ETV Bharat / sports

ಫಿಲಿಫ್​ ಸಾಲ್ಟ್​ ವಿರುದ್ಧ ಕೋಪ ಹೊರಹಾಕಿದ ಸಿರಾಜ್.. ಪಂದ್ಯದ ನಂತರ ಆಲಂಗಿಸಿ ಶಹಬ್ಬಾಶ್​ ಗಿರಿ

author img

By

Published : May 7, 2023, 4:15 PM IST

ನಿನ್ನೆ ಡೆಲ್ಲಿಯಲ್ಲಿ ನಡೆದ ಕ್ಯಾಪಿಟಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಪಂದ್ಯದಲ್ಲಿ ಸಿರಾಜ್​ ಫಿಲಿಫ್​ ಸಾಲ್ಟ್​ ವಿರುದ್ಧ ವಾಗ್ದಾಳಿ ನಡೆಸಿದರು.

Mohammed Siraj Philip Salt Controversy on IPL 50th match dc vs rcb
ಫಿಲಿಫ್​ ಸಾಲ್ಟ್​ ವಿರುದ್ಧ ಕೊಪ ಹೊರಹಾಕಿದ ಸಿರಾಜ್​, ಪಂದ್ಯದ ನಂತರ ಆಲಂಗಿಸಿ ಶಹಬ್ಬಾಶ್​ ಗಿರಿ

ನವದೆಹಲಿ: ಐಪಿಎಲ್ 2023ರ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದ ವೇಳೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಡೆಲ್ಲಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ನಡುವೆ ಮಾತಿನ ಚಕಮಕಿ ನಡೆಯಿತು. ಪಂದ್ಯದಲ್ಲಿ ಸಿರಾಜ್ ಬೌಲಿಂಗ್ ಮಾಡುತ್ತಿದ್ದರು. ಪವರ್​ ಪ್ಲೇ ಓವರ್​ನಲ್ಲಿ ಸಾಲ್ಟ್​​ ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದ್ದರು. ಈ ವೇಳೆ ಕೋಪಗೊಂಡ ಸಿರಾಜ್​ ಸಾಲ್ಟ್​​ ಮೇಲೆ ಮಾತಿನ ಚಕಮಕಿಗೆ ಇಳಿದು ಬೆರಳು ಗುರಿಮಾಡಿ ಮಾತನಾಡಿರು.

ಸಿರಾಜ್​ ಅವರು ಅಗ್ರೆಸಿವ್ ಆಗಿ ಮೈದಾನದಲ್ಲಿ ನಡೆದುಕೊಂಡರು. ಈ ವೇಳೆ ವಾರ್ನರ್​ ನಡುವೆ ಬಂದರೂ ಸಿರಾಜ್​ ಕೋಪದಿಂದಲೇ ಉತ್ತರ ನೀಡಿದರು. ನಂತರ ಫಿಲ್ಡ್​​ ಅಂಪೈರ್​ ಬಂದು ಸಿರಾಜ್​ ಅವರನ್ನು ಬೌಲಿಂಗ್​ ಮಾಡುವಂತೆ ಸೂಚಿಸಿದರು. ಈ ವಿಡಿಯೋ ಟ್ವಿಟರ್​ ಹ್ಯಾಂಡಲ್​ನಲ್ಲಿ ವೈರಲ್​ ಆಗುತ್ತಿದೆ. ನಿನ್ನೆ ಪಂದ್ಯದ ವೇಳೆ ಈ ಘಟನೆ ನಂತರ ಸಿರಾಜ್​ ಹೆಸರು ಟ್ವಿಟರ್​ನಲ್ಲಿ ಟ್ರಂಡಿಂಗ್​ನಲ್ಲಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಸಿರಾಜ್ 2 ಓವರ್ ಬೌಲ್ ಮಾಡಿ ವಿಕೆಟ್ ಪಡೆಯದೆ 28 ರನ್ ನೀಡಿದರು. ಇದರಿಂದ ಸಿರಾಜ್ ನೊಂದುಕೊಳ್ಳಲು ಆರಂಭಿಸಿದ್ದು, ತಾಳ್ಮೆ ಕಳೆದುಕೊಂಡ ಸಿರಾಜ್​ ಕೋಪದಲ್ಲೇ ಇದ್ದರು. ಇದೇ ವೇಳೆ ಸಿರಾಜ್ ಎಸೆತದಲ್ಲಿ ಫಿಲ್ ಸಾಲ್ಟ್ ಸತತ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಇದಾದ ಬಳಿಕ ಸಿರಾಜ್ ಬೌಲ್ ಮಾಡಿದಾಗ ಅಂಪೈರ್ ಅದನ್ನು ವೈಡ್ ಬಾಲ್ ಎಂದು ಕರೆದರು.

ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಹೀರೋ ಆದ ಸಾಲ್ಟ್​​: ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಫಿಲಿಫ್​ ಸಾಲ್ಟ್​ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಹೀರೋ ಆದರು. ಸಾಲ್ಟ್ 45 ಎಸೆತಗಳಲ್ಲಿ 87 ರನ್ ಗಳಿಸಿ ಬಿರುಸಿನ ಆಟವಾಡಿದರು. ಅವರ ಇನ್ನಿಂಗ್ಸ್‌ 193.33 ಸ್ಟ್ರೈಕ್ ರೇಟ್‌ನಲ್ಲಿತ್ತು. ಸಾಲ್ಟ್​ ನಿನ್ನೆಯ ಪಂದ್ಯದಲ್ಲಿ ಇಬ್ಬನಿಯಿಂದ ಲಾಭ ಪಡೆದು ಬೌಲರ್​ಗಳನ್ನು ದಂಡಿಸಿದರು. ಅವರ ಬ್ಯಾಟ್​ನಿಂದ 8 ಬೌಂಡರಿ ಮತ್ತು 6 ಸಿಕ್ಸರ್‌ಗಳು ಪಂದ್ಯದಲ್ಲಿ ಬಂದಿದ್ದವು. ಈ ಅದ್ಭುತ ಇನ್ನಿಂಗ್ಸ್​ಗೆ ಸಾಲ್ಟ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ವಿರುದ್ಧ 20 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯ ಮುಕ್ತಾಯದ ನಂತರ ಮೊಹಮ್ಮದ್ ಸಿರಾಜ್ ಫಿಲಿಫ್​ ಸಾಲ್ಟ್ ಅನ್ನು ಅಪ್ಪಿಕೊಂಡು ಬ್ಯಾಟಿಂಗ್​ಗೆ ಪ್ರಶಂಸಿಸಿದರು. ಸಿರಾಜ್​ ಪಂದ್ಯದದ ನಂತರ ಮೆರೆದ ಕ್ರೀಡಾ ಸ್ಪೂರ್ತಿಯಿಂದ ಇಬ್ಬರ ನಡುವಿನ ಮಾತಿನ ಚಕಮಕಿಗೆ ಅಂತ್ಯ ಕಂಡಿತು. ಕೊನೆಗೆ ಮನೆರಂಜಯ ಮೂಲಕ ಕ್ರಿಕೆಟ್​ ಗೆದ್ದಿತು ಎಂದರೆ ತಪ್ಪಾಗದು.

ಇದನ್ನೂ ಓದಿ: IPL 2023: ಗುಜರಾತ್​ ವಿರುದ್ಧ ಟಾಸ್​ ಗೆದ್ದ ಲಕ್ನೋ ಬೌಲಿಂಗ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.