ETV Bharat / sports

'ಅದೃಷ್ಟ ಶೀಘ್ರವೇ ನಿಮ್ಮತ್ತ ತಿರುಗಲಿದೆ': ವಿರಾಟ್​ಗೆ ಪಂಜಾಬ್​ ತಂಡದ ಶುಭ ಸಂದೇಶ

author img

By

Published : May 14, 2022, 3:12 PM IST

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ಮುಂದುವರೆದಿದೆ. ನಿನ್ನೆಯ ಪಂದ್ಯದಲ್ಲೂ ಅವರು ವೈಫಲ್ಯ ಅನುಭವಿಸಿದ್ದಾರೆ..

Punjab Kings post for virat kohli
Punjab Kings post for virat kohli

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ವಿರಾಟ್​​ ಕೊಹ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ಮುಂದುವರೆದಿದೆ. ಪಂಜಾಬ್​ ವಿರುದ್ಧ ನಡೆದ ಪಂದ್ಯದಲ್ಲೂ ಆರಂಭದಲ್ಲಿ ಬಿರುಸಿನ ಆಟಕ್ಕೆ ಮೊರೆ ಹೋದ ಕಿಂಗ್​ ಕೊಹ್ಲಿ, ತದನಂತರ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು. ವಿಕೆಟ್​ ಒಪ್ಪಿಸುತ್ತಿದ್ದಂತೆ ಆಕಾಶದತ್ತ ಮುಖಮಾಡಿ, ನಿರಾಶೆಯಿಂದಲೇ ವಿರಾಟ್​ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು.

ವಿರಾಟ್​ ಕೊಹ್ಲಿಯ ಫೋಟೋವೊಂದನ್ನ ಹಚ್ಚಿಕೊಂಡಿರುವ ಕಿಂಗ್ಸ್​ ಪಂಜಾಬ್​ ತಂಡ, ನೀವು ಉತ್ತಮ ಲಯದಲ್ಲಿ ಕಂಡಬಂದಿರುವುದಕ್ಕೆ ನಾವೂ ಸಹ ಸಂಭ್ರಮಿಸಿದ್ದೇವೆ. ಆದಷ್ಟು ಬೇಗ ನೀವೂ ಹಿಂದಿನ ಫಾರ್ಮ್​​ಗೆ ಮರಳಲಿದ್ದೀರಿ. ಅದೃಷ್ಟ ಶೀಘ್ರವೇ ನಿಮ್ಮತ್ತ ತಿರುಗಲಿದೆ ಎಂದು ಬರೆದುಕೊಂಡಿದೆ. ಕಿಂಗ್ಸ್ ಪಂಜಾಬ್ ಈ ಟ್ವೀಟ್​ಗೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಲು ಶುರುವಾಗಿದೆ.

ಇದನ್ನೂ ಓದಿ: ಪಂಜಾಬ್​ ವಿರುದ್ಧ ಹೀನಾಯವಾಗಿ ಸೋತ ಆರ್​ಸಿಬಿಗೆ ಪ್ಲೇ ಆಫ್​ ಕನಸು ಇನ್ನೂ ಜೀವಂತ!

2022ರ ಐಪಿಎಲ್​​ನಲ್ಲಿ ವಿರಾಟ್​​ ಕೊಹ್ಲಿ ಈವರೆಗೆ 13 ಪಂದ್ಯಗಳನ್ನಾಡಿದ್ದು, 19.66ರ ಸರಾಸರಿಯಲ್ಲಿ 236 ರನ್​​ಗಳಿಕೆ ಮಾಡಿದ್ದರು. ಇದರಲ್ಲಿ ಕೇವಲ 1 ಅರ್ಧಶತಕ ಸೇರಿದೆ. ನಿನ್ನೆ ಪಂಜಾಬ್​ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್​, ತಾವು ಎದುರಿಸಿದ 14 ಎಸೆತಗಳಲ್ಲಿ 1 ಸಿಕ್ಸರ್​, 2 ಬೌಂಡರಿ ಸೇರಿದಂತೆ 20ರನ್​​ಗಳಿಕೆ ಮಾಡಿದರು. ಆದರೆ, ರಬಾಡಾ ಎಸೆದ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿ, ನಿರಾಶೆ ಮೂಡಿಸಿದರು.

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಪ್ಲೇ-ಆಫ್​ ರೇಸ್​​ಗೆ ಲಗ್ಗೆ ಹಾಕಬೇಕಾದರೆ, ಮೇ 19ರಂದು ಗುಜರಾತ್ ಟೈಟನ್ಸ್​ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾಗಿದೆ. ಟೂರ್ನಿಯಲ್ಲಿ ಆರ್​​ಸಿಬಿ ಈವರೆಗೆ 13 ಪಂದ್ಯಗಳ ಪೈಕಿ 7ರಲ್ಲಿ ಗೆಲುವು, 6ರಲ್ಲಿ ಸೋಲು ಕಂಡು 14 ಪಾಯಿಂಟ್​​​ಗಳೊಂದಿಗೆ 4ನೇ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.