ETV Bharat / sports

ಸೂರ್ಯ ಕುಮಾರ್​ ಯಾದವ್​ ಆಟ ಗಲ್ಲಿ ಕ್ರಿಕೆಟ್​ನ್ನು ನೆನಪಿಸುತ್ತದೆ: ಸುನೀಲ್ ಗವಾಸ್ಕರ್

author img

By

Published : May 10, 2023, 6:52 PM IST

ಆರ್​ಸಿಬಿ ವಿರುದ್ಧ ಅಬ್ಬರಿಸಿ ನಾಲ್ಕನೇ ಅರ್ಧ ಶತಕ ದಾಖಲಿಸಿದ ಸೂರ್ಯ ಕುಮಾರ್​ ಯಾದವ್​ ಅವರ ಬ್ಯಾಟಿಂಗ್ ಗಲ್ಲಿ ಕ್ರಿಕೆಟ್ ನೆನಪಿಸಿತು ಎಂದು ಗವಾಸ್ಕರ್​ ಹೇಳಿದ್ದಾರೆ.

vSKY looked like playing gully cricket when he was toying with RCB bowlers: Gavaskar
ಸೂರ್ಯ ಕುಮಾರ್​ ಯಾದವ್​ ಆಟ ಗಲ್ಲಿ ಕ್ರಿಕೆಟ್​ನ್ನು ನೆನಪಿಸುತ್ತದೆ: ಸುನೀಲ್ ಗವಾಸ್ಕರ್

ಮುಂಬೈ (ಮಹಾರಾಷ್ಟ್ರ): ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ನಿನ್ನೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ನ ಗೆಲುವಿಗೆ ಪ್ರಮುಖ ಕಾರಣರಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳೊಂದಿಗೆ ಸೂರ್ಯ ಆಟವಾಡುತ್ತಿದ್ದಾಗ ಗಲ್ಲಿ ಕ್ರಿಕೆಟ್ ಆಡಿದಂತೆ ಕಾಣುತ್ತಿದ್ದರು ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ನಿನ್ನೆಯ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 83 ರನ್ ಗಳಿಸಿದರು. ಅವರ ಬ್ಯಾಟ್​ನಿಂದ ನಿನ್ನೆ 6 ಸಿಕ್ಸ್​ ಮತ್ತು 7 ಬೌಂಡರಿ ಬಂದಿತ್ತು. ಈ ಹಿಟ್ಟಿಂಗ್​ನಲ್ಲಿ 360 ಆಟವನ್ನು ಸೂರ್ಯ ಕುಮಾರ್ ಯಾದವ್​ ತೋರಿದ್ದರು. ಈ ಆವೃತ್ತಿಯ ಆರಂಭದಲ್ಲಿ ಮುಂಬೈ ಕಳಪೆ ಆಟದ ಪ್ರದರ್ಶನದಿಂದ ಟೀಕೆಗೆ ಒಳಗಾಗಿತ್ತು. ಈಗ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದೆ.

ಸೂರ್ಯ ಕುಮಾರ್​ ಯಾದವ್​ ಅವರು ಐಪಿಎಲ್​ಗೂ ಮುನ್ನ ತಮ್ಮ ಫಾರ್ಮ್​ ಕಳೆದುಕೊಂಡಿದ್ದರು. ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಟೆಸ್ಟ್​​ ಪಂದ್ಯದ ಪಾದಾರ್ಪಣೆ ಇನ್ನಿಂಗ್ಸ್​ನಲ್ಲಿ 8 ರನ್​ ಔಟ್​ ಆದರೆ, ನಂತರ ನಡೆದ ಏಕದಿನ ಸರಣಿಯಲ್ಲಿ ಸತತ ಮೂರು ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್​ ಕೊಟ್ಟು ಟೀಕೆಗೆ ಗುರಿಯಾಗಿದ್ದರು. ಸ್ಕೈ ಐಪಿಎಲ್​ನ ಆರಂಭಿಕ ಪಂದ್ಯದಲ್ಲೂ ತನ್ನ ಫಾರ್ಮ್​ ಕಂಡುಕೊಳ್ಳಲು ಪರದಾಡಿದರು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಬ್ಯಾಕ್​ ಬ್ಯಾಕ್ ಅರ್ಧಶತಕದ ಮೂಲಕ ತಂಡಕ್ಕೆ ಆಸರೆ ಆಗುವುದರ ಜೊತೆಗೆ ಫಾರ್ಮ್​ಗೂ ಮರಳಿದ್ದಾರೆ.

ನಿನ್ನೆ ಯಾದವ್​ ಅವರ ಆಟದ ನೆರವಿನಿಂದ ಮುಂಬೈ 21 ಎಸೆತಗಳು ಬಾಕಿ ಇರುವಂತೆಯೇ 200 ರನ್ ಗುರಿಯನ್ನು ಬೆನ್ನಟ್ಟಿತು. "ಸೂರ್ಯ ಕುಮಾರ್​ ಯಾದವ್​ ಬೌಲರ್‌ಗಳೊಂದಿಗೆ ಆಟವಾಡುತ್ತಿದ್ದರು. ಅವರು ಬ್ಯಾಟಿಂಗ್ ಮಾಡುವಾಗ ಅವರು ನಿಮಗೆ ಗಲ್ಲಿ ಕ್ರಿಕೆಟ್ ಅನುಭವವನ್ನು ನೀಡುತ್ತಾರೆ. ಅವರು ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಉತ್ತಮವಾಗಿದ್ದಾರೆ" ಎಂದು ಗವಾಸ್ಕರ್ ಹೇಳಿದರು.

"ಸೂರ್ಯ ಅವರ ಬಾಟಮ್​ ಹ್ಯಾಂಡ್​ ಬಲಿಷ್ಟವಾಗಿದೆ, ಅವನು ಅದನ್ನು ಪರಿಪೂರ್ಣತೆಗೆ ಬಳಸುತ್ತಾನೆ. ಆರ್​ಸಿಬಿ ವಿರುದ್ಧ, ಸೂರ್ಯ ಲಾಂಗ್-ಆನ್ ಮತ್ತು ಲಾಂಗ್-ಆಫ್ ಕಡೆಗೆ ಹೊಡೆಯಲು ಪ್ರಾರಂಭಿಸಿದರು. ನಂತರ ಮೈದಾನದ ಎಲ್ಲಾ ದಿಕ್ಕುಗಳಿಗೂ ಬಾಲನ್ನು ಅಟ್ಟಿದರು. ಸೂರ್ಯ ಅವರ ಬ್ಯಾಟಿಂಗ್​ನ ಪ್ರಭಾವ ನೆಹಾಲ್ ವಧೇರಾ ಮೇಲೂ ಬಿತ್ತು ಇದರಿಂದ (34 ಎಸೆತಗಳಲ್ಲಿ 52 ನಾಟೌಟ್) ಅವರು ಸಹ ಈ ಆವೃತ್ತಿಯ ಎರಡನೇ ಅರ್ಧಶತಕ ದಾಖಲಿಸಿದರು" ಎಂದಿದ್ದಾರೆ.

ಸೂರ್ಯ ಮತ್ತು ನೆಹಾಲ್ ವಧೇರಾ ಜೋಡಿ 140 ರನ್‌ಗಳ ಜೊತೆಯಾಟ ನಡೆಸಿ 200 ರನ್ ಗುರಿ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. "ನೀವು ಸೂರ್ಯ ಅವರ ಜೊತೆಗೆ ಬ್ಯಾಟಿಂಗ್ ಮಾಡುವಾಗ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಆದರೆ ನೆಹಾಲ್ ವಧೇರಾ ಅವರ ಇನ್ನಿಂಗ್ಸ್‌ನ ಅತ್ಯುತ್ತಮ ವಿಷಯವೆಂದರೆ ಅವರು ಯಾದವ್​ ಅವರ ರೀತಿಯ ಹೊಡೆತಗಳನ್ನು ಆಡಲು ಬಯಸಲಿಲ್ಲ. ಅವರ ಸಮತೋಲನವು ಅದ್ಭುತವಾಗಿದೆ" ಎಂದು ಗವಾಸ್ಕರ್ ಹೇಳಿದರು.

ಇದನ್ನೂ ಓದಿ: ವಿಶ್ವಕಪ್​ 2023: ಅಕ್ಟೋಬರ್​ 15 ರಂದು ಭಾರತ - ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.