ETV Bharat / sports

Iplನಲ್ಲಿ ಇಂದು: ಪ್ಲೇ ಆಫ್​ ಉಳಿವಿಗಾಗಿ ಪಂಜಾಬ್​-ಕೋಲ್ಕತ್ತಾ ಕದನ

author img

By

Published : May 8, 2023, 3:52 PM IST

ಕೋಲ್ಕತ್ತಾದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹಣಾಹಣಿಯಲ್ಲಿ ಸೋತ ತಂಡ ಪ್ಲೇ-ಆಫ್ ತಲುಪುವ ಸಾಧ್ಯತೆಗಳು ಕೊನೆಗೊಂಡು ಇತರರನ್ನು ಅವಲಂಬಿಸಬೇಕಾಗಿದೆ.

Kolkata Knight Riders vs Punjab Kings 53rd Match preview
IPLನಲ್ಲಿ ಇಂದು: ಪ್ಲೇ ಆಫ್​ ಉಳಿವಿಗಾಗಿ ಪಂಜಾಬ್​-ಕೋಲ್ಕತ್ತಾ ಕದನ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್​ ಪ್ರೀಮಿಯರ್​ ಲೀಗ್​ನ 16ನೇ ಆವೃತ್ತಿ ಶೇಕಡಾ 75 ರಷ್ಟು ಮುಗಿದಿದ್ದು, ಮುಂದಿನ ಪಂದ್ಯಗಳು ಪ್ಲೇ ಆಫ್​ ಕ್ವಾಲಿಫೈರ್​ಗೆ ಕೆಳಗಿರುವ ತಂಡಗಳಿಗೆ ಪ್ರಮುಖವಾಗಲಿದೆ. ಪ್ರತೀ ಪಂದ್ಯವೂ ಮೇಲಿನ ನಾಲ್ಕು ಸ್ಥಾನದಲ್ಲಿ ಅವಕಾಶಕ್ಕಾಗಿ ನಡೆಯಲಿದೆ. ಇಂದಿನ ಕೋಲ್ಕತ್ತಾ ಮತ್ತು ಪಂಜಾಬ್​ ಕಿಂಗ್ಸ್​ನ ನಡುವಿನ ಫೈಟ್​ ಸಹ ಇದೇ ರೀತಿಯಾಗಿದ್ದು, ಗೆದ್ದವರಿಗೆ ಪ್ಲೇ ಆಫ್​ ಕನಸು ಮುಂದುವರೆಯಲಿದೆ. ಸೋತ ತಂಡ ಮಿಕ್ಕ ತಂಡಗಳ ಫಲಿತಾಂಶದ ಲಾಭದಲ್ಲಿ ತನ್ನ ಸ್ಥಾನದ ಉಳಿವನ್ನು ಎದುರು ನೋಡಬೇಕಾಗುತ್ತದೆ.

ಐಪಿಎಲ್ 2023ರ 53ನೇ ಪಂದ್ಯದಲ್ಲಿ ನಿತೀಶ್​ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಶಿಖರ್​ ಧವನ್ ಮುಂದಾಳತ್ವದ ಪಂಜಾಬ್​ ಕಿಂಗ್ಸ್​ ನಡುವೆ ನಡೆಯಲಿದೆ. ಕೋಲ್ಕತ್ತಾದ ತವರು ಮೈದಾನವಾದ ಈಡನ್ ಗಾರ್ಡನ್ಸ್ ಇಂದಿನ ಪಂದ್ಯ ನಡೆಯಲಿದ್ದು, ಸಂಜೆ 07:30ಕ್ಕೆ ಆರಂಭವಾಗಲಿದೆ. ಪಂಜಾಬ್ ಕಿಂಗ್ಸ್‌ಗೆ ಪ್ಲೇ ಆಫ್‌ಗೆ ಪ್ರವೇಶಿಸಲು ಇನ್ನೂ ಅವಕಾಶವಿದೆ. 10 ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಎಂಟನೇ ಸ್ಥಾನಕ್ಕೆ ತಲುಪಿದೆ. ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಾಂಕ ಸುಧಾರಿಸುತ್ತದೆ, ಆದರೆ ಪ್ಲೇ-ಆಫ್‌ಗೆ ಹೋಗಲು ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ರನ್ ರೇಟ್ ಕೂಡ ಉತ್ತಮವಾಗಿಸಿಕೊಳ್ಳಬೇಕಾಗಿದೆ.

ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವುದು ಪಂಜಾಬ್ ಕಿಂಗ್ಸ್‌ನ ಗುರಿಯಾಗಿದೆ. ಇಂದಿನ ಪಂದ್ಯ ಗೆದ್ದಲ್ಲಿ ಪಂಜಾಬ್​ ಅಂಕಪಟ್ಟಿಯ ನಾಲ್ಕನೇ ಸ್ಥಾನಕ್ಕೆ ಏರಲಿದೆ. ಕಳೆದ ಪಂದ್ಯದಲ್ಲಿ ಲಿವಿಂಗ್​ ಸ್ಟೋನ್​ ಮತ್ತು ಜಿತೇಶ್​ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್​ ಸಹಾಯದಿಂದ 214 ರನ್​ ಕಲೆಹಾಕಿದರೂ, ಬೌಲಿಂಗ್​ನಲ್ಲಿ ಎಡವಿ ಮುಂಬೈ ವಿರುದ್ಧ 6 ವಿಕೆಟ್​ಗಳ ಸೋಲನ್ನು ಪಂಜಾಬ್​ ಕಂಡಿದೆ. ಇಂದು ಮತ್ತದೇ ಬ್ಯಾಟಿಂಗ್​ ಪ್ರದರ್ಶನ ನೀಡಿ ಬೌಲಿಂಗ್​​ನಲ್ಲಿ ಸುಧಾರಿಸಿಕೊಳ್ಳಬೇಕಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​ ಕಳೆದ ಪಂದ್ಯದಲ್ಲಿ ಸನ್​ ರೈಸರ್ಸ್​ ವಿರುದ್ಧ 5 ರನ್​ನ ರೋಚಕ ಗೆಲುವು ಬರೆದಿದೆ. ಇದೇ ಸ್ಥೈರ್ಯದಲ್ಲಿ ಇಂದಿನ ಪಂದ್ಯವನ್ನು ತವರು ಮೈದಾನದಲ್ಲಿ ರಾಣಾ ಪಡೆ ಮುಂದುವರೆಸಬೇಕಿದೆ. ಕೆಕೆಆರ್​ ಈ ಆವೃತ್ತಿಯಲ್ಲಿ ಸಂಪೂರ್ಣ ಏರಿಳಿತದ ಆಟವನ್ನು ಪ್ರದರ್ಶಿಸಿದೆ. ಈ ಆವೃತ್ತಿಯಲ್ಲಿ ಯಾವುದೇ ಬ್ಯಾಟರ್​ನಿಂದ ತಂಡದಲ್ಲಿ ಉತ್ತಮ ಫಾರ್ಮ್​ ಕಂಡು ಬಂದಿಲ್ಲ. ಇದು ಕೆಕೆಆರ್​ನ್ನು ಸಂಕಷ್ಟಕ್ಕೆ ದೂಡಿದೆ.

ಸಂಭಾವ್ಯ ತಂಡಗಳು ಇಂತಿವೆ..: ಕೋಲ್ಕತ್ತಾ ನೈಟ್​ ರೈಡರ್ಸ್​: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಪಂಜಾಬ್​ ಕಿಂಗ್ಸ್​​: ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಸ್ಯಾಮ್ ಕರ್ರಾನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್

ಇದನ್ನೂ ಓದಿ: ಯಜುವೇಂದ್ರ ಚಹಲ್ ಐಪಿಎಲ್​ನ ಗರಿಷ್ಠ ವಿಕೆಟ್​ ಸರದಾರ: ರಾಜಸ್ಥಾನ Vs ಹೈದರಾಬಾದ್​ ಮ್ಯಾಚ್​ ಫೋಟೋಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.