ETV Bharat / sports

ಆರ್​ಆರ್​ ಬೌಲಿಂಗ್​ ಎದುರು ಧೂಳಿಪಟವಾದ ಆರ್​ಸಿಬಿ... ಸ್ಯಾಮ್ಸನ್​ ಬಳಗಕ್ಕೆ 29 ರನ್​ಗಳ ಜಯ

author img

By

Published : Apr 27, 2022, 12:57 AM IST

ರಾಜಸ್ಥಾನ ರಾಯಲ್ಸ್​ ನೀಡಿದ್ದ 145ರನ್​ಗಳ ಸಾಧಾರಣ ಗುರಿ ಬೆನ್ನತ್ತುವಲ್ಲಿ ವಿಫಲವಾದ ಬೆಂಗಳೂರು ತಂಡ 115ರನ್​ಗಳಿಕೆ ಮಾಡುವಷ್ಟರಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು, ಮತ್ತೊಂದು ಸೋಲು ಅನುಭವಿಸಿದೆ.

Rajasthan royals wins against RCB
Rajasthan royals wins against RCB

ಪುಣೆ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ರಾಜಸ್ಥಾನ ರಾಯಲ್ಸ್​ ತಂಡದ ಎದುರಿನ ಪಂದ್ಯದಲ್ಲೂ ಬೆಂಗಳೂರು ತಂಡದ ಕಳಪೆ ಬ್ಯಾಟಿಂಗ್​ ಪ್ರದರ್ಶನ ಮುಂದುವರೆದಿದೆ. ಸ್ಯಾಮ್ಸನ್​ ಪಡೆ ನೀಡಿದ್ದ ಸಾಧಾರಣ ಗುರಿ ಬೆನ್ನತ್ತುವಲ್ಲಿ ವಿಫಲವಾದ ಡುಪ್ಲೆಸಿಸ್​ ತಂಡ 29ರನ್​ಗಳ ಅಂತರದ ಸೋಲು ಕಂಡಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಯಲ್ಪಟ್ಟಿದ್ದ ರಾಯಲ್ಸ್ ತಂಡ ಕೇವಲ 33 ರನ್​ಗಳಾಗುವಷ್ಟರಲ್ಲೇ ಪ್ರಮುಖ ಮೂರು ಕಳೆದುಕೊಂಡಿತು. ದೇವದತ್​ ಪಡಿಕ್ಕಲ್(7), ರವಿಚಂದ್ರನ್ ಅಶ್ವಿನ್(17) ಮತ್ತು ಕಳೆದ ಪಂದ್ಯದ ಶತಕ ವೀರ ಜಾಸ್ ಬಟ್ಲರ್​(8) ಪವರ್​ ಪ್ಲೇ ಮುಗಿಯುವುದರೊಳಗೆ ವಿಕೆಟ್​ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್​ ಸ್ಯಾಮ್ಸನ್​(27ರನ್​) ಹಾಗೂ ಆಲ್​ರೌಂಡರ್ ಪರಾಗ್​ ಅಜೇಯ 56ರನ್​ಗಳ ಸಹಾಯದಿಂದ ನಿಗದಿತ 20 ಓವರ್​ಗಳಲ್ಲಿ 8ವಿಕೆಟ್​ನಷ್ಟಕ್ಕೆ 144ರನ್​ಗಳಿಕೆ ಮಾಡಿತು.

ಆರ್​ಸಿಬಿ ಪರ ಆರ್​ಸಿಬಿ ಪರ ಜಾಶ್ ಹೇಜಲ್​ವುಡ್​ 17ಕ್ಕೆ2, ವನಿಂಡು ಹಸರಂಗ 23ಕ್ಕೆ2, ಮೊಹಮ್ಮದ್ ಸಿರಾಜ್​ 30ಕ್ಕೆ2 ಹಾಗೂ ಹರ್ಷಲ್ ಪಟೇಲ್ 33ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಬೆಂಗಳೂರು ಇನ್ನಿಂಗ್ಸ್​: ತಂಡದ ಪರ ಬ್ಯಾಟಿಂಗ್​ನಲ್ಲಿ ಮುಂಬಡ್ತಿ ಪಡೆದು ಡುಪ್ಲೆಸಿಸ್​​ ಜೊತೆ ಇನ್ನಿಂಗ್ಸ್​ ಆರಂಭಿಸಿದ ವಿರಾಟ್​ ಕೊಹ್ಲಿ(9) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಡುಪ್ಲೆಸಿಸ್​ 23ರನ್​ಗಳಿಸಿ ವಿಕೆಟ್​ ಒಪ್ಪಿಸಿದರೆ, ರಜತ್​ 16ರನ್​ಗಳಿಕೆ ಮಾಡಿ ಪೆವಿಲಿಯನ್​ ಸೇರಿಕೊಂಡರು. ಮ್ಯಾಕ್ಸವೆಲ್​(0), ಅಹಮದ್​ 17ರನ್​ಗಳಿಸಿದರೆ, ಕಾರ್ತಿಕ್​ ರನೌಟ್​ ಆಗಿ ನಿರಾಸೆ ಮೂಡಿಸಿದರು.

ಹಸರಂಗ 18ರನ್​, ಹರ್ಷಲ್ 8ರನ್​ಗಳಿಸಿ ವಿಕೆಟ್​ ಒಪ್ಪಿಸುತ್ತಿದ್ದಂತೆ ತಂಡ ಗೆಲುವಿನ ಆಸೆ ಕೈಚೆಲ್ಲುವಂತಾಯಿತು. ತಂಡ ಕೊನೆಯದಾಗಿ 19.3 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 115ರನ್​ ಮಾತ್ರಗಳಿಸಿ, 29ರನ್​ಗಳ ಸೋಲು ಕಂಡಿತು. ಆರ್​ಆರ್​ ಪರ ಬೌಲಿಂಗ್​ನಲ್ಲಿ ಮಿಂಚಿದ ಕುಲ್ದೀಪ್​ ಸೇನ್ 4ವಿಕೆಟ್​ ಪಡೆದರೆ, ಅಶ್ವಿನ್ 3 ವಿಕೆಟ್​ ಹಾಗೂ ಪ್ರಸಿದ್ಧ್ ಕೃಷ್ಣ 2ವಿಕೆಟ್​ ಪಡೆದು ಎದುರಾಳಿ ತಂಡಕ್ಕೆ ಮಾರಕವಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.