ಐದು ವರ್ಷಗಳ ನಂತರ IPLನಲ್ಲಿ ಕೊಹ್ಲಿ ರನೌಟ್: ನೋಡಿ ಪರಾಗ್‌ Direct Hit!

author img

By

Published : Sep 30, 2021, 6:41 PM IST

RCB captain Virat kohli run out

ಇಂಡಿಯನ್​ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಆರ್​ಸಿಬಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ದಾಖಲೆಯ 5 ವರ್ಷಗಳ ನಂತರ ರನೌಟ್ ಬಲೆಗೆ ಬಿದ್ದಿದ್ದಾರೆ.

ದುಬೈ: ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ 6 ವಿಕೆಟ್​ಗಳ ಗೆಲುವು ದಾಖಲಿಸಿದ್ದು, ಪಾಯಿಂಟ್​ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರೆದಿದೆ. ಇದರ ಮಧ್ಯೆ ಆರ್​ಸಿಬಿ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ದಾಖಲೆಯ 5 ವರ್ಷಗಳ ನಂತರ ಐಪಿಎಲ್​​ನಲ್ಲಿ ರನೌಟ್​ ಬಲೆಗೆ ಬಿದ್ದಿದ್ದಾರೆ.

ಆರ್​ಆರ್​ ವಿರುದ್ಧದ ಪಂದ್ಯದಲ್ಲಿ 149 ರನ್​ಗಳ ಗುರಿ ಬೆನ್ನತ್ತಿದ್ದ ಆರ್​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ದೇವದತ್​ ಹಾಗೂ ವಿರಾಟ್​ 48 ರನ್​ಗಳ ಉತ್ತಮ ಜೊತೆಯಾಟ ನೀಡಿದರು. 25ರನ್​ಗಳಿಕೆ ಮಾಡಿದ್ದ ವೇಳೆ ವಿರಾಟ್​ ರನೌಟ್ ಆದರು.

ರಾಜಸ್ಥಾನ ರಾಯಲ್ಸ್​ ತಂಡದ ಯಂಗ್​ ಪ್ಲೇಯರ್​​​​ ರಿಯಾನ್​ ಪರಾಗ್​​​ ಅದ್ಭುತವಾಗಿ ರನೌಟ್ ಮಾಡುವ ಮೂಲಕ, ಕೊಹ್ಲಿ 5 ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ರೆಕಾರ್ಡ್​ಗೆ ತೆರೆ ಎಳೆದರು. ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ವಿರಾಟ್​ ಕೊಹ್ಲಿ ಕಳೆದ 5 ವರ್ಷಗಳಿಂದ ರನೌಟ್​​ ಆಗಿಲ್ಲ. ಈ ಹಿಂದೆ 2015ರಲ್ಲಿ ಅವರು ಕೊನೆಯ ಸಲ ರನೌಟ್​ ಬಲೆಗೆ ಬಿದ್ದಿದ್ದರು. ಇದಾದ ಬಳಿಕ ಅವರು ಮೈದಾನದಲ್ಲಿ ರನೌಟ್​ ಆಗಿರಲಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ಪರಾಗ್​ ಅವರ ಅದ್ಭುತ ಥ್ರೋಗೆ ವಿಕೆಟ್‌ ಒಪ್ಪಿಸಿದರು.

ಇದನ್ನೂ ಓದಿ: IPL ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ವಿವಾದ: ನಾನು ತಪ್ಪು ಮಾಡಿಲ್ಲ- ಅಶ್ವಿನ್ ಸ್ಪಷ್ಟನೆ

19 ವರ್ಷದ ರಿಯಾನ್ ಪರಾಗ್​ ಬ್ಯಾಟ್​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನವೇನೂ ಮೂಡಿ ಬರುತ್ತಿಲ್ಲ. ಆದರೆ ಅದ್ಭುತ ಕ್ಷೇತ್ರರಕ್ಷಣೆ ಮಾಡಿ, ಕೊಹ್ಲಿ ರನೌಟ್ ಮಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.