ETV Bharat / sports

ಮುಂಬೈ ಇಂಡಿಯನ್ಸ್‌ಗೆ ಜೊತೆಯಾಟದ ಕೊರತೆ ಕಾಡುತ್ತಿದೆ: ಸುನಿಲ್​ ಗವಾಸ್ಕರ್

author img

By

Published : Apr 11, 2023, 5:19 PM IST

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸತತ ಸೋಲು ಕಾಣುತ್ತಿದೆ.

Gavaskar
ಸುನಿಲ್​ ಗವಾಸ್ಕರ್​

ನವದೆಹಲಿ: ಕಳೆದ ಐಪಿಎಲ್​ ಮತ್ತು ಪ್ರಸಕ್ತ ಸಾಲಿನ ಆವೃತ್ತಿಯ ಆರಂಭದ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​ ಕಳಪೆ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್,​ ಬೌಲಿಂಗ್​ನಲ್ಲಿ ವಿಫಲವಾಗುತ್ತಿದೆ. ಸ್ಟಾರ್​ ಬೌಲರ್​ಗಳ ಕೊರತೆಯೂ ಎದ್ದು ಕಾಣುತ್ತಿದೆ. 2022ರ ಮೆಗಾ ಹರಾಜಿನ ನಂತರ ಮುಂಬೈ ವೀಕ್​ ಆಗಿದೆ.

ಮುಂಬೈ ಇಂಡಿಯನ್ಸ್​ ತಂಡದಲ್ಲಿದ್ದ ಹಾರ್ದಿಕ್​ ಪಾಂಡ್ಯ, ಕೃನಾಲ್​ ಪಾಂಡ್ಯ, ಕ್ವಿಂಟನ್​ ಡಿ ಕಾಕ್​, ಟ್ರಂಟ್​ ಬೌಲ್ಟ್​​ ಬೇರೆ ಫ್ರಾಂಚೈಸಿ ಸೇರಿದರೆ, ಬೂಮ್ರಾ ಈ ಆವೃತ್ತಿಯಿಂದ ಹೊರಗಿದ್ದಾರೆ. ರೋಹಿತ್​ ಪಾಳಯದ ಫಿನಿಶರ್​ ಆಗಿದ್ದ ಕಿರನ್​ ಪೊಲಾರ್ಡ್​ ನಿವೃತ್ತಿ ಘೋಷಿಸಿದ್ದಾರೆ. ತಂಡದಲ್ಲಿ ಬಾಕಿ ಉಳಿದಿರುವ ಸೂರ್ಯ ಕುಮಾರ್​ ಯಾದವ್​, ಇಶಾನ್​ ಕಿಶನ್​ ಮತ್ತು ರೋಹಿತ್​ ಶರ್ಮಾ ಬೃಹತ್​ ಜೊತೆಯಾಟ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.

ತಂಡ ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಆರ್​ಸಿಬಿ ವಿರುದ್ಧ ತಿಲಕ್​ ವರ್ಮಾ ಬ್ಯಾಟಿಂಗ್​ ಬಲದಿಂದ 172 ರನ್​ ಗಳಿಸಿದರೂ, ಆರ್​ಸಿಬಿ ಎರಡೇ ವಿಕೆಟ್​ ಕಳೆದುಕೊಂಡು 17 ನೇ ಓವರ್​ನಲ್ಲಿ ಪಂದ್ಯ ಗೆದ್ದುಕೊಂಡಿತು. ಚೆನ್ನೈ ವಿರುದ್ಧ 8 ವಿಕೆಟ್​ ಕಳೆದುಕೊಂಡು 157 ರನ್​ ಮಾತ್ರ ಗಳಿಸಿತ್ತು. ಪಂದ್ಯವನ್ನು ಚೆನ್ನೈ ಮೂರು ವಿಕೆಟ್​ ಕಳೆದುಕೊಂಡು ಗೆಲುವಿನ ದಡ ಸೇರಿತ್ತು.

ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ 300 ಸಿಕ್ಸರ್‌! ರೋಚಕ ಪಂದ್ಯ ಸೋತು ಮನಗೆದ್ದ RCB ನಾಯಕ ಡು ಪ್ಲೆಸಿಸ್

ಈ ಕುರಿತು ಮಾಧ್ಯಮವೊಂದಕ್ಕೆ ಮಾತನಾಡಿದ ಸುನಿಲ್​ ಗವಾಸ್ಕರ್, "ಕಳೆದ ಸೀಸನ್‌ನಿಂದ ಇಲ್ಲಿಯವರೆಗಿನ ದೊಡ್ಡ ಜೊತೆಯಾಟ ಬಾರದಿರುವುದು ಮುಂಬೈ ತಂಡದ ದೊಡ್ಡ ಸಮಸ್ಯೆ. ದೊಡ್ಡ ಜೊತೆಯಾಟ ಬರದೇ ಇದ್ದಲ್ಲಿ ಸ್ಕೋರ್​ ಬೋರ್ಡ್​ನಲ್ಲಿ ಬೃಹತ್​ ಮೊತ್ತ ಕಲೆಹಾಕುವುದು ಕಷ್ಟ. ಜೊತೆಯಾಟದ ಕೊರತೆಯನ್ನು ಕಳೆದ ಕೆಲ ಪಂದ್ಯಗಳಿಂದ ಮುಂಬೈ ಇಂಡಿಯನ್ಸ್​ ಎದುರಿಸುತ್ತಾ ಬಂದಿದೆ. ರೋಹಿತ್​ ಶರ್ಮಾ ಮತ್ತು ಇಶಾನ್​ ಕಿಶನ್​ ಆರಂಭಿಕ ಜೊತೆಯಾಟ ಒದಗಿಸುವ ಅಗತ್ಯ ಇದೆ" ಎಂದು ಹೇಳಿದ್ದಾರೆ.

ಇಂದು ಫಿರೋಜ್‌ಶಾ ಕೋಟ್ಲಾ ಮೈದಾನದಲ್ಲಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್​​ ಆಡುತ್ತಿವೆ. ಡಿಸಿ ನಾಯಕ ರಿಷಬ್​ ಪಂತ್​ ಇಲ್ಲದೇ ಕೊರತೆ ಅನುಭವಿಸುತ್ತಿದೆ. ಇದಲ್ಲದೇ ಈ ಆವೃತ್ತಿಯಲ್ಲಿ ಎರಡೂ ತಂಡಗಳು ಒಂದು ಗೆಲುವನ್ನು ಕಂಡಿಲ್ಲ. ಇಂದಿನ ಗೆಲುವು ತಂಡಗಳಿಗೆ ಚೊಚ್ಚಲ ಗೆಲುವಾಗಲಿದೆ. ನಾಲ್ಕನೇ ಸ್ಥಾನಕ್ಕೆ ಪ್ರವೇಶಿಸಲು ಎರಡೂ ತಂಡಕ್ಕೆ ಮುಂದಿನ ಪಂದ್ಯಗಳ ಗೆಲುವುಗಳು ಪ್ರಮುಖ ನಿರ್ಣಾಯಕಗಳಾಗಲಿವೆ.

ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ, "ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಡೇವಿಡ್​ ವಾರ್ನರ್​ ಪವರ್​ ಪ್ಲೇ ಸಂದರ್ಭದಲ್ಲಿ ಉತ್ತಮ ರನ್​ ಕಲೆಹಾಕುವ ಅಗತ್ಯ ಇದೆ" ಎಂದು ಹೇಳಿದ್ದಾರೆ. ಮೂರು ಪಂದ್ಯದಲ್ಲಿ ವಾರ್ನರ್​ ಉತ್ತಮ ರನ್​ ಗಳಿಸುತ್ತಿದ್ದಾರೆ. ಆದರೆ ಏಕಾಂಗಿಯಾಗಿ ಆಡುತ್ತಿರುವುದರಿಂದ ಭರ್ಜರಿ ಸಿಕ್ಸರ್​ಗಳು ಅವರ ಬ್ಯಾಟ್​ನಿಂದ ಬರುತ್ತಿಲ್ಲ.

ಇದನ್ನೂ ಓದಿ: IPL 2023: ಮೊದಲ ಗೆಲುವಿಗಾಗಿ ಡೆಲ್ಲಿ - ಮುಂಬೈ ಫೈಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.