ETV Bharat / sports

ಮುಂಬೈ ವಿರುದ್ಧ ಹೈದರಾಬಾದ್​ಗೆ ರೋಚಕ ಗೆಲುವು; ಕೇನ್‌ ಬಳಗದ ಪ್ಲೇ-ಆಫ್​ ಕನಸು ಜೀವಂತ

author img

By

Published : May 18, 2022, 7:19 AM IST

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಸಕಲ ಪ್ರಯತ್ನ ನಡೆಸುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 3 ರನ್‌ಗಳ ರೋಚಕ ಗೆಲುವು ದಾಖಲಿಸಿದೆ.

Sunrisers Hyderabad won against Mumbai Indians, Indian Premier League 2022, Wankhede Stadium in Mumbai, Mumbai Indians vs Sunrisers Hyderabad match, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಸನ್‌ರೈಸರ್ಸ್ ಹೈದರಾಬಾದ್, ಇಂಡಿಯನ್ ಪ್ರೀಮಿಯರ್ ಲೀಗ್ 2022, ಮುಂಬೈನ ವಾಂಖೆಡೆ ಸ್ಟೇಡಿಯಂ, ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ,
ಕೃಪೆ: IPL Twitter

ಮುಂಬೈ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಆರಂಭಿಕ ಆಘಾತದ ಹೊರತಾಗಿಯೂ ರಾಹುಲ್ ತ್ರಿಪಾಠಿ 76 ರನ್​ ಮತ್ತು ಪ್ರಿಯಂ ಗರ್ಗ್​ ಅವರ 42 ರನ್​ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್​​​ಗಳಲ್ಲಿ 6 ವಿಕೆಟ್ ​ನಷ್ಟಕ್ಕೆ 193 ರನ್​ಗಳಿಕೆ ಮಾಡಿತು. ಈ ಗುರಿ ಬೆನ್ನತ್ತಿದ್ದ ಮುಂಬೈ ತಂಡ ಕೊನೆಯಲ್ಲಿ ಎಡವಿಬಿದ್ದು 3 ರನ್​ಗಳಿಂದ ಸೋಲು ಕಂಡಿದೆ.

ಸನ್​ ರೈಸರ್ಸ್​ ಹೈದರಾಬಾದ್​ ಇನ್ನಿಂಗ್ಸ್​: ತಂಡದ ಪರ ಅಭಿಷೇಕ್ ಶರ್ಮಾ 9 ರನ್​ ಗಳಿಸಿ ಬೇಗನೇ ಔಟಾದರು. ಈ ವೇಳೆ ಕ್ರೀಸಿನಲ್ಲಿ ಒಂದಾದ ಗರ್ಗ್​ ಹಾಗೂ ತ್ರಿಪಾಠಿ ಎದುರಾಳಿ ಬೌಲರ್​ಗಳನ್ನು ದಂಡಿಸಿದರು. ಈ ಜೋಡಿ 80ಕ್ಕೂ ಅಧಿಕ ರನ್​​ಗಳ ಜೊತೆಯಾಟವಾಡಿತು.

ಇದನ್ನೂ ಓದಿ: ಪ್ಲೇ-ಆಫ್​ಗೋಸ್ಕರ ಮುಂದುವರೆದ ಜಿದ್ದಾಜಿದ್ದಿ ಫೈಟ್​... 3 ಸ್ಥಾನಕ್ಕಾಗಿ 7 ತಂಡಗಳ ಹೋರಾಟ!

ಕೇವಲ 26 ಎಸೆತಗಳಲ್ಲಿ 42 ರನ್​​ಗಳಿಕೆ ಮಾಡಿದ್ದ ಗರ್ಗ್​, ರಮಣದೀಪ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜೊತೆಯಾದ ಪೂರನ್​ ಕೂಡ ಅಬ್ಬರಿಸಿ 22 ಎಸೆತಗಳಲ್ಲಿ 38 ರನ್​​ ಕಲೆ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ತ್ರಿಪಾಠಿ 44 ಎಸೆತಗಳಲ್ಲಿ 76 ರನ್​​ಗಳಿಸಿ ವಿಕೆಟ್ ಒಪ್ಪಿಸಿದರು. ಮರ್ಕ್ರಾಮ್ 2ರನ್​ಗಳಿಸಿ ಔಟಾದರೆ, ವಿಲಿಯಮ್ಸನ್​ ಅಜೇಯ 8ರನ್​​, ವಾಷಿಂಗ್ಟನ್ ಸುಂದರ್ 9 ರನ್​​ಗಳಿಸಿ ಬುಮ್ರಾಗೆ ವಿಕೆಟ್​ ನೀಡಿದರು. ಮುಂಬೈ ಪರ ರಮಣದೀಪ್ ಸಿಂಗ್ 3, ಡೆನಿಯಲ್ ಸ್ಯಾಮ್ಸ್, ಮೆರ್ಡಿತ್ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್​ ಇನ್ನಿಂಗ್ಸ್​: 194 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಮುಂಬೈ, ನಾಯಕ ರೋಹಿತ್‌ ಶರ್ಮಾ 48 ರನ್​, ಇಶಾನ್‌ ಕಿಶನ್‌ 43 ರನ್​ ಮತ್ತು ಟಿಮ್‌ ಡೇವಿಡ್‌ 46 ರನ್​ ಗಳಿಸಿ ಅವರ ಬಿರುಸಿನ ಬ್ಯಾಟಿಂಗ್‌ ಬಲದಿಂದ ಜಯದತ್ತ ಮುನ್ನಡೆಯುತ್ತಿತ್ತು. ಆದರೆ, 19ನೇ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ ವಿಕೆಟ್‌ ಪಡೆಯುವುದರ ಜೊತೆಗೆ ಮೇಡನ್‌ ಓವರ್​ ಎಸೆದು ಮುಂಬೈ ಇಂಡಿಯನ್ಸ್​ ಗೆಲುವಿನ ದಿಕ್ಕು ಬದಲಿಸಿದರು.

ಕೊನೆಯ ಓವರ್​ನಲ್ಲಿ ಮುಂಬೈ ತಂಡಕ್ಕೆ ಗೆಲ್ಲಲು 19 ರನ್​ಗಳು ಬೇಕಿದ್ದವು. ಆದ್ರೆ ಮುಂಬೈ ತಂಡಕ್ಕೆ ಕೇವಲ 15 ರನ್​ ಗಳಿಸಲು ಮಾತ್ರ ಸಾಧ್ಯವಾಯಿತು. ಅಂತಿಮವಾಗಿ 20 ಓವರ್​ಗಳಿಗೆ 7 ವಿಕೆಟ್​ಗಳನ್ನು ಕಳೆದುಕೊಂಡು 190 ರನ್‌ ಕಲೆಹಾಕಿ 3 ರನ್‌ ಅಂತರದಲ್ಲಿ ಸೋಲು ಅನುಭವಿಸಿತು. ಸನ್‌ರೈಸರ್ಸ್‌ ಪರ ಉಮ್ರಾನ್‌ ಮಲಿಕ್ 3 ವಿಕೆಟ್​ ಪಡೆದ್ರೆ, ವಾಷಿಂಗ್ಟನ್ ಸುಂದರ್ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್​ ಪಡೆದು ಮಿಂಚಿದರು.

ಈ ಜಯದೊಂದಿಗೆ ಸನ್‌ರೈಸರ್ಸ್‌ ಒಟ್ಟು 12 ಅಂಕಗಳನ್ನು ಕಲೆಹಾಕಿ ಪಾಯಿಂಟ್​ ಟೇಬಲ್​ನಲ್ಲಿ 8ನೇ ಸ್ಥಾನ ಅಲಂಕರಿಸಿದೆ. ತಂಡಕ್ಕೆ ಇನ್ನೊಂದು ಪಂದ್ಯ ಬಾಕಿಯಿದ್ದು ಅದನ್ನೂ ಗೆದ್ದರೆ 14 ಅಂಕಗಳೊಂದಿಗೆ ಪ್ಲೇ-ಆಫ್ ತಲುಪಲು ಉಳಿದ ತಂಡಗಳ ಫಲಿತಾಂಶವನ್ನು ಕಾದುನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.