ETV Bharat / sports

ಐಪಿಎಲ್‌ 2021: ಗಾಯಕ್ವಾಡ್‌ ಶತಕ ವ್ಯರ್ಥ; ಚೆನ್ನೈ ವಿರುದ್ಧ ಆರ್‌ಆರ್‌ಗೆ 7 ವಿಕೆಟ್‌ಗಳ ಭರ್ಜರಿ ಗೆಲುವು

author img

By

Published : Oct 2, 2021, 11:41 PM IST

Updated : Oct 3, 2021, 10:17 AM IST

ಐಪಿಎಲ್‌ನ 14ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

IPL 2021: CSK vs RR; Rajasthan Royals win by 7 wickets
ಐಪಿಎಲ್‌ 2021: ಗಾಯಕ್ವಾಡ್‌ ಶತಕ ವ್ಯರ್ಥ; ಚೆನ್ನೈ ವಿರುದ್ಧ ಆರ್‌ಆರ್‌ಗೆ 7 ವಿಕೆಟ್‌ಗಳ ಭರ್ಜರಿ ಗೆಲುವು

ಅಬುಧಾಬಿ: ನಿರ್ಣಾಯಕ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಹಾಗೂ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಬಲಿಷ್ಠ ಸಿಎಸ್‌ಕೆ ವಿರುದ್ಧ ರಾಜಸ್ಥಾನ ರಾಯಲ್ಸ್‌ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್​ ಕಿಂಗ್ಸ್‌ ನೀಡಿದ 190 ರನ್‌ಗಳ ಬೃಹತ್​ ರನ್​ ಗುರಿಯನ್ನು ಆರ್​​ಆರ್‌ 17.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ತಲುಪಿತು.

ಆರಂಭಿಕನಾಗಿ ಕಣಕ್ಕಿಳಿದಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಸೂಪರ್‌ ಕಿಂಗ್ಸ್‌ನ ಅಗ್ರ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 21 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮೂರು ಸಿಕ್ಸರ್‌ ಸೇರಿ 50 ರನ್‌ ಗಳಿಸಿದರು. ಜೈಸ್ವಾಲ್‌ ವಿಕೆಟ್‌ ಬಳಿಕ ಬಂದ ಶಿವಂ ದುಬೆ ಸಿಡಿಲಬ್ಬರದ ಆಟದೊಂದಿಗೆ ಆರ್‌ ಆರ್‌ಗೆ ಗೆಲುವು ತಂದು ಕೊಟ್ಟರು. ದುಬೆ 42 ಎಸೆತಗಳಿಂದ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 64 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ಔಟಾಗದೆ ಉಳಿದರು.

ಆರಂಭಿಕ ಆಟಗಾರ ಎವಿನ್‌ ಲೆವಿಸ್‌ 12 ಎಸೆತ ಎದುರಿಸಿ 2 ಬೌಂಡರಿ 2 ಸಿಕ್ಸರ್‌ನೊಂದಿಗೆ 27 ರನ್‌ ಸಿಡಿಸಿದರು. ಸಂಜು ಸ್ಯಾಮನ್ಸ್‌ 28 ಹಾಗೂ ಔಟಾಗದೆ ಗ್ಲೆನ್ ಫಿಲಿಪ್ಸ್‌ 8 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್‌ ಸಹಿತ 14 ರನ್‌ ಗಳಿಸಿದರು. ಸಿಎಸ್‌ಕೆ ಪರ ಶಾರ್ದುಲ್‌ ಠಾಕೂರ್‌ 2 ಹಾಗೂ ಕೆಎಂ ಆಸೀಫ್‌ 1 ವಿಕೆಟ್‌ ಕಬಳಿಸಿದರು.

ಗಾಯಕ್ವಾಡ್‌ ಶತಕ ವ್ಯರ್ಥ

ಇದನ್ನೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಚೆನ್ನೈ ಪರ ಆರಂಭಿಕ ರುತುರಾಜ್‌ ಗಾಯಕ್ವಾಡ್‌ ಆಕರ್ಷಕ ಶತಕ ಸಿಡಿಸಿದರು. ಇನ್ನಿಂಗ್ಸ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ 100 ರನ್‌ಗಳನ್ನು ಪೂರೈಸಿದ ಗಾಯಕ್ವಾಡ್‌, ಒಟ್ಟು 60 ಎಸೆತಗಳಿಂದ 9 ಬೌಂಡರಿ, 5 ಸಿಕ್ಸರ್‌ ಸಹಿತ 101 ರನ್‌ಗಳಿಸಿದರು.

ಪಾಪ್‌ ಡುಪ್ಲೆಸಿಸ್‌ 25, ರೈನಾ 3, ಮೊಯಿನ್‌ ಅಲಿ 21, ರಾಯುಡು 2 ಹಾಗೂ ರವೀಂದ್ರ ಜಡೇಜಾ 15 ಎಸೆತಗಳಿಂದ 4 ಬೌಂಡರಿ 1 ಸಿಕ್ಸರ್‌ ಸಹಿತ 32 ರನ್‌ ಗಳಿದರು. ಆರ್​ಆರ್‌ ಪರ ರಾಹುಲ್‌ ತೇವಾಟಿಯಾ 3 ಹಾಗೂ ಚೇತನ್‌ ಸಕಾರಿಯಾ 1 ವಿಕೆಟ್‌ ಪಡೆದರು.

Last Updated : Oct 3, 2021, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.