ETV Bharat / sports

Kkr Vs Gt: ಕೋಲ್ಕತ್ತಾ ವಿರುದ್ಧ ಟಾಸ್​ ಗೆದ್ದ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಯ್ಕೆ, ಮಳೆಯಿಂದ ಪಂದ್ಯ ವಿಳಂಬ

author img

By

Published : Apr 29, 2023, 3:19 PM IST

Updated : Apr 29, 2023, 3:56 PM IST

ಕೋಲ್ಕತ್ತಾ ನೈಟ್​ ರೈಡರ್ಸ್​ನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ಹಾಲಿ ಚಾಂಪಿಯನ್​ಗಳ ಪ್ರಯತ್ನ ಮಾಡುತ್ತಿದ್ದಾರೆ.

Etv Bharat
Etv Bharat

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್​ ಪ್ರೀಮಿಯರ್ ​ಲೀಗ್​ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ಮುಖಾಮುಖಿಯಾಗಿವೆ. ಇಲ್ಲಿನ ಈಡನ್​ ಗಾರ್ಡನ್ಸ್​ ಮೈದಾನದಲ್ಲಿ ಟಾಸ್​ ಗೆದ್ದ ಗುಜರಾತ್​ ಟೈಟಾನ್ಸ್​ ನಾಯಕ ಹಾರ್ದಿಕ್​ ಪಾಂಡ್ಯ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಟಾಸ್​ ನಂತರ ಮಳೆ ಬಂದ ಕಾರಣ ಪಂದ್ಯ ವಿಳಂಬವಾಗಿದೆ.

ಗುಜರಾತ್​ ತಂಡದಲ್ಲಿ ಕಳೆದ ತಂಡದಲ್ಲೇ ಮುಂದುವರೆದಿದೆ. ಕೆಕೆಆರ್​ನಲ್ಲಿ ಎರಡು ಬದಲಾವಣೆಗಳಾಗಿದ್ದು, ಜೇಸನ್ ರಾಯ್ ಅವರಿಗೆ ಬೆನ್ನಿನ ಸಮಸ್ಯೆ ಕಾರಣ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ರಹಮಾನುಲ್ಲಾ ಗುರ್ಬಾಜ್ ಆಡಲಿದ್ದಾರೆ. ಉಮೇಶ್ ಯಾದವ್ ಬದಲಿಗೆ ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ರೌಂಡ್-ರಾಬಿನ್ ಸುತ್ತಿನ ಎರಡನೇ ಮುಖಾಮುಖಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಗುಜರಾತ್​ ಟೈಟಾನ್ಸ್​ಅನ್ನು ಮೂರು ವಿಕೆಟ್​ಗಳಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಣಿಸಿತ್ತು. ಇಂದು ಗುಜರಾತ್​ ಕೆಕೆಆರ್​ನ್ನು ಮಣಿಸಿದಲ್ಲಿ ಅಗ್ರಸ್ಥಾನಕ್ಕೇರಲಿದೆ. ಈವರೆಗೆ ಆಡಿದ 7 ಪಂದ್ಯದಲ್ಲಿ ಜಿಟಿ 5 ಗೆಲುವಿನಿಂದ 10 ಅಂಕಗಳೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ತ ಕೆಕೆಆರ್​ 8 ಪಂದ್ಯದಲ್ಲಿ 3 ರಲ್ಲಿ ಗೆದ್ದು, 6 ಅಂಕ ಗಳಿಸಿದೆ.

ಗುಜರಾತ್​ನ ಟಾಪ್​ ಬೌಲರ್​ ರಶೀದ್​ ಖಾನ್​ಗೆ ಇದು ನೂರನೇ ಐಪಿಎಲ್​ ಪಂದ್ಯವಾಗಿದೆ. ಈವರೆಗೆ ಉತ್ತಮ ಪ್ರದರ್ಶನ ನೀಡಿರುವ ರಶೀದ್​ ಖಾನ್​ 7 ಪಂದ್ಯದಿಂದ 14 ವಿಕೆಟ್​ ಪಡೆದು ನೇರಳೆ ಕ್ಯಾಪ್​ ರೇಸ್​ನ ಎರಡನೇ ಸ್ಥಾನದಲ್ಲಿದ್ದಾರೆ. ಕೆಕೆಆರ್​ನ ಜಮೈಕನ್​ ಆಟಗಾರ ಆಂಡ್ರೆ ರಸೆಲ್​ ಅವರು ಇಂದು 35 ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಇಂದು ಅವರ ಬ್ಯಾಟ್​ನಿಂದ ಭರ್ಜರಿ ರನ್​ ಬರುವ ನಿರೀಕ್ಷೆ ಇದೆ.

ತಂಡಗಳು ಇಂತಿವೆ..: ಕೋಲ್ಕತ್ತಾ ನೈಟ್​ ರೈಡರ್ಸ್​: ಎನ್ ಜಗದೀಶನ್, ರಹಮಾನುಲ್ಲಾ ಗುರ್ಬಾಜ್(ವಿಕೆಟ್​ ಕೀಪರ್​), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಗುಜರಾತ್​ ಟೈಟಾನ್ಸ್​​: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್​​), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ವಿರುದ್ಧ ರನ್ ಮಳೆ ಸುರಿಸಿದ ಲಖನೌ... ಐಪಿಎಲ್​​ನ 2ನೇ ಗರಿಷ್ಠ ಮೊತ್ತ ದಾಖಲು

Last Updated : Apr 29, 2023, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.