ETV Bharat / sports

ನಟರಾಜನ್ ಅನುಪಸ್ಥಿತಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ: SRH ಕೋಚ್

author img

By

Published : Sep 23, 2021, 2:06 PM IST

ಸನ್​ರೈಸರ್ಸ್​ ಹೈದರಾಬಾದ್ ತಂಡದ ವೇಗಿ ನಟರಾಜನ್ ಅನುಪಸ್ಥಿತಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಕೋಚ್​ ಟ್ರೆವರ್ ಬೇಲಿಸ್ ಹೇಳಿದ್ದಾರೆ.

SRH ಕೋಚ್
SRH ಕೋಚ್

ದುಬೈ: ಸನ್​ ರೈಸರ್ಸ್​ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್​ಗೆ ಕೋವಿಡ್​ ದೃಢಪಟ್ಟಿದ್ದರಿಂದ ಅವರು ನಿನ್ನೆಯ ಪಂದ್ಯದಲ್ಲಿ ಆಡಿಲ್ಲ. ಅವರ ಅನುಪಸ್ಥಿತಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಂಡದ ಮುಖ್ಯ ತರಬೇತುದಾರ ಟ್ರೆವರ್ ಬೇಲಿಸ್ (Trevor Bayliss ) ಪ್ರತಿಪಾದಿಸಿದ್ದಾರೆ.

ನಟರಾಜನ್ ಅನುಪಸ್ಥಿತಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಸನ್​ರೈಸರ್ಸ್ ತಂಡ ಚೆನ್ನಾಗಿಯೇ ಆಡಿತು. ಆದರೂ ಸೋತಿದ್ದಕ್ಕೆ ಸ್ವಲ್ಪ ಅಸಮಾಧಾನವಿದೆ ಎಂದು ಬೇಲಿಸ್ ಹೇಳಿದ್ದಾರೆ.

ದೆಹಲಿ ಕ್ಯಾಪಿಟಲ್ಸ್​ನ ವೇಗಿಗಳು ವಿಕೆಟ್ ​ಅತ್ಯುತ್ತಮವಾಗಿ ಪಡೆದಿದ್ದಾರೆ. ಉತ್ತಮವಾಗಿ ಆಡಿ ನಮ್ಮ ತಂಡವನ್ನು ಸೋಲಿಸುವ ಮೂಲಕ ಗೆಲುವಿಗೆ ಅವರು ಅರ್ಹರಾಗಿದ್ದಾರೆ ಎಂದು ಬೇಲಿಸ್ ಶ್ಲಾಘಿಸಿದ್ದಾರೆ.

ನಿನ್ನೆ ನಡೆದ ಸನ್​ರೈಸರ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ರಿಷಬ್​ ಟೀಂ 8 ವಿಕೆಟ್​​ಗಳ ಅಂತರದಿಂದ ಮಣಿಸಿತು. ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 9 ವಿಕೆಟ್​​ ಪತನಕ್ಕೆ 134 ರನ್​ಗಳನ್ನು ಕಲೆ ಹಾಕಿತು. ದೆಹಲಿ ತಂಡ 2 ಓವರ್​ಗಳು ಬಾಕಿಯಿರುವಾಗಲೇ, 135 ರನ್​ ಗಳಿಸಿ ಜಯ ಪಡೆದುಕೊಂಡಿತ್ತು.

ಇದನ್ನೂ ಓದಿ: ನಮ್ಮ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ: ರಿಷಭ್​ ಪಂತ್ ಸಂತಸ

ಡೆಲ್ಲಿ ತಂಡದ ಬೌಲರ್​ಗಳು ಆರಂಭದಿಂದಲೇ ಉತ್ತಮವಾಗಿ ಬೌಲಿಂಗ್ ಮಾಡಿದರು. ನಮ್ಮ ತಂಡದಲ್ಲಿ ನಟರಾಜನ್ ಬದಲಿಗೆ ಎಡಗೈ ವೇಗಿ ಖಲೀಲ್ ಅಹ್ಮದ್​ ಮತ್ತು ಸ್ಪೀಡ್​ಸ್ಟರ್​ ಸಂದೀಪ್ ಶರ್ಮಾ ಅವರ ಆಟವನ್ನು ಆಡಬೇಕಾಯಿತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.