ETV Bharat / sports

ಐಪಿಎಲ್​ನಿಂದ ರೋಹಿತ್ ಶರ್ಮಾ ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು: ಸುನಿಲ್ ಗವಾಸ್ಕರ್‌

author img

By

Published : Apr 26, 2023, 9:35 PM IST

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಉದ್ದೇಶದಿಂದ ರೋಹಿತ್​ ಶರ್ಮಾ ಐಪಿಎಲ್​ ನಡುವೆ ಬಿಡುವು ತೆಗೆದುಕೊಳ್ಳಬೇಕು ಎಂದು ಸುನಿಲ್​ ಗವಾಸ್ಕರ್​ ಹೇಳಿದ್ದಾರೆ.

Rohit Sharma should take little bit of break from IPL Sunil Gavaskar
ಐಪಿಎಲ್​ನಿಂದ ರೋಹಿತ್ ಶರ್ಮಾ ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು: ಸುನಿಲ್ ಗವಾಸ್ಕರ್‌

ನವದೆಹಲಿ: ಮುಂಬೈ ಇಂಡಿಯನ್ಸ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಮ್ಮನ್ನು ತಾವು ಸಿದ್ಧವಾಗಿರಿಸಲು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು ಎಂದು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್​​ ಚಾಂಪಿಯನ್​ಶಿಪ್​ಗೆ ತಂಡ ಪ್ರಟಕವಾಗಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಗಿದ 9 ದಿನದಲ್ಲಿ ಟೆಸ್ಟ್​ ಚಾಂಪಿಯನ್​ ಶಿಪ್​ ನಡೆಯಲಿದೆ. ಅಂದರೆ ಮೇ 28ಕ್ಕೆ ಐಪಿಎಲ್​ ಫೈನಲ್​ ಪಂದ್ಯ ನಡೆಯಲಿದ್ದು, ಜೂನ್​ 7ರಿಂದ ಲಂಡನ್‌ನ ಓವಲ್‌ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್‌ ಆರಂಭವಾಗಲಿದೆ. ಹೀಗಾಗಿ ಐಪಿಎಲ್​ನಿಂದ ಕೊನೆ ಸಮಯದಲ್ಲಿ ದೂರ ಉಳಿದು ಚಾಂಪಿಯನ್​ಶಿಪ್​ ಬಗ್ಗೆ ಚಿಂತಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ಐಪಿಎಲ್‌ನಲ್ಲಿ ಇದುವರೆಗೆ ಏಳು ಪಂದ್ಯಗಳನ್ನು ಆಡಿದೆ ಮತ್ತು ರೋಹಿತ್ ಅವರ ಬ್ಯಾಟಿಂಗ್ ಫಾರ್ಮ್ ಮಿಶ್ರವಾಗಿದೆ. ಏಳು ಪಂದ್ಯಗಳಲ್ಲಿ ಒಂದು ಅರ್ಧ ಶತಕದೊಂದಿಗೆ 181 ರನ್ ಗಳಿಸಿದ್ದಾರೆ. ಅವರು 25.86ರ ಸರಾಸರಿಯಲ್ಲಿ 135.07ರ ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟ್​ ಬೀಸುತ್ತಿದ್ದಾರೆ.

"ಪ್ರಾಮಾಣಿಕವಾಗಿ, ರೋಹಿತ್ ಕೂಡ ಸದ್ಯಕ್ಕೆ ವಿರಾಮ ತೆಗೆದುಕೊಳ್ಳಬೇಕು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಬೇಕು ಎಂದು ನಾನು ಹೇಳುತ್ತೇನೆ. ಅವರು ಕಳೆದ ಕೆಲವು ಪಂದ್ಯಗಳಿಗೆ ಮತ್ತೆ ಹಿಂತಿರುಗಬಹುದು. ಆದರೆ ಇದೀಗ ಅವರು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು" ಎಂದು ಗವಾಸ್ಕರ್ ತಿಳಿಸಿದರು.

"ಈ ಹಂತದಲ್ಲಿ, ಅವರಿಗೆ ಸ್ವಲ್ಪ ವಿರಾಮದ ಅಗತ್ಯವಿದೆ ಎಂದು ನಾನು ನಂಬುತ್ತೇನೆ ಮತ್ತು ಕೊನೆಯ ಮೂರು ಅಥವಾ ನಾಲ್ಕು ಪಂದ್ಯಗಳಿಗೆ ಹಿಂತಿರುಗಿ, ಆದ್ದರಿಂದ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ಫೈನಲ್​ಗೆ ಲಯದಲ್ಲಿ ಮರಳಬೇಕು ಎಂದು ಅವರ ಮುಂಬೈ ಇಂಡಿಯನ್ಸ್​​ನ 55 ರನ್​ನ ಸೋಲಿನ ನಂತರ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್​ ತಂಡಕ್ಕೆ ಸಲಹೆ ನೀಡಿದ ಗವಾಸ್ಕರ್​, " ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ವಲ್ಪ ಬದಲಾವಣೆಯನ್ನು ನೋಡಲು ನಾನು ಬಯಸುತ್ತೇನೆ. ಮುಂಬೈ ಇಂಡಿಯನ್ಸ್​ಗೆ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಕೆಲ ಪವಾಡದ ರೀತಿಯ ಪಂದ್ಯಗಳು ಮುಂಬೈ ಪರವಾಗಿ ಇನ್ನು ಮುಂದೆ ಬರಬೇಕಿದೆ. ಅಸಾಧ್ಯ ಎಂದು ಹೇಳಲಾರೆ. ಕ್ರಕೆಟ್​ನಲ್ಲಿ ಏನು ಬೇಕಾದರೂ ಸಾದ್ಯ" ಎಂದರು. ಮುಂಬೈ ಇಂಡಿಯನ್ಸ್​ ತಂಡ ಈ ವರೆಗೆ ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದ್ದು, 6 ಅಂಕದಿಂದ ಏಳನೇ ಸ್ಥಾನದಲ್ಲಿದೆ.

"ರೋಹಿತ್ ಸ್ವಲ್ಪವೇ ಆಸಕ್ತಿ ತೋರುತ್ತಿದ್ದಾರೆ. ಬಹುಶಃ ಈ ಹಂತದಲ್ಲಿ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಬಗ್ಗೆ ಯೋಚಿಸುತ್ತಿರಬಹುದು, ನನಗೆ ಗೊತ್ತಿಲ್ಲ" ಎಂದು ಭಾರತದ ಮಾಜಿ ನಾಯಕ ಗವಾಸ್ಕರ್​ ಹೇಳಿದರು.

ಇದನ್ನೂ ಓದಿ: ಅರ್ಜುನ್​ ತೆಂಡೂಲ್ಕರ್​ಗೆ ಬೌಲಿಂಗ್​ ವೇಗದ ಬಗ್ಗೆ ಹೆಚ್ಚಿನ ಟ್ರೈನ್​ ಮಾಡುತ್ತೇವೆ: ಶೇನ್ ಬಾಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.