ETV Bharat / sports

IPL​ ಸೂಪರ್ ಸಂಡೆ ವಾರ್: ಪ್ಲೇ ಆಫ್ ಸನಿಹದಲ್ಲಿ ಆರ್​​​ಸಿಬಿ; ಗೆಲ್ಲಲೇಬೇಕಾದ ಒತ್ತಡದಲ್ಲಿ ಪಂಜಾಬ್​

author img

By

Published : Oct 3, 2021, 11:34 AM IST

Updated : Oct 3, 2021, 11:48 AM IST

ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿ ಇಂದು ಆರ್​ಸಿಬಿ ವಿರುದ್ಧ ಪಂಜಾಬ್​​​ ಕಿಂಗ್ಸ್ ಕಣಕ್ಕಿಳಿಯುತ್ತಿದೆ. ಪ್ಲೇ ಆಫ್ ಸನಿಹದಲ್ಲಿರುವ ಆರ್​ಸಿಬಿ ಈ ಪಂದ್ಯ ಗೆದ್ದು ಮುಂದಿನ ಹಂತ ತಲುಪುವ ಭರವಸೆಯಲ್ಲಿದೆ. ಅದೇ ರೀತಿ ಪಂಜಾಬ್ ಗೆಲುವು ದಾಖಲಿಸಿ ಪ್ಲೇ ಆಫ್ ಆಸೆ ಜೀವಂತವಾಗಿರಿಸುವ ತವಕದಲ್ಲಿದೆ.

RCB takes over Punjab kings in 48th match
ಪ್ಲೇ ಆಫ್ ಸನಿಹದಲ್ಲಿ ಆರ್​​​ಸಿಬಿ..ಗೆಲ್ಲಬೇಕಾದ ಒತ್ತಡದಲ್ಲಿ ಪಂಜಾಬ್​

ಹೈದರಾಬಾದ್: ಇಂದಿನ ಸೂಪರ್ ಸಂಡೆ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಸೆಣಸಾಟ ನಡೆಯಲಿದೆ.

ಐಪಿಎಲ್ ದ್ವಿತೀಯಾರ್ಧದಲ್ಲಿ ಆರ್​ಸಿಬಿ ಅತ್ಯುತ್ತಮ ಫಾರ್ಮ್ ಮುಂದುವರಿಸಿದೆ. ಈಗಾಗಲೇ ಪ್ಲೇ ಆಫ್ ಸನಿಹದಲ್ಲಿರುವ ಕೊಹ್ಲಿ ಟೀಂ ಇಂದಿನ ಪಂದ್ಯ ಗೆದ್ದು, ಪ್ಲೇ ಆಫ್​ಗೆ ಎಂಟ್ರಿ ಪಡೆಯಲು ಉತ್ಸುಕವಾಗಿದೆ.

ಇನ್ನೊಂದೆಡೆ, ಪಂಜಾಬ್ ಕಿಂಗ್ಸ್ ಕೂಡಾ ಪ್ಲೇ ಆಫ್ ಕನಸು ಜೀವಂತ ಇರಿಸಿಕೊಂಡಿದ್ದು, ಹಿಂದಿನ ಕೆಕೆಆರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಲಯಕ್ಕೆ ಮರಳಿದೆ. ಆರಂಭಿಕ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಫಾರ್ಮ್​ಗೆ ಮರಳಿರುವುದು ಕಿಂಗ್ಸ್‌ಗೆ ಭರವಸೆ ತಂದಿದೆ.

ಪಾಯಿಂಟ್ ಟೇಬಲ್​​ನಲ್ಲಿ ಆರ್​ಸಿಬಿ ಆಡಿದ 11 ಪಂದ್ಯದಲ್ಲಿ 7ರಲ್ಲಿ ಜಯ ದಾಖಲಿಸಿದ್ದು, 4 ರಲ್ಲಿ ಸೋತು 3ನೇ ಸ್ಥಾನದಲ್ಲಿದೆ. ಪಂಜಾಬ್ 5 ಪಂದ್ಯ ಗೆದ್ದು 7ರಲ್ಲಿ ಸೋಲನುಭವಿಸಿ 5ನೇ ಸ್ಥಾನದಲ್ಲಿದೆ.

ಆರ್​ಸಿಬಿಯಲ್ಲಿ ಆರಂಭಿಕರಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವ್​ದತ್​ ಪಡಿಕಲ್ ಉತ್ತಮ ಆರಂಭ ನೀಡುತ್ತಿದ್ದಾರೆ. ಜೊತೆಗೆ ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್ ಹಾಗೂ ಚಾಹಲ್ ಮಾರಕ ದಾಳಿ ನಡೆಸುತ್ತಿದ್ದಾರೆ. ಹರ್ಷಲ್ ಅತೀ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.

ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ..

RCB: ವಿರಾಟ್ ಕೊಹ್ಲಿ (ಕ್ಯಾ), ಕೆ.ಎಸ್.ಭರತ್ (ವಿ/ಕೀ), ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿ ವಿಲಿಯರ್ಸ್​, ಶಹಬಾಜ್ ಅಹ್ಮದ್, ಡೇನಿಯಲ್‌ ಕ್ರಿಶ್ಚಿಯನ್, ಹಸರಂಗ/ಜಾರ್ಜ್​ ಗಾರ್ಟನ್, ಹರ್ಷಲ್ ಪಟೇಲ್, ಮೊಹಮದ್​ ಸಿರಾಜ್ ಹಾಗು ಯಜುವೇಂದ್ರ ಚಾಹಲ್.

PBKS​: ಕೆ.ಎಲ್.ರಾಹುಲ್ (ಕ್ಯಾ,ವಿ/ಕೀ), ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಏಡನ್ ಮಾರ್ಕ್ರಮ್, ಶಾರುಖ್ ಖಾನ್, ಹಪ್ರೀತ್ ಬ್ರಾರ್, ಫೇಬಿಯನ್ ಆಲೆನ್/ ಆದಿಲ್ ರಶೀದ್, ಕ್ರಿಸ್ ಜೋರ್ಡನ್/ನಾರ್ಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಶ್ಣೋಯ್ ಹಾಗು ಅರ್ಷದೀಪ್ ಸಿಂಗ್

ಸ್ಥಳ:

ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ

ಸಮಯ: ಮಧ್ಯಾಹ್ನ 3.30 ಗಂಟೆಗೆ

Last Updated : Oct 3, 2021, 11:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.