ETV Bharat / sports

ಐರ್ಲೆಂಡ್​ ಎದುರು ಟಾಸ್​ಗೆದ್ದು ಬೌಲಿಂಗ್​ ಆಯ್ಕೆ: ಉಮ್ರನ್​ ಮಲ್ಲಿಕ್​ ಪಾದಾರ್ಪಣೆ

author img

By

Published : Jun 26, 2022, 10:10 PM IST

ಐರ್ಲೆಂಡ್ ಎದುರಿನ ಮೊದಲ ಟಿ- 20 ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ.

ಐರ್ಲೆಂಡ್​ ಎದುರು ಟಾಸ್​ಗೆದ್ದು ಬೌಲಿಂಗ್​ ಆಯ್ಕೆ
ಐರ್ಲೆಂಡ್​ ಎದುರು ಟಾಸ್​ಗೆದ್ದು ಬೌಲಿಂಗ್​ ಆಯ್ಕೆ

ಡಬ್ಲಿನ್​(ಐರ್ಲೆಂಡ್): ಐರ್ಲೆಂಡ್ ಎದುರಿನ ಮೊದಲ ಟಿ- 20 ಪಂದ್ಯದಲ್ಲಿ ಭಾರತವು ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ. ತಂಡದ 11ರಲ್ಲಿ ಉಮ್ರಾನ್​ ಮಲ್ಲಿಕ್​ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಹಾರ್ದಿಕ್​ ಪಾಂಡ್ಯ ಈ ಪಂದ್ಯದ ನಾಯಕತ್ವ ವಹಿಸಿದ್ದಾರೆ. ಐರ್ಲೆಂಡ್ ತಂಡದ ಕಾನರ್ ಓಲ್ಫರ್ಟ್ ಕೂಡ ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಈ ಪಂದ್ಯದ ಮುಖಾಂತರ ಅಂತಾರಾಷ್ಟ್ರೀಯ ತಂಡದ ನಾಯಕತ್ವವನ್ನು ಮೊದಲ ಬಾರಿ ವಹಿಸಿಕೊಂಡಿದ್ದು, ಅವರು ನಾಯಕರಾಗಿ ಡೆಬ್ಯು ಮಾಡುತ್ತಿದ್ದಾರೆ. ಐಪಿಎಲ್​ನಲ್ಲಿ ಗುಜರಾತ್​ ಟೈಟನ್ಸ್‌ ನಾಯಕತ್ವದಲ್ಲಿ ಹಾರ್ದಿಕ್​ ಉತ್ತಮ ನಾಯಕತ್ವ ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಐಪಿಎಲ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದ ಉಮ್ರಾನ್​ ಮಲ್ಲಿಕ್​ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಅವಕಾಶ ಸಿಕ್ಕಿದರೂ ಪಂದ್ಯಕ್ಕೆ ಪಾದಾರ್ಪಣೆ ಮಾಡಿರಲಿಲ್ಲ. ಕಾಶ್ಮಿರದ ಹುಡುಗ ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಡೆಬ್ಯು ಆಗುತ್ತಿದ್ದಾರೆ.

ಐರ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಎರಡು ಟಿ 20ಗಳನ್ನು ಆಡಲಿದೆ. ಅದರ ಮೊದಲ ಪಂದ್ಯ ಇಂದು ಐರ್ಲೆಂಡ್​ನ ಡಬ್ಲಿನ್​ನಲ್ಲಿ ನಡೆಯುತ್ತಿದೆ. ಎರಡನೇ ಪಂದ್ಯವು ಜೂನ್​ 28ರಂದು ನಡೆಯಲಿದೆ.

ಐರ್ಲೆಂಡ್ ಆಟಗಾರರು: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್​ ಕೀಪರ್​), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಆಂಡಿ ಮ್ಯಾಕ್‌ಬ್ರೈನ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಕಾನರ್ ಓಲ್ಫರ್ಟ್

ಭಾರತದ ಆಟಗಾರರು: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದಿನೇಶ್ ಕಾರ್ತಿಕ್(ವಿಕೆಟ್​ ಕೀಪರ್​), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್.

ಇದನ್ನೂ ಓದಿ: ರಣಜಿ ಫೈನಲ್​: ಮಧ್ಯಪ್ರದೇಶಕ್ಕೆ ಐತಿಹಾಸಿಕ ರಣಜಿ ಟ್ರೋಫಿ.. ಬಲಿಷ್ಠ ಮುಂಬೈಗೆ ಗರ್ವಭಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.