ETV Bharat / sports

ಆರ್​ಸಿಬಿ vs ಪಂಜಾಬ್​ ಹೈ ವೋಲ್ಟೇಜ್ ಪಂದ್ಯ: ಗೆಲುವಿಗಾಗಿ ಸಂಜೆ ಹಾಲಿ-ಮಾಜಿಗಳ ಫೈಟ್​​

author img

By

Published : Apr 30, 2021, 10:48 AM IST

ತಾನು ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು ಪ್ಲೆ ಆಫ್ಸ್‌ ಸನಿಹದಲ್ಲಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಪಂಜಾಬ್‌ ಕಿಂಗ್ಸ್ ವಿರುದ್ಧ ಗೆಲುವು ಪಡೆದು ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಬಲಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ, ಕೆ.ಎಲ್‌ ರಾಹುಲ್‌ ನೇತೃತ್ವದ ಪಂಜಾಬ್‌ ಕಿಂಗ್ಸ್, ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು ಮಾತ್ರ. ಹಾಗಾಗಿ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಆರ್​ಸಿಬಿ vs ಪಂಜಾಬ್​ ಹೈ ವೋಲ್ಟೇಜ್ ಪಂದ್ಯ
ಆರ್​ಸಿಬಿ vs ಪಂಜಾಬ್​ ಹೈ ವೋಲ್ಟೇಜ್ ಪಂದ್ಯ

ಅಹ್ಮದಾಬಾದ್‌: ಇಂದು ಸಂಜೆ ಇಲ್ಲಿನ ಮೊಟೆರೋ​ ಕ್ರೀಡಾಂಗಣದಲ್ಲಿ ಬಲಿಷ್ಠ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಪಂಜಾಬ್​​ ಕಿಂಗ್ಸ್ ಮುಖಾಮುಖಿ ಆಗುತ್ತಿವೆ.

ಈ ಬಾರಿಯ ಐಪಿಎಲ್​ನಲ್ಲಿ ಸತತ 4 ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್​ನಲ್ಲಿರುವ ಆರ್​ಸಿಬಿ ತಂಡ ಆಡಿದ ಆರು ಪಂದ್ಯಗಳಲ್ಲಿ 5 ರಲ್ಲಿ ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಪಂಜಾಬ್​ ತಂಡ ಆಡಿದ ಆರು ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಗೆದ್ದು, ಗೆಲುವಿನ ಕಾತುರದಲ್ಲಿದೆ.

ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ಕೆ.ಎಲ್‌ ರಾಹುಲ್‌ ನೇತೃತ್ವದ ಪಂಜಾಬ್‌ ಕಿಂಗ್ಸ್, ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು ಮಾತ್ರ. ಹಾಗಾಗಿ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಆರ್​ಸಿಬಿಗೆ ಮ್ಯಾಕ್ಸಿ, ಎಬಿಡಿ ಬಲ:

ಆರ್​ಸಿಬಿಗೆ ತಂಡಕ್ಕೆ ನಾಯಕ ವಿರಾಟ್​ ಕೊಹ್ಲಿ ಮತ್ತು ದೇವದತ್​ ಪಡಿಕ್ಕಲ್​ ಸಾಲಿಡ್​ ಓಪನಿಂಗ್​ ನೀಡುತ್ತಿದ್ದಾರೆ. ಪವರ್​ ಪ್ಲೇಯಲ್ಲಿ ಉತ್ತಮ ರನ್​​ ಕಲೆಹಾಕುತ್ತಿರುವ ಈ ದಾಂಡಿಗರು, ಮಿಡ್ಲ್‌ ಆರ್ಡರ್​ ಬ್ಯಾಟ್ಸ್‌ಮನ್​ಗಳಿಗೆ ಹೆಚ್ಚಿನ ಹೊರೆ ನೀಡುತ್ತಿಲ್ಲ. ಇದೇ ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸಿ​​ ಮೊದಲ ಪಂದ್ಯದಿಂದಲೂ ಅಬ್ಬರಿಸುತ್ತಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಫಾರ್ಮ್​ ಕಂಡುಕೊಂಡಿರುವ ಅವರು ಆರೆಂಜ್​ ಕ್ಯಾಪ್​​ ರೇಸ್​​ನಲ್ಲಿದ್ದಾರೆ. ಇವರಿಗೆ ಮಿ.360 ಡಿಗ್ರಿ ಎಬಿಡಿ ಉತ್ತಮ ಸಾಥ್​​ ನೀಡುತ್ತಿದ್ದಾರೆ. ಮ್ಯಾಕ್ಸಿ ಡೆತ್​ಓವರ್​ನಲ್ಲಿ ಎದುರಾಳಿ ತಂಡದ ಬೌಲರ್​ಗಳ ಬೆವರಿಳಿಸಬಲ್ಲರು. ಒಟ್ಟಾರೆ ಆರ್​ಸಿಬಿ ಬ್ಯಾಟಿಂಗ್​ ಲೈನ್​ ಆಪ್​ ಸಖತ್​​ ಆಗಿ ವರ್ಕೌಟ್​ ಆಗುತ್ತಿದ್ದು, ಇಂದು ಕೂಡಾ ಉತ್ತಮ ಪ್ರದರ್ಶನ ನೀಡುವುದೇ ಅನ್ನೋದನ್ನು ಕಾದು ನೋಡಬೇಕು.

ಬೌಲಿಂಗ್​ ವಿಭಾಗದಲ್ಲಿ ಮೊಹಮ್ಮದ್​ ಸಿರಾಜ್​ ಹೊಸ ಬಾಲ್​ ಮತ್ತು ಡೆತ್​ ಓವರ್​​ಗಳಲ್ಲಿ ಸಖತ್​ ಸ್ಪೆಲ್ ಮಾಡ್ತಿದ್ದಾರೆ. ಈ ಸೀಸನ್​​ನಲ್ಲಿ ಹೆಚ್ಚು ಡಾಟ್​ ಬಾಲ್​ ಮಾಡಿರುವ ಸಿರಾಜ್​ ತಂಡಕ್ಕೆ ಅಗತ್ಯ ಸಮಯದಲ್ಲಿ ಬ್ರೇಕ್‌ತ್ರೂ ತಂದು ಕೊಡಬಲ್ಲ ತಾಕತ್ತಿರುವ ಆಟಗಾರ. ಪರ್ಪಲ್​ ಕ್ಯಾಪ್​ ಹೋಲ್ಡರ್​ ಹರ್ಷಲ್​ ಪಟೇಲ್​ ತಂಡಕ್ಕೆ ಬಲ ಹೆಚ್ಚಿಸುತ್ತಿದ್ದಾರೆ.

ಪಂಜಾಬ್‌ ತಂಡದ ಬ್ಯಾಟಿಂಗ್‌ನಲ್ಲಿ ವೈಫಲ್ಯ

ಪಂಜಾಬ್‌ ಕಿಂಗ್ಸ್ ತಂಡ ಬ್ಯಾಟಿಂಗ್‌ನಲ್ಲಿ ಸಾಕಷ್ಟು ತಿಣುಕಾಡುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಕೆ.ಎಲ್‌ ರಾಹುಲ್‌, ಮಯಾಂಕ್ ಅಗರ್ವಾಲ್‌, ನಿಕೋಲಸ್‌ ಪೂರನ್‌, ಕ್ರಿಸ್‌ ಗೇಲ್‌ ಅವರಿಂದ ಇನ್ನೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ. ಆದರೆ, ಬೌಲಿಂಗ್‌ ವಿಭಾಗ ಅದ್ಭುತವಾಗಿದೆ.

ಪಿಚ್‌ ರಿಪೋರ್ಟ್

ಅಹಮದಾಬಾದ್‌ನ ಪಿಚ್‌ ಬ್ಯಾಟಿಂಗ್‌ಗೆ ಅದ್ಭುತವಾಗಿದೆ. ಆದರೆ, ನಿಧಾನಗತಿಯ ಬೌಲರ್‌ಗಳಿಗೂ ಸ್ವಲ್ಪ ನೆರವಾಗಬಹುದು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದಲ್ಲಿ ಪಂದ್ಯವಿಡೀ ಬ್ಯಾಟಿಂಗ್‌ಗೆ ನೆರವಾಗಬಹುದು. ಎರಡನೇ ಬ್ಯಾಟಿಂಗ್‌ ಮಾಡುವ ತಂಡಕ್ಕೂ ಕೊಂಚ ಸಹಕಾರಿ. ಹಾಗಾಗಿ ಇಂದಿನ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್​​ ಮೂಡಿ ಬಂದರೂ ಅಚ್ಚರಿಯಿಲ್ಲ.

ಸಂಭಾವ್ಯ ಆರ್‌ಸಿಬಿ ತಂಡ:

ದೇವದತ್‌ ಪಡಿಕ್ಕಲ್‌, ವಿರಾಟ್ ಕೊಹ್ಲಿ(ನಾಯಕ), ರಜತ್‌ ಪಾಟಿದರ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಎಬಿ ಡಿವಿಲಿಯರ್ಸ್(ವಿ.ಕೀ), ವಾಷಿಂಗ್ಟನ್‌ ಸುಂದರ್‌, ಡೇನಿಯಲ್ ಸ್ಯಾಮ್ಸ್‌, ಕೈಲ್‌ ಜೇಮಿಸನ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌ ಹಾಗು ಯುಜ್ವೇಂದ್ರ ಚಹಲ್‌.

ಸಂಭಾವ್ಯ ಪಂಜಾಬ್​ ಕಿಂಗ್ಸ್​​ ತಂಡ:

ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್ವಾಲ್‌, ಕ್ರಿಸ್‌ ಗೇಲ್‌, ದೀಪಕ್‌ ಹೂಡಾ, ನಿಕೋಲಸ್​ ಪೂರನ್‌, ಮೊಯ್ಸೆಸ್‌ ಹೆನ್ರಿಕ್ಸ್, ಶಾರೂಖ್ ಖಾನ್‌, ಕ್ರಿಸ್‌ ಜೋರ್ಡನ್‌, ಮೊಹಮ್ಮದ್‌ ಶಮಿ, ಅರ್ಷದೀಪ್‌ ಸಿಂಗ್‌ ಹಾಗು ರವಿ ಬಿಷ್ಣೋಯ್‌.

ಮ್ಯಾಚ್‌ ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಸಮಯ: ಸಂಜೆ 7.30ಕ್ಕೆ

ಇದನ್ನೂ ಓದಿ : IPL​ನಲ್ಲಿ ಧವನ್‌ ಧಮಾಕ: ರೈನಾ ದಾಖಲೆ ಮುರಿದು ಮುನ್ನುಗ್ಗುತ್ತಿರುವ ರನ್ ಮಷಿನ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.