ETV Bharat / sports

IPL: ಸಿಎಸ್​ಕೆ ನಾಯಕನಾಗಿ ಧೋನಿ ಕೈ ತಪ್ಪಿದ ಇದೊಂದು ದಾಖಲೆ

author img

By

Published : Apr 13, 2023, 4:21 PM IST

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದಲ್ಲಿ ಧೋನಿ ದಾಖಲೆಯೊಂದನ್ನು ತಪ್ಪಿಸಿಕೊಂಡರು.

Chennai Super Kings
ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ (ತಮಿಳುನಾಡು) : ಚೆಪಾಕ್​ ಮೈದಾನದಲ್ಲಿ ಬುಧವಾರ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವು ಕೊನೇಯ ಎಸೆತದವರೆಗೂ​ ರೋಚಕತೆಯಿಂದ ಕೂಡಿತ್ತು. ನಾಯಕನಾಗಿ 200ನೇ ಪಂದ್ಯವಾಡಿದ್ದ ಮಹೇಂದ್ರ ಸಿಂಗ್​ ಧೋನಿ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆ ಬರೆಯಲು ಹೊರಟಿದ್ದು, ಕೂದಲೆಳೆ ಅಂತರದಲ್ಲಿ ದಾಖಲೆಯೊಂದಿಗೆ ಪಂದ್ಯವೂ ಕೈಜಾರಿತ್ತು. ಧೋನಿ ಪಂದ್ಯದ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದರೆ ಪಂದ್ಯವನ್ನು ಚೆನ್ನೈ ಗೆಲ್ಲುತ್ತಿತ್ತು. ಆದರೆ ವಿಶ್ವದ​ ಬೆಸ್ಟ್​ ಫಿನಿಷರ್‌ ಕೈಯಿಂದ ಹಾಗು ಮತ್ತೊಂದು ತುದಿಯಲ್ಲಿ ಕ್ರೀಸ್‌​ನಲ್ಲಿದ್ದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾರಿಂದ ಅದು ಸಾಧ್ಯವಾಗಲೇ ಇಲ್ಲ.

ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಜಡೇಜಾ, ಎಂ.ಎಸ್.ಧೋನಿ ಭಾರತೀಯ ಕ್ರಿಕೆಟ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡೂ ತಂಡಕ್ಕೂ ದಂತಕಥೆ. ತಂಡದ ನಾಯಕನಾಗಿ ಅವರಿಂದು 200ನೇ ಪಂದ್ಯ ಆಡುತ್ತಿದ್ದಾರೆ. ರಾಜಸ್ಥಾನ್​ ತಂಡವನ್ನು ಸೋಲಿಸಿ ಧೋನಿಯನ್ನು ಗೌರವಿಸಲು ನಮಗಿದು ಉತ್ತಮ ವೇದಿಕೆ ಎಂದಿದ್ದರು.

ರೋಚಕ ಪಂದ್ಯ: ಉಭಯ ತಂಡಗಳ ಕಾದಾಟದ ಪಂದ್ಯ ಕೊನೆಯ ಹಂತ ತಲುಪಿತ್ತು. ಗೆಲುವು ಯಾರ ಪಾಲಾಗುತ್ತದೆ ಎಂದು ಕ್ರಿಕೆಟ್​ ಅಭಿಮಾನಿಗಳು ಎವೆಯಿಕ್ಕದೆ ನೋಡುತ್ತಿದ್ದರು. ಕೊನೆಯ ಓವರ್‌ನಲ್ಲಿ ಜಡೇಜಾ ಮತ್ತು ಧೋನಿ ಕ್ರೀಸ್‌ನಲ್ಲಿದ್ದರು. ಅಂತಿಮ 12 ಎಸೆತಗಳಲ್ಲಿ ತಂಡದ ಗೆಲುವಿಗೆ 40 ರನ್‌ಗಳ ಅಗತ್ಯವಿತ್ತು. ಜೇಸನ್​ ಹೋಲ್ಡರ್ ಎಸೆದ 19ನೇ ಓವರ್‌ನಲ್ಲಿ ಇಬ್ಬರೂ 19 ರನ್ ಪೇರಿಸಿ ಪಂದ್ಯವನ್ನು ಇನ್ನೂ ಜೀವಂತವಿರುವಂತೆ ಮಾಡಿದರು. ಆದರೆ ಅಂತಿಮ ಓವರ್‌ ಮಾಡಲು ಬಂದ ಸಂದೀಪ್ ಶರ್ಮಾ ಅವರ ಬೌಲಿಂಗ್​ನಲ್ಲಿ ಧೋನಿ 2ನೇ ಮತ್ತು 3ನೇ ಎಸೆತದಲ್ಲಿ ಎರಡು ಸಿಕ್ಸರ್‌ ಹೊಡೆದರು. ಈ ವೇಳೆ ಮ್ಯಾಚ್​ ರಾಯಲ್ಸ್​ ಕೈ ತಪ್ಪಿ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯ 3 ಎಸೆತಗಳಲ್ಲಿ 3 ರನ್ ಕೊಟ್ಟು ಪಂದ್ಯವನ್ನು ಶರ್ಮಾ ಅವರು ರಾಯಲ್ಸ್​ ಕಡೆಗೆ ತಿರುಗಿಸಿದರು. ಇದರಿಂದಾಗಿ ಧೋನಿ ತಮ್ಮ 200ನೇ ಪಂದ್ಯವನ್ನು ಸ್ಮರಣೀಯವಾಗಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಜಡೇಜಾ, ಧೋನಿಗೆ ಖೆಡ್ಡಾ ತೋಡಿದ್ದು ಸಂದೀಪ್​ ಶರ್ಮಾ ಅಲ್ಲ.. ಕೋಚ್​ ನೀಡಿದ ಸಲಹೆಗೆ ಒಲಿದ ಜಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.