ETV Bharat / sports

ಬೌಲಿಂಗ್​, ಫೀಲ್ಡಿಂಗ್​ನಲ್ಲಿ ಲಕ್ನೋ ಫೇಲ್​: ಪಂಜಾಬ್​ಗೆ 2 ವಿಕೆಟ್​ಗಳ ಗೆಲುವು

author img

By

Published : Apr 16, 2023, 7:21 AM IST

ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್ ಗೆಲುವು ಸಾಧಿಸಿತು. ಪಾಯಿಂಟ್​ ಪಟ್ಟಿಯಲ್ಲಿ ಪಂಜಾಬ್​ 4, ಲಖ್ನೋ ಸೋಲಿನಿಂದ 2ನೇ ಸ್ಥಾನಕ್ಕೆ ಕುಸಿಯಿತು.

ಬೌಲಿಂಗ್​, ಫೀಲ್ಡಿಂಗ್​ನಲ್ಲಿ ಲಖ್ನೋ ಫೇಲ್​
ಬೌಲಿಂಗ್​, ಫೀಲ್ಡಿಂಗ್​ನಲ್ಲಿ ಲಖ್ನೋ ಫೇಲ್​

ಲಕ್ನೋ (ಉತ್ತರ ಪ್ರದೇಶ): ಸೂಕ್ತ ರಣತಂತ್ರ, ಚುರುಕಿನ ನಿರ್ಧಾರದಿಂದ ಮಾತ್ರ ಟಿ20ಯಲ್ಲಿ ಗೆಲುವು ಪಡೆಯಲು ಸಾಧ್ಯ. ಇವೆರಡರಲ್ಲೂ ಎಡವಿದ ಲಕ್ನೋ ಸೂಪರ್​ ಜೈಂಟ್ಸ್​ ಪಂಜಾಬ್​ ಎದುರಿನ ಪಂದ್ಯದಲ್ಲಿ ಸೋಲು ಕಂಡು, ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿತು. ಸಾಧಾರಣ ಮೊತ್ತವನ್ನು ಹರಸಾಹಸದಿಂದ ಗೆದ್ದ ಪಂಜಾಬ್​ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.

ಟಾಸ್​ ಗೆದ್ದ ಪಂಜಾಬ್​, ಲಕ್ನೋವನ್ನು ಬ್ಯಾಟಿಂಗ್​ಗೆ ಇಳಿಸಿತು. ಅದ್ಭುತ ಬ್ಯಾಟಿಂಗ್​ ಪಡೆ ಹೊಂದಿದಾಗ್ಯೂ ಲಕ್ನೋ ವೈಫಲ್ಯ ಅನುಭವಿಸಿತು. ನಾಯಕ ಕೆಎಲ್​ ರಾಹುಲ್​ ಅರ್ಧಶತಕದ ಬಲದಿಂದ 8 ವಿಕೆಟ್​ಗೆ 159 ರನ್​ ಗಳಿಸಿದರು. ಇದನ್ನು ಬೆನ್ನತ್ತಿದ ಪಂಜಾಬ್​ ಕಿಂಗ್ಸ್​ ಆರಂಭಿಕ ಆಘಾತ ಮತ್ತು ಸಿಕಂದರ್​ ರಾಜಾ ಅರ್ಧಶತಕದ ನೆರವಿನಿಂದ 19.3 ಓವರ್​ಗಳಲ್ಲಿ 161 ರನ್​ ಮಾಡಿ ಜಯ ದಾಖಲಿಸಿತು.

ಗುರಿ ಸಾಧಾರಣವಾಗಿದ್ದರೂ, ಪಂಜಾಬ್​ ಬ್ಯಾಟರ್​ಗಳ ಪರದಾಟ ನಡೆಸಿದರು. ಸಿಕಂದರ್​ ರಾಜಾ 41 ಎಸೆತಗಳಲ್ಲಿ 57 ರನ್​ ಮಾಡಿದರು. ಇದರಲ್ಲಿ 4 ಬೌಂಡರಿ 3 ಸಿಕ್ಸರ್​ ಇದ್ದವು. ಉಳಿದಂತೆ ಮ್ಯಾಥ್ಯೂವ್​​ ಶಾರ್ಟ್​ 34, ಹರ್​ಪ್ರೀತ್​ ಸಿಂಗ್​ ಭಾಟಿಯಾ 22, ಬೌಲಿಂಗ್​ನಲ್ಲಿ ಮಿಂಚಿದ್ದ ಹಂಗಾಮಿ ನಾಯಕ ಸ್ಯಾಮ್​ ಕರ್ರನ್​(6) ವೈಫಲ್ಯ ಕಂಡರು. ಕೊನೆಯಲ್ಲಿ ಶಾರೂಖ್​ಖಾನ್​ 23 ರನ್​ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಲಕ್ನೋ ಬೌಲಿಂಗ್​ ಎಡವಟ್ಟು: ರಾಹುಲ್​ ನೇತೃತ್ವದ ಲಖ್ನೋ ಬೌಲಿಂಗ್​, ಫೀಲ್ಡಿಂಗ್​ನಲ್ಲಿ ಮಾಡಿದ ಎಡವಟ್ಟಿನಿಂದ ಪಂದ್ಯ ಕೈಚೆಲ್ಲಿದರು. ತಂಡದ ಪ್ರಮುಖ ಸ್ಪಿನ್ನರ್​ ರವಿ ಬಿಷ್ಣೋಯಿ 2 ವಿಕೆಟ್​ ಪಡೆದು ಮಿಂಚಿದರೂ, ಕೇವಲ 2.3 ಓವರ್​ ಮಾತ್ರ ಬೌಲ್​ ಮಾಡಿದರು. ಸೂಕ್ತ ವೇಳೆ ಬೌಲಿಂಗ್​ ನೀಡಲಿಲ್ಲ. ಅಲ್ಲದೇ, ಫೀಲ್ಡಿಂಗ್​​ನಲ್ಲಿ ಕ್ಯಾಚ್​ ಕೈಚೆಲ್ಲಿದರು. ಇದು ತಂಡಕ್ಕೆ ದುಬಾರಿಯಾಯಿತು. ಮಾರ್ಕ್​ ವುಡ್​, ಯುದ್ವೀರ್​ ಸಿಂಗ್​ ಚರಾಕ್​ ತಲಾ 2 ವಿಕೆಟ್​ ಪಡೆದರು.

ರಾಹುಲ್​​ ಅರ್ಧಶತಕದ ಬಲ: ಮೊದಲು ಬ್ಯಾಟ್​ ಮಾಡಿದ ಲಖ್ನೋಗೆ ಆರಂಭಿಕರಾದ ನಾಯಕ ಕೆಎಲ್​ ರಾಹುಲ್​, ಕೈಲ್​ ಮೇಯರ್ಸ್​ ನೆರವಾದರು. ಮೊದಲ ವಿಕೆಟ್​ಗೆ 53 ರನ್​ಗಳ ಜೊತೆಯಾಟ ನೀಡಿದ ಇಬ್ಬರು ಬೇರ್ಪಟ್ಟರು. ವೆಸ್ಟ್​ ಇಂಡೀಸ್​ ದೈತ್ಯ ಮೇಯರ್ಸ್​ 29 ರನ್​ಗೆ ಔಟಾದರು. ಇದಾದ ಬಳಿಕ ದೀಪಕ್​ ಹೂಡಾ(2), ನಿಕೋಲಸ್​ ಪೂರನ್​ (0), ಮಾರ್ಕ್ ಸ್ಟೊಯಿನೀಸ್​ (15), ಆಯುಷ್​ ಬದೌನಿ (5), ಕೃನಾಲ್​ ಪಾಂಡ್ಯ 18 ರನ್ ಮಾತ್ರ ಮಾಡಿದರು.

ವಿಕೆಟ್​ ಬೀಳುತ್ತಿದ್ದರೂ ಮೈದಾನ ಕಚ್ಚಿಕೊಂಡು ಆಡಿದ ನಾಯಕ ರಾಹುಲ್​ 56 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​ ಸಮೇತ 74 ರನ್​ ಚಚ್ಚಿದರು. ಐಪಿಎಲ್​ನಲ್ಲಿ ರಾಹುಲ್​ 32 ನೇ ಅರ್ಧಶತಕ ಬಾರಿಸಿದರು. ಶಿಖರ್​ ಧವನ್​ ಬದಲಾಗಿ ತಂಡದ ನಾಯಕತ್ವ ವಹಿಸಿದ್ದ ಆಲ್​ರೌಂಡರ್​ ಸ್ಯಾಮ್​ ಕರ್ರನ್​ 3, ಕಗಿಸೋ ರಬಾಡ 2 ವಿಕೆಟ್​ ಕಿತ್ತು ಮಿಂಚಿದರು.

4000 ರನ್ ಪೂರೈಸಿದ ರಾಹುಲ್​: ಐಪಿಎಲ್​ನಲ್ಲಿ ಕೆಎಲ್​ ರಾಹುಲ್​ 4000 ರನ್​ ಗಡಿ ಮುಟ್ಟಿದರು. ಇಂದಿನ ಇನ್ನಿಂಗ್ಸ್​ನಲ್ಲಿ 56 ಬಾಲ್​ನ್ನು ಎದುರಿಸಿದ ರಾಹುಲ್​ 8 ಬೌಂಡರಿ ಮತ್ತು ಒಂದು ಸಿಕ್ಸ್​ನಿಂದ 74 ರನ್​ ಗಳಿಸಿದರು. ಕಡಿಮೆ ಇನ್ನಿಂಗ್ಸ್​ನಲ್ಲಿ 4000 ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಒಳಗಾದರು. ರಾಹುಲ್​ 105 ಇನ್ನಿಂಗ್ಸನಲ್ಲಿ ಈ ದಾಖಲೆ ಮಾಡಿದ್ದಾರೆ ಇದಕ್ಕೂ ಮೊದಲು ಕ್ರಿಸ್​ ಗೇಲ್​ (112), ಡೇವಿಡ್​ ವಾರ್ನರ್​ (114), ವಿರಾಟ್​ ಕೊಹ್ಲಿ (128) ಮತ್ತು ಎಬಿ ಡಿ ವಿಲಿಯರ್ಸ್​ (131) ಈ ಸಾಧನೆ ಮಾಡಿದ್ದರು.

ಓದಿ: RCB vs DC : ಚಾಲೆಂಜರ್ಸ್​ಗೆ ಮಣಿದ ಕ್ಯಾಪಿಟಲ್ಸ್​, ಗೆಲುವಿನ ಲಯಕ್ಕೆ ಮರಳಿದ ಆರ್​ಸಿಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.