೆಸರಲ್ಲಿದ್ದ 25 ವರ್ಷದ ದಾಖಲೆ ಮುರಿದ ನ್ಯೂಜಿಲೆಂಡ್ ಕಾನ್ವೆ

ಲಂಡನ್​​​: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆ, ಸೌರವ್ ಗಂಗೂಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

1996ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಎಡಗೈ ಆಟಗಾರ ಗಂಗೂಲಿಯು ತಮ್ಮ ಪಾದಾರ್ಪಣೆ ಪಂದ್ಯದಲ್ಲಿ 131ರನ್ನು ಸಿಡಿಸಿ ಈ ಸಾಧನೆ ಮಾಡಿದ್ದರು. ಇದೀಗ ಡೆವೊನ್ ಕಾನ್ವೆ ತಮ್ಮ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಈ ದಾಖಲೆ ಮುರಿದಿದ್ದಾರೆ.

ಈ ಸಾಧನೆಯ ಸಾಲಿನಲ್ಲಿ ಲಾರ್ಡ್ಸ್​​​​ನ ಅಂಗಳದಲ್ಲಿ ಆಸ್ಟ್ರೇಲಿಯಾದ ಹ್ಯಾರಿ ಗ್ರಹಾಂ 1893ರಲ್ಲಿ 107ರನ್ ಗಳಿಸಿದ್ದರು. ಅಲ್ಲದೆ ಆ್ಯಂಡ್ರೂ ಸ್ಟ್ರಾಸ್ 112, ಮ್ಯಾಟ್ ಪ್ರಿಯರ್ 126 ರನ್​ ದಾಖಲಿಸಿದ್ದರು.

ಈ ಸಾಧನೆ ಮಾಡಿದ ಬಳಿಕ ಮಾತನಾಡಿದ ನ್ಯೂಜಿಲೆಂಡ್ ಆಟಗಾರ ಕಾನ್ವೆ, ಇದು ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ದಿನ, ಇದು ಉತ್ತಮ ಆರಂಭದ ಕನಸು ನನಸಾದಂತೆ ಆಗಿದೆ. ಈ ಖುಷಿಯ ಕ್ಷಣದಿಂದ ಹೊರಬರಲು ನನಗೆ ಕೆಲ ದಿನಗಳು ಬೇಕಾಗುತ್ತವೆ ಎಂದಿದ್ದಾರೆ.

ಕಾನ್ವೆ ಮೂಲತಃ ದಕ್ಷಿಣ ಆಫ್ರಿಕಾದವರು, 2017ರಲ್ಲಿ ನ್ಯೂಜಿಲೆಂಡ್​​​ಗೆ ಬಂದು ನೆಲೆಸಿದ್ದರು. ಮೊದಲಿಗೆ ದೇಶಿಯ ಮಟ್ಟದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಫ್ರ್ಯಾಂಚೈಸ್ ಮಟ್ಟದಲ್ಲಿ ಲಯನ್ಸ್​ಗಾಗಿ 12 ಪ್ರಥಮ ದರ್ಜೆ ಪಂದ್ಯಾಟ ಆಡಿದ್ದರು.

ನನಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಅವಕಾಶ ನೀಡಿದ್ದಕ್ಕೆ ತಂಡಕ್ಕೆ ಧನ್ಯವಾದಗಳು. ನಾನು ಖಂಡಿತವಾಗಿಯೂ ಮೊದಲ ಶತಕದ ಕುರಿತು ಯಾವುದೇ ಯೋಚನೆ ಹೊಂದಿರಲಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.