ETV Bharat / sports

IPL 2023: ಹೈದರಾಬಾದ್ ವಿರುದ್ಧ 5 ರನ್​ಗಳಿಂದ ಗೆದ್ದ ಕೋಲ್ಕತ್ತಾ

author img

By

Published : May 4, 2023, 7:27 PM IST

Updated : May 5, 2023, 12:02 AM IST

ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ತವರಿನಲ್ಲಿ ನಡೆದ ಐಪಿಎಲ್​​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಕೊನೆ ಓವರ್​​​ನಲ್ಲಿ ಗೆಲುವು ಕೈ ಚೆಲ್ಲಿದೆ.

ipl-2023-47th-match-sunrisers-hyderabad-vs-kolkata-knight-riders
SRH vs KKR: ಸ್ಪರ್ಧಾಥ್ಮಕ ಮೊತ್ತ ಕಲೆ ಹಾಕಿದ ಕೊಲ್ಕತ್ತ, ಸನ್​​ ರೈಸರ್ಸ್​ಗೆ 172 ರನ್​ಗಳ ಗುರಿ

ಹೈದರಾಬಾದ್​​​ (ತೆಲಂಗಾಣ): ​ಸನ್​ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡ ಐದು ರನ್​ಗಳಿಂದ ಗೆಲುವು ಸಾಧಿಸಿದೆ. ನಿತೀಶ್​ ರಾಣಾ ಪಡೆ ನೀಡಿದ್ದ 172 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ್ದ ಹೈದರಾಬಾದ್ 8 ವಿಕೆಟ್​ ಕಳೆದುಕೊಂಡು 166 ರನ್​ ಕಲೆ ಹಾಕಲು ಮಾತ್ರ ಶಕ್ತವಾಯಿತು.

ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಕೋಲ್ಕತ್ತಾ 9 ವಿಕೆಟ್​ ನಷ್ಟಕ್ಕೆ 171 ರನ್​ ಪೇರಿಸಿತ್ತು. ಈ ರನ್​ಗಳ ಗುರಿ ಬೆನ್ನಟ್ಟಿದ ಹೈದರಾಬಾದ್​ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆರಂಭಿಕರಾದ ಮಯಾಂಕ್​ ಅಗರ್ವಾಲ್ (18) ಮತ್ತು ಅಭಿಷೇಕ್ ಶರ್ಮಾ (9) ಬೇಗ ವಿಕೆಟ್ ಒಪ್ಪಿಸಿದರು.

ನಂತರ ಬಂದ ರಾಹುಲ್​ ತ್ರಿಪಾಠಿ ಬಿರುಸಿನ ಬ್ಯಾಟಿಂಗ್​ ಬೀಸಿದರೂ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಗಿಲ್ಲ. 9 ಎಸತೆಗಳಲ್ಲಿ 20 ರನ್​ ಸಿಡಿಸಿ ಔಟಾದರು. ಹ್ಯಾರಿ ಬ್ರೂಕ್​ ಶೂನ್ಯಕ್ಕೆ ಪೆವಿಲಿಯನ್​ ಸೇರಿದರು. ಈ ಮೂಲಕ ಹೈದಾರಾಬಾದ್ ತಂಡದ ಮೊತ್ತ 54 ರನ್​ಗಳು ಆಗುವಷ್ಟರಲ್ಲಿ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ನಡುವೆ ನಾಯಕ ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಕ್ ಕ್ಲಾಸೆನ್ 70 ರನ್​ಗಳ ಉತ್ತಮ ಜೊತೆಯಾಟ ನೀಡಿದರು. 30 ಎಸೆತಗಳಲ್ಲಿ ಮೂರು ಸಿಕ್ಸರ್​, ಒಂದು ಬೌಂಡರಿ ಸಮೇತ 36 ರನ್​ಗಳ ಕಾಣಿಕೆ ನೀಡಿದರು. 40 ಬಾಲ್​ಗಳು ಎದುರಿಸಿದ ಮಾರ್ಕ್ರಾಮ್ ನಾಲ್ಕು ಬೌಂಡರಿಗಳೊಂದಿಗೆ 41 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದರು. ಮಾರ್ಕೊ ಜಾನ್ಸೆನ್ 4 ಬಾಲ್​ ಎದುರಿಸಿ ಒಂದೇ ರನ್​ ಮಾಡಿದರು.

ಕೊನೆಯ ಓವರ್​ಗೆ ಹೈದರಾಬಾದ್​ಗೆ ​9 ರನ್​ ಅಗತ್ಯವಿತ್ತು. ಆದರೆ, ಕೇವಲ 3 ರನ್​ ಮಾತ್ರ ಬಂದವು. 21 ರನ್​ ಗಳಿಸಿ ಆಡುತ್ತಿದ್ದ ಅಬ್ದುಲ್​ ಸಮದ್​ ಮೂರನೇ ಬಾಲ್​ನಲ್ಲಿ ವಿಕೆಟ್​ ಒಪ್ಪಿಸಿದರು. ಅಂತಿಮದ ಮೂರು ರನ್​ಗಳಲ್ಲಿ ಕೇವಲ ಒಂದು ಮಾತ್ರ ಬಂತು. ಇದರಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಭುವನೇಶ್ವರ್​ ಕುಮಾರ್ (5), ಮಾಯಾಂಕ್ ಮಾರ್ಕಂಡೆ (1) ಅಜೇಯರಾಗಿ ಉಳಿದರು. ಕೋಲ್ಕತ್ತಾ ಪರ ವೈಭವ್ ಆರೋರಾ, ಶಾರ್ದೂಲ್​ ಠಾಕೂರ್ ತಲಾ 2 ವಿಕೆಟ್​ ಪಡೆದರೆ​, ಆಂಡ್ರೆ ರಸೆಲ್​​​​​​, ಹರ್ಷಿತಾ ರಾಣಾ, ವರುಣ್​​​ ಚಕ್ರವರ್ತಿ, ಅನುಕುಲ್​ ರಾಯ್​ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಕೋಲ್ಕತ್ತಾ ತಂಡ ನಾಯಕ ನಿತೀಶ್​ ರಾಣಾ ಹಾಗೂ ರಿಂಕು ಸಿಂಗ್​​ ಸಹಾಯದಿಂದ 171 ರನ್​​ಗಳ ಗಳಿಸಿತ್ತು. ಮೊದಲು ಬ್ಯಾಟಿಂಗ್​​ಗೆ ಇಳಿದ ಕೋಲ್ಕತ್ತಾಗೆ ಮಾರ್ಕೊ ಯಾನ್ಸೆನ್​​​​​ ಎರಡು ವಿಕೆಟ್​​ ಪಡೆದುಕೊಂಡು ಆರಂಭಿಕ ಆಘಾತ ಕೊಟ್ಟರು. ರಹಮುನ್ನುಲ್ಲಾ ಗುರ್ಬಾಜ್ ​ತಮ್ಮ ಮೊದಲ ಎಸೆತದಲ್ಲೆ ಔಟಾಗಿ ಪೆವಿಲಿಯನ್​ ಹಾದಿ ಹಿಡಿದರು. ನಂತರ ಬ್ಯಾಟಿಂಗ್​​ಗೆ ಬಂದ ವೆಂಕಟೇಶ್​ ಅಯ್ಯರ್​​​ 4 ಎಸೆತದಲ್ಲಿ 7 ರನ್​ ಗಳಿಸಿ ನಿರ್ಗಮಿಸಿದರು. ಸುಮಾರು ಪಂದ್ಯಗಳ ನಂತರ ತಂಡಕ್ಕೆ ಮರಳಿದ್ದ ಕಾರ್ತಿಕ್​ ತ್ಯಾಗಿ ತಮ್ಮ ಮೊದಲನೇ ಓವರ್​ನಲ್ಲೇ ಜೇಸನ್​ ರಾಯ್​​ ಅವರ ವಿಕೆಟ್​​ ಕಬಳಿಸಿದರು.

ನಂತರ ತಂಡದ ನಾಯಕ ನಿತೀಶ್​​ ರಾಣಾ ಜವಾಬ್ದಾರಿಯುತ ಆಟವಾಡಿ 31 ಎಸೆತದಲ್ಲಿ 42 ರನ್​​ ಬಾರಿಸಿದರು. ಇದರ ನಡುವೆ ರಾಣಾ ಎಸ್​​​ಆರ್​​ಹೆಚ್​​​ ತಂಡದ ನಾಯಕ ಮಾರ್ಕಮ್​​ ಅವರಿಗೆ ವಿಕೆಟ್​​ ಒಪ್ಪಿಸಿದರು. ಹೊಡಿ ಬಡಿ ಆಟಗಾರ ಆಂಡ್ರೆ ರಸೆಲ್​​ 15 ಎಸೆದಲ್ಲಿ ಎರಡು ಸಿಕ್ಸರ್​​​, ಒಂದು ಬೌಂಡರಿಯೊಂದಿಗೆ 24 ಬಾರಿಸಿ ಮಾಯಂಕ್​ ಮಾರ್ಕಂಡೆಗೆ ಬಲೆಗೆ ಸಿಲುಕಿದರು. ವಿಕೆಟ್​ಗಳು ಬೀಳುತ್ತಿದ್ದರೂ ರಿಂಕು ಸಿಂಗ್​​​ ತಮ್ಮ ಬ್ಯಾಟಿಂಗ್ ಮುಂದುವರೆಸಿದರು.

ಕೊನೆಯಲ್ಲಿ ಬಂದ ಬ್ಯಾಟರ್​ಗಳು ಸ್ಕೋರ್​ ಹೆಚ್ಚಿಸಲು ಪ್ರಯತ್ನಿಸಿದರೂ ಹೆಚ್ಚು ಹೊತ್ತು ಯಾರು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ಡೆತ್​​ ಓವರ್​ನಲ್ಲಿ ಬ್ಯಾಟ್​ ಬೀಸಿದ ರಿಂಕು ಸಿಂಗ್ (46)​​​ ನಟರಾಜನ್​ ಬೌಲಿಂಗ್​ನಲ್ಲಿ ಕ್ಯಾಚ್​​ ಕೊಟ್ಟರು. ಅಂತಿಮವಾಗಿ 9 ವಿಕೆಟ್​ ನಷ್ಟಕ್ಕೆ 171 ರನ್​ಗಳ ಕಲೆ ಹಾಕಿತ್ತು. ಸನ್​​​ರೈಸರ್ಸ್​ ​ಪರ ಮಾರ್ಕೊ ಯಾನ್ಸೆನ್​​​ ಮತ್ತು ನಟರಾಜನ್​ ತಲಾ 2 ವಿಕೆಟ್​​​ ತೆಗದುಕೊಂಡರೆ, ಭುವನೇಶ್ವರ್​​ ಕುಮಾರ್​​, ಕಾರ್ತಿಕ್​​​ ತ್ಯಾಗಿ, ಮಾಯಂಕ್​​ ಮಾರ್ಕಂಡೆ ಮತ್ತು ಮಾರ್ಕಮ್​​ ತಲಾ ಒಂದು ವಿಕೆಟ್​ ಪಡೆದರು.

Last Updated : May 5, 2023, 12:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.