ETV Bharat / sports

ಐಪಿಎಲ್ ಫೈನಲ್ ಪಂದ್ಯ ಅರ್ಧ ತಾಸು ವಿಳಂಬ.. 8 ಗಂಟೆಗೆ ಆರಂಭಿಸಲು ನಿರ್ಧಾರ

author img

By

Published : May 19, 2022, 8:17 PM IST

ಐಪಿಎಲ್​ನಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲು ನಿರ್ಧಾರ ಕೈಗೊಂಡಿರುವ ಕಾರಣ ಈ ಸಲದ ಫೈನಲ್ ಪಂದ್ಯ ಅರ್ಧಗಂಟೆ ತಡವಾಗಿ ಆರಂಭಗೊಳ್ಳಲಿದೆ.

IPL 2022 Final
IPL 2022 Final

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯವನ್ನ ಅರ್ಧ ತಾಸು ವಿಳಂಬ ಮಾಡಿ, 8 ಗಂಟೆಗೆ ಆರಂಭಿಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧಾರ ಕೈಗೊಂಡಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಮೊದಲು ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದರಲ್ಲಿ ಬಾಲಿವುಡ್​ನ ವಿವಿಧ ತಾರೆಯರು ಭಾಗಿಯಾಗಲಿದ್ದಾರೆ. ಹೀಗಾಗಿ, ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಪ್ರಸಕ್ತ ಸಾಲಿನ ಐಪಿಎಲ್ ಫೈನಲ್ ಪಂದ್ಯ ಮೇ. 29ರಂದು ಭಾನುವಾರ ಗುಜರಾತ್​ನ ಅಹಮದಾಬಾದ್​​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದೆ. ಸಮಾರೋಪ ಸಮಾರಂಭ ರಾತ್ರಿ 6:30ಕ್ಕೆ ಆರಂಭಗೊಳ್ಳಲಿದ್ದು, ಸುಮಾರು 50 ನಿಮಿಷಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಟಾಸ್​​ 7:30ಕ್ಕೆ ನಡೆಯಲಿದ್ದು, ಪಂದ್ಯ 8ಗಂಟೆಗೆ ಆರಂಭವಾಗಲಿದೆ.

ಇದನ್ನೂ ಓದಿ: IPL​ ಇತಿಹಾಸದಲ್ಲೇ ಈ ದಾಖಲೆ ಬರೆದ ಏಕೈಕ ಬೌಲರ್​: 1,400 ಡಾಟ್​ ಬಾಲ್​ ಹಾಕಿದ ಭುವನೇಶ್ವರ್!

2008 ಹಾಗೂ 2017ರಲ್ಲೂ ಬಿಸಿಸಿಐ ಇಂತಹ ನಿರ್ಧಾರ ಕೈಗೊಂಡಿತ್ತು. 2019ರಲ್ಲಿ ಪುಲ್ವಾಮಾ ದಾಳಿಯಲ್ಲಿ ಸಿಆರ್​ಪಿಎಫ್​ ಯೋಧರು ಹುತಾತ್ಮರಾದ ಕಾರಣ ಸಮಾರೋಪ ಸಮಾರಂಭ ಆಯೋಜನೆ ಮಾಡಿರಲಿಲ್ಲ. 2020ರಲ್ಲೂ ಕೋವಿಡ್ ಕಾರಣ, ಈ ನಿರ್ಧಾರದಿಂದ ಹೊರಗುಳಿಯಲಾಗಿತ್ತು.

ಈ ಹಿಂದೆ ಐಪಿಎಲ್ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಬಾಲಿವುಡ್ ತಾರೆಯರು ಭಾಗಿಯಾಗಿ ಮಿಂಚು ಹರಿಸುತ್ತಿದ್ದರು. ಇದರ ಮೇಲೆ ಸುಪ್ರೀಂಕೋರ್ಟ್​​ ಮೂರು ವರ್ಷ ಬ್ಯಾನ್ ಮಾಡಿದ್ದ ಕಾರಣ ಈ ಸಲವೂ ಉದ್ಘಾಟನಾ ಸಮಾರಂಭ ನಡೆದಿಲ್ಲ. ಆದರೆ, ಇದೀ ಸಮಾರೋಪ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.