ETV Bharat / sports

MI vs GT: ಡೆತ್​ ಓವರ್​​ನಲ್ಲಿ ಮಿಲ್ಲರ್​, ಮನೋಹರ್​ ಅಬ್ಬರ: ಮುಂಬೈಗೆ 208 ರನ್​ ಗುರಿ

author img

By

Published : Apr 25, 2023, 7:21 PM IST

Updated : Apr 25, 2023, 10:50 PM IST

ಗುಜರಾತ್​ ವಿರುದ್ಧ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

MI vs GT
MI vs GT

ಅಹಮದಾಬಾದ್​ (ಗುಜರಾತ್​): ಶುಭಮನ್​ ಗಿಲ್​, ಅಭಿನವ್​ ಮನೋಹರ್ ಮತ್ತು ಡೇವಿಡ್​ ಮಿಲ್ಲರ್​ ಅಬ್ಬರದ ಬ್ಯಾಟಿಂಗ್​ ಬಲದಿಂದ ಕೊನೆ ಐದು ಓವರ್​ನಲ್ಲಿ 77 ರನ್​ ಗಳಿಸಿದ ಗುಜರಾತ್​ ಟೈಟಾನ್ಸ್ 6 ವಿಕೆಟ್​ ನಷ್ಟಕ್ಕೆ 207 ರನ್​ ಕಲೆಹಾಕಿತು. ಆರಂಭಿಕ ಬೃಹತ್​ ಜೊತೆಯಾಟದ ಕೊರತೆಯ ನಡುವೆ ಗುಜರಾತ್​ ಕೊನೆಯ ಓವರ್​ಗಳಲ್ಲಿ ಕಮ್​ ಬ್ಯಾಕ್ ಮಾಡಿದ್ದು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ತಂಡಕ್ಕೆ ಆಸರೆ ಆದ ಕಾರಣ ಮುಂಬೈಗೆ 208 ರನ್​ನ ಗುರಿ ನೀಡಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಬಂದ ಗುಜರಾತ್​ಗೆ ಅರಂಭಿಕ ವೃದ್ಧಿಮಾನ್​ ಸಹಾರ ವಿಕೆಟ್​ ನಷ್ಟವಾಯಿತು. ಕೇವಲ ನಾಲ್ಕು ರನ್​ಗೆ ಔಟ್​ ಆದರು. ಅವರ ನಂತರ ಬಂದ ನಾಯಕ ಹಾರ್ದಿಕ್​ ಪಾಂಡ್ಯ ಶುಭಮನ್​ ಗಿಲ್​ ಸಾಥ್​ ನೀಡಲಿಲ್ಲ. ಹಾರ್ದಿಕ್​ 13 ರನ್​ ಔಟ್​ ಆದರೆ ವಿಜಯ್​ ಶಂಕರ್​ 19 ರನ್​ ವಿಕೆಟ್​ ಒಪ್ಪಿಸಿದರು.

ನಂತರ ಬಂದ ಡೇವಿಡ್​ ಮಿಲ್ಲರ್​ ಮತ್ತು ಅಭಿನವ್​ ಮನೋಹರ್​ ಉತ್ತಮ ಜೊತೆಯಾಟ ಮಾಡಿದರು. ಈ ಇಬ್ಬರ ಜೋಡಿ ರನ್​ ಮಳೆಗೈದಿತು. ಪಿಯೂಷ್ ಚಾವ್ಲಾ ಅವರ 15ನೇ ಓವರ್​ನಲ್ಲಿ 16 ರನ್​ ತಂದರು. ಅಲ್ಲಿಂದ ತಂಡದ ಮೊತ್ತಕ್ಕೆ ವೇಗ ಹೆಚ್ಚಾಯಿತು. 17ನೇ ಓವರ್​ನಲ್ಲಿ ಮೆರಿಡಿತ್​ಗೆ 13 ರನ್​ ಮತ್ತು 18ನೇ ಓವರ್​ನಲ್ಲಿ ಕ್ಯಾಮೆರಾನ್​ ಗ್ರೀನ್​ಗೆ 22 ರನ್​ ಮಿಲ್ಲರ್​ ಮನೋಹರ್​ ಜೋಡಿ ಚಚ್ಚಿತು. ಇದರಿಂದ 14 ಓವರ್​ ಅಂತ್ಯಕ್ಕೆ 113 ಇದ್ದ ಸ್ಕೋರ್​ 172ಕ್ಕೆ ಏರಿತ್ತು.

ಅಭಿನವ್​ ಮನೋಹರ್​ 21 ಬಾಲ್​ನಲ್ಲಿ 3 ಸಿಕ್ಸ್​ ಮತ್ತು ಬೌಂಡರಿಯಿಂದ 42 ರನ್​ ಗಳಿಸಿ ಔಟ್​ ಆದರೆ, ಡೇವಿಡ್​ ಮಿಲ್ಲರ್​ 22 ಬಾಲ್​ನಲ್ಲಿ 4 ಸಿಕ್ಸ್​ ಮತ್ತು 2 ಬೌಂಡರಿಯಿಂದ 46 ರನ್​ ಕಲೆಹಾಕಿದರು. ಕೊನೆಯಲ್ಲಿ ತೆವಾಟಿಯ ಸಹ ಅಬ್ಬರಿಸಿದರು. 5 ಬಾಲ್​ ಎದುರಿಸಿ 3 ಸಿಕ್ಸರ್​ನಿಂದ 20 ರನ್​ ಜೋಡಿಸಿದರು. ಇವರ ಡೆತ್​ ಓವರ್​ನ ಬ್ಯಾಟಿಂಗ್​ ಅಬ್ಬರಕ್ಕೆ ಗುಜರಾತ್​ ಮೊತ್ತ 207ಕ್ಕೆ ಏರಿತು.

ಮುಂಬೈ ಪರ ಪಿಯೂಷ್ ಚಾವ್ಲಾ 2 ವಿಕೆಟ್​ ಪಡೆದರೆ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡೂಲ್ಕರ್, ರಿಲೆ ಮೆರೆಡಿತ್ ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ತಲಾ ಒಂದು ವಿಕೆಟ್​ ಪಡೆದರು.

ತಂಡಗಳು ಇಂತಿದೆ..: ಗುಜರಾತ್​ ಟೈಟಾನ್ಸ್​: ಶುಭಮನ್​ ಗಿಲ್, ವೃದ್ಧಿಮಾನ್​ ಸಹಾ (ವಿಕೆಟ್​ ಕೀಪರ್​), ವಿಜಯ್​ ಶಂಕರ್, ಹಾರ್ದಿಕ್​ ಪಾಂಡ್ಯ (ನಾಯಕ), ಅಭಿನವ್​ ಮನೋಹರ್, ಡೇವಿಡ್​ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡೂಲ್ಕರ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್

ಇದನ್ನೂ ಓದಿ: IPLನಲ್ಲಿ ಇಂದು: ಕ್ವಾಲಿಫೈಯರ್​ನತ್ತ ಗುಜರಾತ್​ ಚಿತ್ತ: ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಮುಂಬೈ ಫೈಟ್​​

Last Updated : Apr 25, 2023, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.